»   » ಸ್ಯಾಂಡಲ್ ವುಡ್ ನ ಸಂಗೀತ ಫುಲ್ ಬ್ಯುಸಿ

ಸ್ಯಾಂಡಲ್ ವುಡ್ ನ ಸಂಗೀತ ಫುಲ್ ಬ್ಯುಸಿ

Posted By:
Subscribe to Filmibeat Kannada

'ಎರಡನೆ ಸಲ' ಸಿನಿಮಾ ಹೆಸರು ಕೇಳಿದ ತಕ್ಷಣ ಎಲ್ಲರಿಗೂ ನೆನಪಾಗುವುದು ನಟಿ ಸಂಗೀತ ಭಟ್. ಸಂಗೀತ ಭಟ್ ಈ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದರು ಕನ್ನಡ ಸಿನಿಮಾ ಪ್ರೇಕ್ಷಕರು ಸಂಗೀತ ಅವ್ರಿಗೆ ಫುಲ್ ಮಾರ್ಕ್ ಕೊಟ್ಟಿದ್ದು ಮಾತ್ರ ಎರಡನೇ ಸಲ ಚಿತ್ರದಲ್ಲಿ. ಸಂಗೀತ ಅಭಿನಯಕ್ಕೆ ಸೌಂದರ್ಯಕ್ಕೆ ಫುಲ್ ಬೋಲ್ಡ್ ಆಗಿದ್ದು ಪ್ರೇಕ್ಷಕರು ಮಾತ್ರವಲ್ಲ ಸಿನಿಮಾಮಂದಿ ಕೂಡ.

ಆದ್ದರಿಂದಲೇ ಸಂಗೀತ್ ಭಟ್ ಅವರಿಗೆ ಕೈ ತುಂಬಾ ಅವಕಾಶಗಳು ಸಿಕ್ಕಿತ್ತು. ಒಂದೇ ತರಹದ ಸಿನಿಮಾಗಳಿಗೆ ನೋ ಎಂದ ಈಕೆ ಈಗ ಸಾಲು ಸಾಲು ವಿಭಿನ್ನ ಚಿತ್ರಗಳಲ್ಲಿ ಅಭಿನಯ ಮಾಡುತ್ತಿದ್ದಾರೆ. ಎರಡನೇ ಸಲದ ನಂತರ ಸಂಗೀತ ಅಭಿನಯದ ಮರತೆ ಹೋದೆನು ಹಾಡನ್ನು ನೋಡಿ ಕನ್ನಡ ಸಿನಿಪ್ರಿಯರು ಮಾರು ಹೋಗಿದ್ದರು.

Sangeeta Bhat is acting in four kannada films

ಹೊಸ ಕಾರ್ ಖರೀದಿಸಿದ ಸ್ಯಾಂಡಲ್ ವುಡ್ ನಟಿ ಸಂಗೀತಾ ಭಟ್

ಸದ್ಯ ಸಂಗೀತ ಭಟ್ 'ಅನುಕ್ತ' , 'ಅಳಿದು ಉಳಿದವರು' ಕಿಸ್ಮತ್ ಚಿತ್ರಗಳ ಜೊತೆಯಲ್ಲಿ ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ಅಭಿನಯದ ಸಿನಿಮಾ ಹಾಗೂ ಚಿರಂಜೀವಿ ಸರ್ಜಾ ಅಭಿನಯದ ಹೆಸರಿಡದ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ. ಅಭಿನಯದ ಜೊತೆಗೆ ಇಂಪಾಗಿರುವ ಧ್ವನಿ ಸಂಗೀತ ಭಟ್ ಅವರ ಪ್ಲಸ್ ಪಾಯಿಂಟ್.

Sangeeta Bhat is acting in four kannada films

ಕನ್ನಡ ಸಿನಿಮಾರಂಗಕ್ಕೆ ಹಾಗೂ ಪಕ್ಕಾ ಕನ್ನಡದ ನೆಟಿವಿಟಿಗೆ ಮ್ಯಾಚ್ ಆಗುವ ಸಂಗೀತ ಭಟ್ ಉತ್ತಮ ಪಾತ್ರಗಳನ್ನ ನೀರೀಕ್ಷೆ ಮಾಡುತ್ತಾ ಉತ್ತಮ ಸಿನಿಮಾಗಳನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿರುವ ಸಿನಿಮಾಗಳು ಶೀಘ್ರದಲ್ಲೇ ಬಿಡುಗಡೆ ಆಗಲಿವೆ.

English summary
Kannada actress Sangeeta Bhat is acting in four films. currently sangeetha's Anuktha, Alidu ulidavaru movie ready to release. Sangeetha Bhat is acting alongside Chiranjeevi Sarja.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X