ತಮಿಳು ನಟ ಕೊಟ್ಟ ಕಾಟವನ್ನ ಬಿಚ್ಚಿಟ್ಟ ಸಂಗೀತಾ ಭಟ್
Metoo ಅಭಿಯಾನಕ್ಕೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದ್ದು, ಬಾಲಿವುಡ್ ನಂತರ ಈಗ ಕನ್ನಡದಲ್ಲಿ ಒಬ್ಬೊಬ್ಬರೇ ನಾಯಕಿಯರು ಮಾತನಾಡುತ್ತಿದ್ದಾರೆ. ಸದ್ಯ ಸಂಗೀತಾ ಭಟ್ ಈ ಬಗ್ಗೆ ಮೌನ ಮುರಿದಿದ್ದು, ತಾವು ಅನುಭವಿಸಿದ್ದ ಘಟನೆಗಳನ್ನ ಬಗ್ಗೆ ನಾಲ್ಕೈದು ಪುಟಗಳಲ್ಲಿ ಬರೆದುಕೊಂಡಿದ್ದಾರೆ.
ಹದಿಹರೆಯದ ವಯಸ್ಸಿನಿಂದಲೇ ಕಿರುಕುಳಕ್ಕೆ ಒಳಗಾಗಿರುವುದನ್ನ ಬಹಿರಂಗಪಡಿಸಿರುವ ನಟಿ, ಹಲವು ನಟ, ನಿರ್ದೇಶಕ, ಹಾಗೂ ನಿರ್ಮಾಪಕರ ಕೆಟ್ಟ ಮುಖವನ್ನ ಪರಿಚಯಿಸಿದ್ದಾರೆ.
ಈ ಸಮಸ್ಯೆಯಿಂದಲೇ ಸಂಗೀತಾ ಭಟ್ ಅಭಿನಯದ ಅನೇಕ ಚಿತ್ರಗಳು ಬಿಡುಗಡೆಯಾಗಿಲ್ಲ. ಸರಿಯಾಗಿ ಸಂಭಾವನೆ ಸಿಕ್ಕಿಲ್ಲ ಎಂಬ ನೋವನ್ನ ಕೂಡ ಹೊರಹಾಕಿದ್ದಾರೆ. ಇದರಲ್ಲಿ ಓರ್ವ ತಮಿಳು ನಟ ಸಂಗೀತಾ ಭಟ್ ಜೊತೆ ನಡೆದುಕೊಂಡ ರೀತಿ ತೀರಾ ಅಸಭ್ಯವಾಗಿದ್ದು, ಆ ಘಟನೆಯನ್ನ ಬೇಸರದಿಂದ ಹೇಳಿಕೊಂಡಿದ್ದಾರೆ. ಯಾರದು, ಮುಂದೆ ಓದಿ.....

2016ರಲ್ಲಿ ನಡೆದ ಘಟನೆ
2016ರಲ್ಲಿ ಸಂಗೀತಾ ಭಟ್ ಒಂದು ತಮಿಳು ಚಿತ್ರಕ್ಕೆ ಸಹಿ ಮಾಡಿದ್ದರು. ಆ ಚಿತ್ರದ ನಾಯಕ, ಆಗ ಟಿವಿ ರಂಗದಲ್ಲಿ ದೊಡ್ಡ ಹೆಸರು ಮಾಡಿದ್ದ ಖ್ಯಾತ ಹಾಸ್ಯ ನಟ. ಶೂಟಿಂಗ್ ಆರಂಭದಿಂದಲೂ ಆ ನಟ ಸಂಗೀತಾ ಭಟ್ ಅವರ ಬಳಿ ಕೀಳು ಚರ್ಚೆಯನ್ನೇ ಮಾಡುತ್ತಿದ್ದ. ಆದ್ರೂ, ಇದನ್ನ ನಗುನಗುತ್ತಲೇ ಅವಾಯ್ಡ್ ಮಾಡುತ್ತಿದ್ದರು ಸಂಗೀತಾ ಭಟ್. ಈ ಬಗ್ಗೆ ಸ್ವತಃ ಸಂಗೀತಾ ಅವರೇ ಹೇಳಿರುವುದು ನೋಡಿ....

ಬೈಕ್ ನಲ್ಲಿ ಹೋಗುವ ಸನ್ನಿವೇಶ
'ಒಂದು ದಿನ ಸೀನ್ ವೊಂದನ್ನ ಚಿತ್ರೀಕರಿಸುತ್ತಿದ್ದಾಗ ಬೈಕ್ ಮೇಲೆ ನಾನು ಆತನ ಹಿಂದೆ ಕುಳಿತುಕೊಂಡಿದ್ದೆ. ಸಡನ್ ಆಗಿ ಬೈಕ್ ಬ್ರೇಕ್ ಹಾಕಿದ ಆ ನಟ, ನನ್ನ ಒಳ ಉಡುಪಿನ ಬಗ್ಗೆ ಕಾಮೆಂಟ್ ಮಾಡಿದ್ದ. ಅಷ್ಟೇ ಅಲ್ಲದೇ ಅಶ್ಲೀಲವಾಗಿ ಮಾತನಾಡಿದ್ದ' - ಸಂಗೀತಾ ಭಟ್

