'ಒಡೆಯ' ಬಿಡುಗಡೆಗೂ ಮೊದಲೇ ದರ್ಶನ್ ಮತ್ತೊಂದು ಚಿತ್ರಕ್ಕೆ ಅಡ್ವಾನ್ಸ್ ನೀಡಿದ ಸಂದೇಶ್

ನಟ ದರ್ಶನ್ 'ಒಡೆಯ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಸಂದೇಶ್ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾವಾಗಿದೆ. ಈ ಸಿನಿಮಾದ ನಂತರ ಇದೇ ನಿರ್ಮಾಣ ಸಂಸ್ಥೆಯ ಮತ್ತೊಂದು ಸಿನಿಮಾದಲ್ಲಿ ದರ್ಶನ್ ನಟಿಸುತ್ತಿದ್ದಾರೆ.

ಈ ವಿಷಯವನ್ನು ನಿರ್ಮಾಪಕ ಸಂದೇಶ್ ತಿಳಿಸಿದ್ದಾರೆ. 'ಒಡೆಯ' ಸಿನಿಮಾ ಬಿಡುಗಡೆಗೂ ಮೊದಲೇ ತಮ್ಮ ಮುಂದಿನ ಸಿನಿಮಾದಲ್ಲಿ ನಟಿಸಲು ದರ್ಶನ್ ರಿಗೆ ಮುಂಗಡ ಹಣವನ್ನು ನೀಡಲಾಗಿದೆಯಂತೆ. ಅಡ್ವಾನ್ಸ್ ನೀಡಿ ತಮ್ಮ ಬ್ಯಾನರ್ ನ ಮತ್ತೊಂದು ಸಿನಿಮಾಗೆ ಬುಕ್ ಮಾಡಿಕೊಂಡಿದ್ದಾರೆ.

'ಪ್ರಿನ್ಸ್' ಸಿನಿಮಾದ ಮೂಲಕ ಮೊದಲ ಬಾರಿಗೆ ದರ್ಶನ್ ಸಿನಿಮಾಗೆ ಸಂದೇಶ್ ನಾಗರಾಜ್ ಬಂಡವಾಳ ಹಾಕಿದರು. ಆ ನಂತರ 'ಮಿಸ್ಟರ್ ಐರಾವತ' ಚಿತ್ರ ನಿರ್ಮಾಣ ಮಾಡಿದ್ದರು. ಇದೀಗ 'ಒಡೆಯ' ಇದೇ ಕಾಂಬಿನೇಶನ್ ನಲ್ಲಿ ಬರುತ್ತಿದೆ.

Sandesh Productions Will Be Producing Another Movie To Darshan

'ಒಡೆಯ' ಸಿನಿಮಾದ ನಂತರ 'ಗಂಡುಗಲಿ ಮದಕರಿ ನಾಯಕ' ಹಾಗೂ 'ರಾಬರ್ಟ್' ಸಿನಿಮಾಗಳಲ್ಲಿ ದರ್ಶನ್ ಬ್ಯುಸಿ ಇದ್ದಾರೆ. ಈ ಸಿನಿಮಾಗಳ ನಂತರ ಸಂದೇಶ್ ಪ್ರೊಡಕ್ಷನ್ಸ್ ಸಿನಿಮಾ ಶುರು ಆಗಬಹುದು.

ಅಂದಹಾಗೆ, ದರ್ಶನ್ ಅಭಿನಯದ 'ಒಡೆಯ' ಸಿನಿಮಾ ಡಿಸೆಂಬರ್ 12 ರಂದು ಬಿಡುಗಡೆ ಆಗುತ್ತಿದೆ. ಎಂ ಡಿ ಶ್ರೀಧರ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಸನಾ ತಿಮ್ಮಯ್ಯ ನಾಯಕಿ ಆಗಿದ್ದಾರೆ.

More from Filmibeat

English summary
Sandesh Productions will be producing another movie to actor Darshan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X