For Quick Alerts
  ALLOW NOTIFICATIONS  
  For Daily Alerts

  'ಒಡೆಯ' ಬಿಡುಗಡೆಗೂ ಮೊದಲೇ ದರ್ಶನ್ ಮತ್ತೊಂದು ಚಿತ್ರಕ್ಕೆ ಅಡ್ವಾನ್ಸ್ ನೀಡಿದ ಸಂದೇಶ್

  |

  ನಟ ದರ್ಶನ್ 'ಒಡೆಯ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಸಂದೇಶ್ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾವಾಗಿದೆ. ಈ ಸಿನಿಮಾದ ನಂತರ ಇದೇ ನಿರ್ಮಾಣ ಸಂಸ್ಥೆಯ ಮತ್ತೊಂದು ಸಿನಿಮಾದಲ್ಲಿ ದರ್ಶನ್ ನಟಿಸುತ್ತಿದ್ದಾರೆ.

  ಈ ವಿಷಯವನ್ನು ನಿರ್ಮಾಪಕ ಸಂದೇಶ್ ತಿಳಿಸಿದ್ದಾರೆ. 'ಒಡೆಯ' ಸಿನಿಮಾ ಬಿಡುಗಡೆಗೂ ಮೊದಲೇ ತಮ್ಮ ಮುಂದಿನ ಸಿನಿಮಾದಲ್ಲಿ ನಟಿಸಲು ದರ್ಶನ್ ರಿಗೆ ಮುಂಗಡ ಹಣವನ್ನು ನೀಡಲಾಗಿದೆಯಂತೆ. ಅಡ್ವಾನ್ಸ್ ನೀಡಿ ತಮ್ಮ ಬ್ಯಾನರ್ ನ ಮತ್ತೊಂದು ಸಿನಿಮಾಗೆ ಬುಕ್ ಮಾಡಿಕೊಂಡಿದ್ದಾರೆ.

  ಮಕ್ಕಳಿಗೂ ಕೇಳಿರದ ಸಹಾಯವನ್ನು 'ಒಡೆಯ' ನಿರ್ಮಾಪಕರಿಗೆ ಕೇಳಿದರು ದರ್ಶನ್ ತಾಯಿಮಕ್ಕಳಿಗೂ ಕೇಳಿರದ ಸಹಾಯವನ್ನು 'ಒಡೆಯ' ನಿರ್ಮಾಪಕರಿಗೆ ಕೇಳಿದರು ದರ್ಶನ್ ತಾಯಿ

  'ಪ್ರಿನ್ಸ್' ಸಿನಿಮಾದ ಮೂಲಕ ಮೊದಲ ಬಾರಿಗೆ ದರ್ಶನ್ ಸಿನಿಮಾಗೆ ಸಂದೇಶ್ ನಾಗರಾಜ್ ಬಂಡವಾಳ ಹಾಕಿದರು. ಆ ನಂತರ 'ಮಿಸ್ಟರ್ ಐರಾವತ' ಚಿತ್ರ ನಿರ್ಮಾಣ ಮಾಡಿದ್ದರು. ಇದೀಗ 'ಒಡೆಯ' ಇದೇ ಕಾಂಬಿನೇಶನ್ ನಲ್ಲಿ ಬರುತ್ತಿದೆ.

  'ಒಡೆಯ' ಸಿನಿಮಾದ ನಂತರ 'ಗಂಡುಗಲಿ ಮದಕರಿ ನಾಯಕ' ಹಾಗೂ 'ರಾಬರ್ಟ್' ಸಿನಿಮಾಗಳಲ್ಲಿ ದರ್ಶನ್ ಬ್ಯುಸಿ ಇದ್ದಾರೆ. ಈ ಸಿನಿಮಾಗಳ ನಂತರ ಸಂದೇಶ್ ಪ್ರೊಡಕ್ಷನ್ಸ್ ಸಿನಿಮಾ ಶುರು ಆಗಬಹುದು.

  ''ಹ್ಯಾಟ್ರಿಕ್ ಹೀರೋ ಒಬ್ರೆ ಅದು ಶಿವರಾಜ್ ಕುಮಾರ್''- ದರ್ಶನ್''ಹ್ಯಾಟ್ರಿಕ್ ಹೀರೋ ಒಬ್ರೆ ಅದು ಶಿವರಾಜ್ ಕುಮಾರ್''- ದರ್ಶನ್

  ಅಂದಹಾಗೆ, ದರ್ಶನ್ ಅಭಿನಯದ 'ಒಡೆಯ' ಸಿನಿಮಾ ಡಿಸೆಂಬರ್ 12 ರಂದು ಬಿಡುಗಡೆ ಆಗುತ್ತಿದೆ. ಎಂ ಡಿ ಶ್ರೀಧರ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಸನಾ ತಿಮ್ಮಯ್ಯ ನಾಯಕಿ ಆಗಿದ್ದಾರೆ.

  English summary
  Sandesh Productions will be producing another movie to actor Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X