ಆ ನಿರ್ದೇಶಕನ ಮಂಚಕ್ಕೆ ಕಳುಹಿಸಲು ಸ್ಕೆಚ್ ಹಾಕಿದ್ಲು ಕೇಶ ವಿನ್ಯಾಸಕಿ: ಸಂಗೀತಾ ಭಟ್
ಕನ್ನಡ ಚಿತ್ರರಂಗದಲ್ಲಿ ಕಳೆದ ಹತ್ತು ವರ್ಷದಿಂದ ಕಿರುಕುಳ ಅನುಭವಿಸಿರುವ ನಟಿ ಸಂಗೀತಾ ಭಟ್ ಇತ್ತೀಚಿಗಷ್ಟೆ metoo ಅಭಿಯಾನದಲ್ಲಿ ತಮಗೆ ಎದುರಾಗಿದ್ದ ಕೆಟ್ಟ ಅನುಭವಗಳನ್ನ ಬಹಿರಂಗಪಡಿಸಿದ್ದರು.
ತಮಿಳು ನಟನೊಬ್ಬ ಚಿತ್ರೀಕರಣದ ವೇಳೆ ಹೇಗೆ ಅಸಭ್ಯವಾಗಿ ನಡೆದುಕೊಂಡಿದ್ದ.? ಮತ್ತು ಒಂದೇ ಕುಟುಂಬದ ಇಬ್ಬರು ಸ್ಟಾರ್ ನಟರು ಹೇಗೆ ಆಕೆಯನ್ನ ಮಂಚಕ್ಕೆ ಕರೆದಿದ್ದರು ಎಂಬುದನ್ನ ಈ ಹಿಂದಿನ ಸ್ಟೋರಿಗಳಲ್ಲಿ ಗಮನಿಸಲಾಗಿತ್ತು.
ಇದೀಗ, ಓರ್ವ ಮಹಿಳೆ ನಿರ್ದೇಶಕನ ಜೊತೆ ಸೇರಿ ಹೇಗೆ ಸಂಗೀತಾ ಭಟ್ ಗೆ ಕಿರುಕುಳ ನೀಡಿದ್ರು ಎಂಬುದನ್ನ ನೋಡೋಣ. ಸ್ವತಃ ಸಂಗೀತಾ ಭಟ್ ಅವರೇ ಈ ಘಟನೆ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದು, ಅಂದು ಏನಾಯ್ತು ಎಂಬುದನ್ನ ವಿವರಿಸಿದ್ದಾರೆ. ಮುಂದೆ ಓದಿ.....

ಮಹಿಳೆಯಿಂದ ಲೈಂಗಿಕ ದೌರ್ಜನ್ಯ
ಸಂಗೀತಾ ಭಟ್ ನಟಿಸುತ್ತಿದ್ದ ಸಿನಿಮಾದಲ್ಲಿ ಮಹಿಳೆ ಕೇಶವಿನ್ಯಾಸಕಿಯೊಬ್ಬರ ಲೈಂಗಿಕವಾಗಿ ಕಿರುಕುಳ ನೀಡಿದ್ರಂತೆ. ಇದನ್ನ ಖಂಡಿಸಿದ್ದಕ್ಕೆ ತನ್ನ ಮೇಲೆ ಬೇರೆಯದ್ದೇ ರೀತಿಯಲ್ಲಿ ಪ್ರತೀಕಾರ ತೀರಿಸಿಕೊಂಡಿದ್ದಳು ಎಂದು ಸಂಗೀತಾ ಭಟ್ ವಿವರಿಸಿದ್ದಾರೆ.

ಅಂದು ಹೋಟೆಲ್ ನಲ್ಲಿ ಏನಾಯ್ತು....
'2010ರಲ್ಲಿ ನಾನೊಂದು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದೆ. ನಾನು ಹೋಟೆಲ್ ವೊಂದರಲ್ಲಿ ವಿಶ್ರಾಂತಿ ಪಡೆಯುತ್ತಿರುವಾಗ, ಒಬ್ಬ ಕೇಶ ವಿನ್ಯಾಸಗಾರ್ತಿ, ಅದು ಒಬ್ಬ ಮಹಿಳೆ ನನ್ನನ್ನು ಎಲ್ಲಾ ಕಡೆ ಮುಟ್ಟಲು ಯತ್ನಿಸಿದಳು. ಅಲ್ಲದೇ ಬಟ್ಟೆಯೊಳಗೆ ಕೈಹಾಕಲು ಶುರು ಮಾಡಿದಳು. ನಾನು ಅದನ್ನ ವಿರೋಧಿಸಿ ನನ್ನ ಕೋಣೆಯೊಳಗೆ ಸೇರಿಕೊಂಡೆ. ನಂತರ ಆಕೆ ಕ್ಷಮೆಯಾಚಿಸಿದಳು' - ಸಂಗೀತಾ ಭಟ್

