ಗಂಡ ಸೆರೆ ಹಿಡಿದ ಬಿಕಿನಿ ಫೋಟೊ ಶೇರ್ ಮಾಡಿದ ಸಂಗೀತಾ ಭಟ್: ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದೇಕೆ?
'ಎರಡನೇ ಸಲ', 'ದಯವಿಟ್ಟು ಗಮನಿಸಿ' ಸಿನಿಮಾಗಳ ಮೂಲಕ ಕನ್ನಡ ಸಿನಿರಸಿಕರ ಗಮನ ಸೆಳೆದ ನಟಿ ದಂಗೀತಾ ಭಟ್. ಪವನ್ ಒಡೆಯರ್ ನಟನೆಯ 'ಪ್ರೀತಿ ಗೀತಿ ಇತ್ಯಾದಿ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ಮುಂದೆ ಸಾಕಷ್ಟು ಸಿನಿಮಾಗಳನ್ನು ನಟಿಸಿದ್ದರು. ಸದ್ಯ ಸಂಗೀತಾ ಭಟ್ ಬಿಕಿನಿ ತೊಟ್ಟು ಬಿಂದಾಸ್ ಪೋಸ್ ನೀಡಿದ್ದಾರೆ. ಫೋಟೊಗಳು ಸಖತ್ ವೈರಲ್ ಆಗ್ತಿದೆ.
ಮದುವೆ ನಂತರ ಚಿತ್ರರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿರುವ ಸಂಗೀತಾ ಭಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ವೀವ್ ಆಗಿದ್ದಾರೆ. ಸದ್ಯ ಪಿಂಕ್ ಕಲರ್ ಬಿಕಿನಿಯಲ್ಲಿ ಸ್ವಿಮ್ಮಿಂಗ್ ಪೂಲ್ ಪಕ್ಕ ಕಾಣಿಸಿಕೊಂಡಿರುವ ಚೆಲುವೆ ಫೋಟೊಗಳು ಅಭಿಮಾನಿಗಳ ಗಮನ ಸೆಳೆದಿದೆ. ಅಂದಹಾಗೆ ಈ ಫೋಟೊಗಳನ್ನು ಸಂಗೀತಾ ಭಟ್ ಪತಿ ಸುದರ್ಶನ್ ರಂಗಪ್ರಸಾದ್ ಕ್ಲಿಕ್ಕಿಸಿದ್ದಾರೆ. ಫೋಟೊಗಳನ್ನು ಶೇರ್ ಮಾಡಿ ನಟಿ ಕಾಮೆಂಟ್ ಸೆಕ್ಷನ್ ಲಾಕ್ ಮಾಡಿದ್ದಾರೆ.

ಇಂಡೋನೇಷ್ಯಾದ ಬಾಲಿಗೆ ಪ್ರವಾಸ ಹೋಗಿದ್ದಾಗ ಸೆರೆ ಹಿಡಿದ ಫೋಟೊಗಳು ಇವು. ಅಲ್ಲಿನ ಉಮೆ ವಿಲ್ಲಾ ಉಬದ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದೇ ವೇಳೆ ಸಂಗೀತಾ ಭಟ್ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡಿ ಖುಷಿ ಪಟ್ಟಿದ್ದಾರೆ. ಪೂಲ್ ಬಳಿ ಫೋಟೊಗಳನ್ನು ವಿಡಿಯೋಗಳನ್ನು ಕ್ಲಿಕ್ಕಿಸಿದ್ದು ಅದನ್ನು ನಟಿ ಈಗ ಶೇರ್ ಮಾಡಿದ್ದಾರೆ. ಸುಖಾ ಸುಮ್ಮನೆ ಟ್ರೋಲ್ ಮಾಡುತ್ತಾರೆ ಎನ್ನುವ ಕಾರಣಕ್ಕೆ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಸದ್ಯ ಈ ಫೋಟೊಗಳಂತೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
"ಅಪೂರ್ಣತೆಯೇ ಸೌಂದರ್ಯ. ಹುಚ್ಚು ಪ್ರತಿಭೆ. ಸಂಪೂರ್ಣವಾಗಿ ನೀರಸವಾಗಿರುವುದಕ್ಕಿಂತ ಸಂಪೂರ್ಣವಾಗಿ ಹಾಸ್ಯಾಸ್ಪದವಾಗಿರುವುದು ಉತ್ತಮ" ಎನ್ನುವ ಮರ್ಲಿನ್ ಮನ್ರೋ ಹೇಳಿಕೆಯನ್ನು ಅನ್ನು ಬರೆದು ಸಂಗೀತಾ ಭಟ್ ಈಜುಡುಗೆ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ದಂಪತಿ ಜೈಪುರ, ದೆಹಲಿ, ಆಗ್ರಾದ ತಾಜ್‌ಮಹಲ್ ಸೇರಿದಂತೆ ಸಾಕಷ್ಟು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

