ಒಂದೇ ಕುಟುಂಬದ ಇಬ್ಬರು ನಟರ 'ಕಾಮ ಪುರಾಣ' ಬಿಚ್ಚಿಟ್ಟ ಸಂಗೀತಾ ಭಟ್
'ಎರಡನೇ ಸಲ', 'ದಯವಿಟ್ಟು ಗಮನಿಸಿ' ಅಂತಹ ಚಿತ್ರಗಳು ಮೂಲಕ ಯುವರಸಿಕರ ಮನಸ್ಸು ಕದ್ದಿದ್ದ ನಟಿ ಸಂಗೀತಾ ಭಟ್, ಅದಾದ ಬಳಿಕ ಯಾವ ಚಿತ್ರದಲ್ಲಿ ಕಾಣಿಸಿಲ್ಲ. ಅದಕ್ಕೆ ಕಾರಣ ನೀಡಿದ್ದ ಸಂಗೀತಾ ಭಟ್, ಚಿತ್ರರಂಗದಲ್ಲಿ ತನಗೆ ಎದುರಾದ ಸಮಸ್ಯೆಗಳನ್ನು ಬಯಲು ಮಾಡಿದ್ದರು.
ಸಿನಿಮಾರಂಗದಲ್ಲಿ ಯಾರೂ ಹೇಗೆಲ್ಲಾ ಕಿರುಕುಳ ನೀಡಿದ್ರು ಎಂಬುದನ್ನ ಸಾರ್ವಜನಿಕವಾಗಿ ಹೇಳಿಕೊಂಡರು. ಯಾರ ಹೆಸರು ಹೇಳದೇ ಹೋದರು, ತನಗಾದ ಕೆಟ್ಟ ಅನುಭವ ಮತ್ಯಾರಿಗೂ ಆಗಬಾರದು ಎಂಬ ಉದ್ದೇಶದಿಂದ ಕೆಲವು ಕಹಿ ನೆನಪುಗಳನ್ನ ಬಿಚ್ಚಿಟ್ಟರು.
ಸಂಗೀತಾ ಭಟ್ ಬಳಿ ತಮಿಳು ನಟನೊಬ್ಬರು ಹೇಗೆ ಅಸಭ್ಯವಾಗಿ ನಡೆದುಕೊಂಡಿದ್ದ ಎಂದು ಕಳೆದ ಸ್ಟೋರಿಲ್ಲಿ ಹೇಳಲಾಗಿತ್ತು. ಇದೀಗ, ಅದರ ಮುಂದುವರೆದ ಅಧ್ಯಾಯದಲ್ಲಿ ಒಂದೇ ಕುಟುಂಬದ ಇಬ್ಬರು ನಟರು, ಸಂಗೀತಾ ಅವರನ್ನ ಕಾಮದ ದೃಷ್ಟಿಯಿಂದ ಹೇಗೆ ಬಳಸಿಕೊಳ್ಳಲು ಪ್ರಯತ್ನ ಪಟ್ಟಿದ್ದರು ಎಂದು ನೋಡಿ...ಮುಂದೆ ಓದಿ....

ಇನ್ಸ್ಟಾಗ್ರಾಮ್ ನಲ್ಲಿ ನಂಬರ್ ತೆಗೆದುಕೊಂಡ
'2017ರಲ್ಲಿ ನಾನು ಕನ್ನಡ ಸಿನಿಮಾವೊಂದಕ್ಕೆ ಸಹಿ ಮಾಡಿದೆ. (ಆ ಸಿನಿಮಾ ಅನಿವಾರ್ಯ ಕಾರಣಗಳಿಂದ ಒಂದೂವರೆ ವರ್ಷದಿಂದ ನಿಂತಿದೆ) ಇದು ತೆಲುಗಿನ ಹಿಟ್ ಸಿನಿಮಾದ ರೀಮೇಕ್. ಆ ಚಿತ್ರದ ಸ್ಟಾರ್ ಇನ್ಸ್ಟಾಗ್ರಾಮ್ ನಲ್ಲಿ ಮೆಸೆಜ್ ಮಾಡಿ, ನನ್ನ ಫೋನ್ ನಂಬರ್ ತೆಗೆದುಕೊಂಡಿದ್ದ. ನಮ್ಮಿಬ್ಬರ ಮಧ್ಯೆ ಪರಿಚಯ ಚೆನ್ನಾಗಿರಲಿ ಎಂದು ಮಾತನಾಡುತ್ತಿದ್ದೇವು' - ಸಂಗೀತಾ ಭಟ್

