ಸಂಗೀತಾ ಭಟ್ ಚಿತ್ರರಂಗ ಬಿಡಲು 'ಮೀಟೂ' ಕಾರಣವಲ್ಲ.! ಮತ್ತೇನು.?

Recommended Video

ನಟ ನಿರ್ದೇಶಕ ಗುರುಪ್ರಸಾದ್ ಹೇಳಿಕೆಗೆ ನಟಿ ಸಂಗೀತಾ ಭಟ್ ಪ್ರತಿಕ್ರಿಯೆ | FILMIBEAT KANNADA

ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿರುವ 'ಮೀಟೂ ಅಭಿಯಾನದ ಪರಿಣಾಮ ನಟಿ ಸಂಗೀತಾ ಭಟ್ ಚಿತ್ರರಂಗವನ್ನೇ ಬಿಟ್ಟು ದೂರವಾದರು ಎಂಬ ಮಾತಿದೆ. ಆದ್ರೆ, ಸಂಗೀತಾ ಭಟ್ ಇಂಡಸ್ಟ್ರಿ ಬಿಡಲು ಮೀಟೂ ಕಾರಣವಲ್ಲ ಎಂಬುದರ ಬಗ್ಗೆ ಪಕ್ಕಾ ಮಾಹಿತಿ ಸಿಕ್ಕಿದೆ.

ಬಾಲಿವುಡ್ ನಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಮೀಟೂ ತದ ನಂತರ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿತ್ತು. ಆರಂಭದಲ್ಲಿ ನಟಿ ಸಂಗೀತಾ ಭಟ್, ತಮ್ಮ ಸಿನಿಜೀವನದಲ್ಲಿ ತಮ್ಮ ಮೇಲಾದ ಲೈಂಗಿಕ ಕಿರುಕುಳವನ್ನ ಟ್ವಿಟ್ಟರ್ ನಲ್ಲಿ ಬಹಿರಂಗಪಡಿಸಿಕೊಂಡಿದ್ದರು.

ಕೆಲವು ಸ್ಟಾರ್ ನಟರು, ಸ್ಟಾರ್ ನಿರ್ದೇಶಕರಿಂದ ನಾನು ಕಿರುಕುಳಕ್ಕೆ ಒಳಗಾಗಿದ್ದೆ ಎಂದು ಬರೆದುಕೊಂಡಿದ್ದರು. ಆದ್ರೆ, ಎಲ್ಲಿಯೂ ಯಾರೊಬ್ಬರ ಹೆಸರನ್ನ ಸೂಚಿಸಿರಲಿಲ್ಲ. ಬಟ್, ಸಂಗೀತಾ ಭಟ್ ಹೇಳಿದ್ದ ಹೇಳಿಕೆಗಳ ಅನುಸಾರ ಕೆಲವರು ಹೆಸರು ಸಾಮಾಜಿಕ ಜಾಲಜಾಣದಲ್ಲಿ ಪ್ರಸ್ತಾಪವಾಯಿತು. ಇದೆಲ್ಲದರಿಂದ ಬೇಸತ್ತ ಸಂಗೀತಾ ಇಂಡಸ್ಟ್ರಿ ಕ್ವಿಟ್ ಮಾಡಿದ್ದಾರೆ ಎನ್ನಲಾಯಿತು. ಈ ಬಗ್ಗೆ ಸಂಗೀತಾ ಹೇಳೋದೆ ಬೇರೆ. ಏನಂದ್ರು.? ಮುಂದೆ ಓದಿ....

ಶೈಕ್ಷಣಿಕ ಕಾರಣದಿಂದ ಇಂಡಸ್ಟ್ರಿ ಕ್ವಿಟ್.!

ಶೈಕ್ಷಣಿಕ ಕಾರಣದಿಂದ ಇಂಡಸ್ಟ್ರಿ ಕ್ವಿಟ್.!

ಮೀಟೂ ಅಭಿಯಾನದಿಂದ ಆದ ಬೆಳವಣಿಗೆಗಳಿಂದ ಸಂಗೀತಾ ಭಟ್ ಕನ್ನಡ ಚಿತ್ರರಂಗವನ್ನ ಬಿಟ್ಟಿಲ್ಲ. ಅವರು ಉನ್ನತ ಶಿಕ್ಷಣ ಮುಂದುವರಿಸಲು ನಿರ್ಧರಿಸಿದ್ದು, ಅದಕ್ಕಾಗಿ ಚಿತ್ರರಂಗ ತೊರೆಯಲು ಮುಂದಾಗಿದ್ದಾರೆ. ಅವರೇ ಹೇಳುವ ಪ್ರಕಾರ ಕಳೆದ ಡಿಸೆಂಬರ್ ತಿಂಗಳಲ್ಲೆ ಸಂಗೀತಾ ಭಟ್ ಸಿನಿಜಗತ್ತಿನಿಂದ ದೂರವಿದ್ದಾರೆ. ಮೀಟೂ ಬಂದಿದ್ದು ಈಗ, ನಾನು ಇಂಡಸ್ಟ್ರಿಗೆ ಬಿಟ್ಟು ತುಂಬಾ ದಿನ ಆಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಂಬಳ ಕಡಿಮೆ ಇತ್ತು.!