ಕಿಸ್ಸಿಂಗ್ ಸೀನ್ ಬೇಡಿಕೆಯಿಟ್ಟ
'ಚಿತ್ರ ರೋಮ್ಯಾಂಟಿಕ್ ಆಗಿತ್ತು. ಸ್ಕ್ರಿಪ್ಟ್ ಅನುಸಾರ ಕಿಸ್ಸಿಂಗ್ ಸೀನ್ ಬೇಕಿತ್ತು. ನಟಿಯಾಗಿ ನನ್ನ ವೃತ್ತಿಧರ್ಮದಂತೆ ನಾನು ಒಪ್ಪಿಕೊಂಡಿದ್ದೆ. ಇದು ಕ್ಲೈಮ್ಯಾಕ್ಸ್ ನ ಮುಖ್ಯ ಭಾಗವಾಗಿತ್ತು. ಆದ್ರೆ, ಸೆಟ್ ನಲ್ಲಿ ಪ್ರತಿ ಬಾರಿ ರೊಮ್ಯಾಂಟಿಕ್ ಸೀನ್ ಮಾಡುವಾದ ಆ ನಟ ನನ್ನ ಮೇಲೆ ಬೀಳುತ್ತಿದ್ದ. ಅಲ್ಲದೇ ಇಡೀ ಚಿತ್ರತಂಡದ ಮುಂದೆ ಸ್ಲ್ರಿಪ್ಟ್ ನಲ್ಲಿ ಮತ್ತಷ್ಟು ಕಿಸ್ಸಿಂಗ್ ದೃಶ್ಯಗಳನ್ನ ಸೇರಿಸಿ ಎಂದು ನಿರ್ದೇಶಕರ ಮೇಲೆ ಒತ್ತಾಯ ಮಾಡುತ್ತದ್ದ' - ಸಂಗೀತಾ ಭಟ್
ಫೇಸ್ ಬುಕ್ ನಲ್ಲಿ ಕಿಡಿಗೇಡಿಗಳಿಂದ ಕಾಟ: ಗುಡುಗಿದ ನಟಿ ಸಂಗೀತಾ ಭಟ್

ಅದನ್ನೇ ಪ್ರಚಾರ ಮಾಡಿಕೊಂಡ್ರು
ಇದರ ಬಗ್ಗೆ ನಾನು ನಿರ್ದೇಶಕ ಬಳಿ ಮಾತನಾಡಿದ್ದೆ. ಅನಾವಶ್ಯಕವಾಗಿ ನನಗೆ ಇಂತಹ ಸೀನ್ ಮಾಡಲು ಮುಜುಗರವಾಗುತ್ತೆ ಎಂದು ಆತನ ಮುಂದೆ ಕಣ್ಣೀರು ಹಾಕಿದೆ. ಇದಕ್ಕೆ ನಿರ್ದೇಶಕರು ನನ್ನ ಬಳಿ ಕ್ಷಮೆ ಯಾಚಿಸಿದ್ರು. ಆದ್ರೆ, ಹೀರೋನೆ ಡಿಸಿಶನ್ ಮೇಖರ್ ಆಗಿದ್ದರಿಂದ ತಮ್ಮ ಅಸಹಾಕತೆಯನ್ನೂ ವ್ಯಕ್ತಪಡಿಸಿದ್ರು. ಅಷ್ಟೇ ಅಲ್ಲ ನಂತ್ರ ಆ ಚಿತ್ರತಂಡದವರು ಈ ಚಿತ್ರದಲ್ಲಿ ಹತ್ತು ಕಿಸ್ಸಿಂಗ್ ಸೀನ್ ಇದೆ ಪ್ರಚಾರ ಮಾಡಿದ್ರು.

ಇದಕ್ಕೆ ನನ್ನ ಬಳಿ ಸಾಕ್ಷಿಯಿಲ್ಲ
ಹೀಗೆ ತನ್ನ ಜೀವನದಲ್ಲಿ ಎದುರಿಸಿದ ಘಟನೆಗಳನ್ನ ಹಂಚಿಕೊಂಡಿರುವ ನಟಿ, ಇದ್ಯಾವುದಕ್ಕೂ ನನ್ನ ಬಳಿ ಸಾಕ್ಷಿ ಇಲ್ಲ. ಮತ್ತು ಅವರ ವಿರುದ್ಧ ನಾನು ಪ್ರತಿಭಟನೆ ಮಾಡೋದಿಲ್ಲ. ಒಂದಲ್ಲ ಒಂದು ದಿನ ಪಶ್ಚಾತ್ತಾಪ ಕಾಡುತ್ತೆ. ಇದರಿಂದ ಅನೇಕರು ಎಚ್ಚೆತ್ತುಕೊಂಡ್ರೆ ಅಷ್ಟೇ ಸಾಕು' ಎಂದು ಸಂಗೀತಾ ಭಟ್ ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