ಒಂದು ದಿನ ಫೋನ್ ಮಾಡಿ...
'ಒಂದು ದಿನ ಇದ್ದಕ್ಕಿಂದ್ದಂತೆ ಕಾಲ್ ಮಾಡಿದ ಆತ ಕನ್ನಡದಲ್ಲಿ 'ನಾನು ನಿಮ್ಮಲ್ಲಿ ಒಂದು ವಿಷ್ಯ ಕೇಳಲೇ.?' ನೀವು ವರ್ಜಿನ್ ಹೌದಾ.? ಎಂದು ಕೇಳಿದ. ಆ ಪ್ರಶ್ನೆಯಿಂದ ನಾನು ತಕ್ಷಣ ಶಾಕ್ ಗೆ ಒಳಗಾಗಿದ್ದೆ. ಜೊತೆಗೆ ಖಂಡಿಸಿದೆ. ಅದಕ್ಕೆ ಆ ನಟ ''ನನ್ನ ವರ್ಜಿನಿಟಿಯನ್ನ ಕಳೆಯಲು ಸಹಾಯ ಮಾಡುತ್ತೀರಾ ಅಂತ ಕೇಳಿದೆ' ಎಂದ.

ನಾನು ಬೇರೆ ರಿಲೇಶನ್ನಲ್ಲಿದ್ದೇನೆ ಎಂದೆ
'ಇದನ್ನ ಕೇಳಿದ ನಾನು ಸಮಾಧಾನವಾಗಿ ನನ್ನನ್ನು ನಾನು ನಿಯಂತ್ರಿಸಲು ನಿರ್ಧರಿಸಿದೆ. 'ನಾನು ಈಗಾಗಲೇ ಮತ್ತೊಬ್ಬರ ಜೊತೆ ಸಂಬಂಧದಲ್ಲಿ ಇದ್ದೇನೆ' ಎಂದು ಹೇಳಿದೆ. ಅದಕ್ಕೆ ಆ ನಟ ಸಡನ್ ಆಗಿ ಫೋನ್ ಕಟ್ ಮಾಡಿದ' - ಸಂಗೀತಾ ಭಟ್

ಇದು ಅವರ ಕುಟುಂಬದ ರಕ್ತದಲ್ಲಿದೆ
'ನನಗೆ ಅನಿಸುತ್ತೆ, ಇದು ಅವರ ಕುಟುಂಬದ ರಕ್ತದಲ್ಲೇ ಹಿರಿಯುತ್ತಿದೆ ಅಂತ. ಯಾಕಂದ್ರೆ, ಆ ನಟನ ಕುಟುಂಬದ ಮತ್ತೊಬ್ಬ ಸದಸ್ಯ (ಸ್ಟಾರ್ ನಟ) ವರ್ಷದ ಹಿಂದೆ ಆತನೊಂದಿಗೆ ಮಲುಗುವಂತೆ ಬೇಡಿಕೆಯಿಟ್ಟದ್ದ. ಇದಕ್ಕಾಗಿ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಹೋಟೆಲ್ ವೊಂದರಲ್ಲಿ ಭೇಟಿ ಮಾಡುವಂತೆ ಕೆಲವು ಮೆಸೆಜ್ ಮಾಡಿದ್ದ' - ಸಂಗೀತಾ ಭಟ್

ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ
'ನಾನು ಆ ನಟನ ಆಫರ್ ರಿಜೆಕ್ಟ್ ಮಾಡಿದ್ದಕ್ಕೆ ''ನೀನಗೇನಾದರೂ ಐಡಿಯಾ ಇದೆಯಾ, ಎಷ್ಟು ಜನ ನಟಿಯರು ನನ್ನ ಜೊತೆ ಮಲಗಿರಬಹುದು ಅಂತಾ. ನಾನು ಬರಿ ಮಿಸ್ ಕಾಲ್ ಕೊಟ್ರೆ ಸಾಕು, ಅವರೆಲ್ಲಾ ಓಡುತ್ತಾ ನನ್ನ ಬಳಿ ಬರ್ತಾರೆ ಅಂತ ಕೊಚ್ಚಿಕೊಂಡಿದ್ದ. ನಾನು ನನ್ನದೇ ವ್ಯಕ್ತಿತ್ವ ಹೊಂದಿದ್ದೇನೆ ಎಂದು ಎಂದು ಹೇಳಿ ಆತನನ್ನು ಬ್ಲ್ಯಾಕ್ ಮಾಡಿದೆ. ನಾನು ಆ ನಟನ ಚಿತ್ರಗಳನ್ನ ನೋಡುತ್ತಾ ಬೆಳೆದವಳು' ಎಂದು ಸಂಗೀತಾ ಭಟ್ ಹೇಳಿಕೊಂಡಿದ್ದಾರೆ.


Click it and Unblock the Notifications