ಸೇಡು ತೀರಿಸಿಕೊಂಡ ಕೇಶ ವಿನ್ಯಾಸಕಿ
'ಆದ್ರೆ, ಬೇರೆ ರೀತಿಯಲ್ಲಿ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದಳು. ಹೀಗಾಗಿ, ದೊಡ್ಡ ನಿರ್ದೇಶಕನಿಗೆ ನನ್ನ ಹೆಸರನ್ನ ಸೂಚಿಸಿದಳು. ಚಿತ್ರದ ನಿರ್ದೇಶಕರೂ ಕೂಡ ಒಳ್ಳೆಯ ಹೆಸರು ಮಾಡಿದ್ರು. (ಇತ್ತೀಚಿಗಷ್ಟೆ ಕಾಸ್ಟಿಂಗ್ ಕೌಚ್ ನಲ್ಲಿ ಸುದ್ದಿಯಾಗಿದ್ದ ನಿರ್ದೇಶಕ) ನಿರ್ದೇಶಕ, ಕಥೆ, ಚಿತ್ರಕಥೆ ಹಾಗೂ ಪಾತ್ರದ ಬಗ್ಗೆ ಹೇಳಲು ತಾನು ಉಳಿದುಕೊಂಡಿದ್ದ ಹೊಟೆಲ್ ರೂಂ ನಂ 206ಕ್ಕೆ ಬರಲು ಹೇಳಿದ್ದ' - ಸಂಗೀತಾ ಭಟ್

ಆತನ ಮಗಳು ಕೂಡ ಹೀರೋಯಿನ್
'ಇದನ್ನ ನಾನು ಪ್ರಶ್ನಿಸಿದಾಗ, ಕೇಶವಿನ್ಯಾಸಕಿ ನಿನ್ನ ಬಗ್ಗೆ ಎಲ್ಲಾ ಹೇಳಿದ್ದಾಳೆ. ಮುಗ್ದಳಂತೆ ನಟಿಸಬೇಡ ಅಂತ ಉತ್ತರ ನೀಡಿದ್ದ. ಆತನ ಮಗಳು ಕೂಡ ಒಬ್ಬ ನಟಿ. ನನಗಿಸುವಂಯತೆ ಆಕೆಯ ಬದುಕಿನಲ್ಲಿ ಇಂತಹ ಘಟನೆ ನಡೆದಿರುವುದಿಲ್ಲ'' ಎಂದು ಸಂಗೀತಾ ಭಟ್ ಬರೆದುಕೊಂಡಿದ್ದಾರೆ.

ಪರೋಕ್ಷವಾಗಿ ಸುಳಿವು
ನೇರವಾಗಿ ಆ ನಿರ್ದೇಶಕ ಯಾರು ಎಂದು ಹೇಳದ ಸಂಗೀತಾ ಭಟ್ ಪರೋಕ್ಷವಾಗಿ ಆತನ ಬಗ್ಗೆ ಸುಳಿವು ನೀಡಿದ್ದಾರೆ. ಇತ್ತೀಚಿಗಷ್ಟೆ ಕಾಸ್ಟಿಂಗ್ ಕೌಚ್ ನಲ್ಲಿ ಸುದ್ದಿಯಾಗಿದ್ದ ನಿರ್ದೇಶಕ ಎಂದು ಹೇಳುವ ಮೂಲಕ ಆ ನಿರ್ದೇಶಕ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಇನ್ನು ಆತನ ಮಗಳು ಕೂಡ ಹೀರೋಯಿನ್ ಎಂದು ಹೇಳಿ ಅವರೇ ಇರಬಹುದು ಎಂದು ಖಚಿತಪಡಿಸಿದ್ದಾರೆ.


Click it and Unblock the Notifications