ಸಂಬಳ ಕಡಿಮೆ ಇತ್ತು.!

ಇನ್ನು ಸಿನಿಮಾದಿಂದ ಸಂಗೀತಾ ಭಟ್ ಅವರಿಗೆ ಸಿಗುತ್ತಿದೆ ಸಂಭಾವನೆ ತುಂಬಾ ಕಡಿಮೆ ಇದ್ದ ಕಾರಣ, ಇದೂ ಕೂಡ ಅವರಿಗೆ ಬೇಸರ ತರಿಸಿದೆಯಂತೆ. ಹಾಗಾಗಿ, ಚಿತ್ರರಂಗ ಸದ್ಯಕ್ಕೆ ಬೇಡವೆಂದು ತೀರ್ಮಾನಿಸಿ, ಉನ್ನತ ಶಿಕ್ಷಣ ಮುಂದುವರಿಸಲು ಸಿದ್ಧವಾಗಿದ್ದಾರೆ.

ಯಾವುದೇ ದೂರು ನೀಡಿಲ್ಲ

ಯಾವುದೇ ದೂರು ನೀಡಿಲ್ಲ

ನಿರ್ದೇಶಕ ಗುರು ಪ್ರಸಾದ್ ಅವರು ಹೇಳಿಕೆ ನೀಡಿದ್ದರ ವಿರುದ್ಧ ಸಂಗೀತಾ ಭಟ್ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು ಎನ್ನಲಾಯಿತು. ಬಟ್, ''ಈ ಬಗ್ಗೆ ನಾನು ಯಾವುದೇ ದೂರು ನೀಡಿಲ್ಲ. ನಮ್ಮ ಚಿತ್ರರಂಗ ನಮ್ಮ ಕುಟುಂಬವಿದ್ದಂತೆ. ನಮ್ಮ ಕುಟುಂಬದ ಗೌರವವನ್ನ ಬೀದಿಗೆ ತರುವುದು ಇಷ್ಟವಿಲ್ಲ. ಸದ್ಯಕ್ಕೆ ನಾನು ಇಂಡಸ್ಟ್ರಿಯಿಂದ ದೂರವಿದ್ದೇನೆ ಎಂದು ಹಿರಿಯರ ಗಮನಕ್ಕೆ ತಂದಿದ್ದೇನೆ ಅಷ್ಟೇ'' ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಮತ್ತೆ ಮಾಡ್ತೀನಿ, ಬಟ್......

ಮತ್ತೆ ಮಾಡ್ತೀನಿ, ಬಟ್......

''ಆಕ್ಟಿಂಗ್ ಎನ್ನುವುದನ್ನ ನಾನು ಬಿಡುವುದಿಲ್ಲ. ಸಿನಿಮಾ ಎಂಬುದು ನನಗೆ ಎಲ್ಲವೂ ಕೊಟ್ಟಿದೆ. ಸದ್ಯಕ್ಕೆ ಶಿಕ್ಷಣ ಮುಂದುವರಿಸುವು ಉದ್ದೇಶವಿರುವುದರಿಂದ ಬ್ರೇಕ್ ತೆಗೆದುಕೊಂಡಿದ್ದೇನೆ. ಮುಂದೆ ಯಾವಾಗಲಾದರೂ, ಒಳ್ಳೆ ಸ್ಕ್ರಿಪ್ಟ್ ಸಿಕ್ಕರೇ ನಾನು ಮತ್ತೆ ಬರಬಹುದು'' ಎಂದು ಕ್ಲಾರಿಟಿ ನೀಡಿದ್ದಾರೆ.

ಗುರು ಪ್ರಸಾದ್ ಬಗ್ಗೆ ನಾವು ಆರೋಪ ಮಾಡಿಲ್ಲ

ಗುರು ಪ್ರಸಾದ್ ಬಗ್ಗೆ ನಾವು ಆರೋಪ ಮಾಡಿಲ್ಲ

''ನಾನು ಎಲ್ಲಿಯೂ ನಿರ್ದೇಶಕ ಗುರು ಪ್ರಸಾದ್ ಅವರ ಬಗ್ಗೆ ಮಾತನಾಡಿಲ್ಲ. ಅವರ ಜೊತೆ ನಾನು ಸಿನಿಮಾ ಮಾಡಿದ್ದೇನೆ. ಎರಡು ವರ್ಷ ಅವರು ನನಗೆ ಅನ್ನ ಹಾಕಿದ್ದಾರೆ. ಅವರ ತಾಯಿಯನ್ನ ನಾನು ಅಜ್ಜಿ ಎಂದು ಕರೆಯುತ್ತಿದ್ದೆ. ಅವರು ನನಗೆ ತಂದೆ ಸಮಾನ. ಅವರನ್ನ ಮತ್ತು ಅವರ ಪ್ರತಿಭೆಯನ್ನ ನಾನು ಗೌರವಿಸುತ್ತೇನೆ'' ಎಂದು ಸಂಗೀತಾ ಭಟ್ ತಿಳಿಸಿದ್ದಾರೆ.

More from Filmibeat

English summary
Kannada actress sangeetha bhat has clarified about director guru prasad statement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X