4 ವರ್ಷಗಳ ಹಿಂದೆ ಮೀಟು ವಿವಾದ ಭುಗಿಲೆದ್ದಾಗ ನಟಿ ಸಂಗೀತಾ ಭಟ್ ಕೂಡ ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದರು. ಸಾಲು ಸಾಲು ಪೋಸ್ಟ್‌ಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ನೋವು ತೋಡಿಕೊಂಡಿದ್ದರು. ಚಿತ್ರರಂಗದಲ್ಲದಾ ಕಹಿ ಅನುಭವದಿಂದ ಬೇಸತ್ತು ಆಕೆ ಸಿನಿಮಾಗಳಿಗೆ ಗುಡ್ ಬೈ ಹೇಳಿದ್ದರು. ಆದರೆ ಮತ್ತೆ ವಾಪಸ್ ಆಗಿದ್ದಾರೆ. '48 ಅವರ್ಸ್' ಸಂಗೀತಾ ಭಟ್ ನಟಿಸಿದ ಕೊನೆಯ ಸಿನಿಮಾ. ಇನ್ನು ಸ್ಟ್ಯಾಂಡಪ್ ಕಾಮಿಡಿಯಿಂದ ಜನಪ್ರಿಯತೆ ಗಳಿಸಿದ ಸುದರ್ಶನ್ ರಂಗಪ್ರಸಾದ್ ಅವರನ್ನು ಆಕೆ ವರಿಸಿದ್ದಾರೆ.
ಸಂಗೀತಾ ಭಟ್ ಸಿನಿಮಾಗಳಲ್ಲಿ ನಟಿಸದೇ ಇದ್ರು ಸದ್ಯ ಅವರ ಪತಿ ಸುದರ್ಶನ್ ರಂಗಪ್ರಸಾದ್ ಕಿರುತೆರೆಯ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ತಾಂಡವ್ ಎನ್ನುವ ಪಾತ್ರದಲ್ಲಿ ವೀಕ್ಷಕರ ಗಮನ ಸೆಳೆದಿದ್ದಾರೆ. ಸಂಗೀತ ಭಟ್ ಕೂಡ ಸಿನಿಮಾಗಳಲ್ಲಿ ನಟಿಸೋಕು ಮುನ್ನ ಕಿರಿತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. 'ಚಂದ್ರ ಚಕೋರಿ', 'ಭಾಗ್ಯವಂತರು', 'ನೀಲಿ', 'ಚಂದ್ರಮುಖಿ' ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರು.
ಮೂಲತಃ ಕಾಸರಗೋಡಿನವರಾದರೂ ಸಂಗೀತಾ ಭಟ್ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಸಿನಿಮಾಗಳಲ್ಲೂ ಈಕೆ ನಟಿಸಿದ್ದಾರೆ. 'ಕಿಸ್ಮತ್', 'ಅನುಕ್ತ', 'ಕಪಟ ನಾಟಕ ಪಾತ್ರಧಾರಿ', 'ಆದ್ಯಾ' ಸಂಗೀತಾ ನಟಿಸಿದ ಕೆಲ ಕನ್ನಡ ಸಿನಿಮಾಗಳು. ಇನ್ನು ತೆಲುಗಿನ 'ಕಾಕಿ', ತಮಿಳಿನ 'ಡೂ', 'ಆರಂಭಮೇ ಅಟ್ಟಗಾಸಂ' ಹಾಗೂ 'ಕಾ ಕಾ ಕಾ' ಚಿತ್ರಗಳಲ್ಲಿ ಬಣ್ಣ ಹಚ್ಚಿದ್ಧಾರೆ. ಇಷ್ಟೆಲ್ಲಾ ಸಿನಿಮಾಗಳಲ್ಲಿ ನಟಿಸಿದರೂ ದೊಡ್ಡಮಟ್ಟದ ಸಕ್ಸಸ್ ಮಾತ್ರ ಕನ್ನಡ ನಟಿಗೆ ಸಿಗಲಿಲ್ಲ.


Click it and Unblock the Notifications











