ಸ್ಟಾರ್ ನಟನ ಸಿನಿಮಾದಲ್ಲಿ 'ಹರ ಹರ ಮಹದೇವ' ಧಾರಾವಾಹಿ ನಟಿ
Recommended Video

ಸೀರಿಯಲ್ ನಿಂದ ಸಿನಿಮಾ ಪ್ರಯಾಣ ಶುರು ಮಾಡಿದ ನಟಿಯರ ಪಟ್ಟಿ ಬಹಳ ದೊಡ್ಡದಿದೆ. ಆ ಸಾಲಿಗೆ ಈಗ ಮತ್ತೊಬ್ಬ ಕಿರುತೆರೆಯ ಪ್ರತಿಭೆ ಸೇರಿಕೊಳ್ಳುತ್ತಿದ್ದಾರೆ. 'ಹರ ಹರ ಮಹದೇವ' ಧಾರಾವಾಹಿಯ ನಟಿ ಸಂಗೀತಗೆ ಈಗ ಮತ್ತೊಂದು ಸಿನಿಮಾ ಅವಕಾಶ ಸಿಕ್ಕಿದೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಹರ ಹರ ಮಹದೇವ' ಧಾರಾವಾಹಿ ದೊಡ್ಡ ಜನಪ್ರಿಯತೆ ಗಳಿಸಿತ್ತು. ಈ ಧಾರಾವಾಹಿಯಲ್ಲಿ ನಟಿಸಿದ್ದ ಕಲಾವಿದರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಇದೀಗ 'ಹರ ಹರ ಮಹದೇವ' ಧಾರಾವಾಹಿಯಲ್ಲಿ ಸತಿಯಾಗಿ ಕಾಣಿಸಿಕೊಂಡಿದ್ದ ಸಂಗೀತ ಕನ್ನಡದ ಸ್ಟಾರ್ ನಟನ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ.
ಅಂದಹಾಗೆ, ಸಂಗೀತ ಅವರ ಮೊದಲ ಸಿನಿಮಾದ ವಿವರ ಮುಂದಿದೆ ಓದಿ...

'777 ಚಾರ್ಲಿ'ಗೆ ಸಿಕ್ಕ ನಾಯಕಿ
'777 ಚಾರ್ಲಿ' ಸಿನಿಮಾಗೆ ಈಗ ನಾಯಕಿಯ ಆಯ್ಕೆ ಆಗಿದೆ. 'ಹರ ಹರ ಮಹದೇವ' ಧಾರಾವಾಹಿಯ ನಟಿ ಸಂಗೀತ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಮುಂಚೆ 'A+' ಎಂಬ ಚಿತ್ರದ ಮೂಲಕ ಸಂಗೀತ ತಮ್ಮ ಸಿನಿ ಜರ್ನಿಯನ್ನು ಶುರು ಮಾಡಿದ್ದರು.

ಆಡಿಷನ್ ಮೂಲಕ ಆಯ್ಕೆ
ಸಿನಿಮಾಗೆ ಹೊಸ ನಾಯಕಿಯನ್ನು ಆಯ್ಕೆ ಮಾಡೋಣ ಎಂದು ನಿರ್ಧರಿಸಿದ್ದ ಚಿತ್ರತಂಡ ಆಡಿಷನ್ ಕರೆದಿತ್ತು. ಇದರಲ್ಲಿ 2700ಕ್ಕೂ ಅಧಿಕ ಪ್ರೊಫೈಲ್ ಗಳು ಬಂದಿದ್ದು, ಕೊನೆಗೆ ಸಂಗೀತ ಆಯ್ಕೆ ಆಗಿದ್ದಾರೆ. ಕಿರುತೆರೆಯಲ್ಲಿ ನಟಿಸಿರುವ ಕಾರಣ ಅವರಿಗೆ ನಟನೆಯ ಸೂಕ್ಷ್ಮತೆ ತಿಳಿದಿದೆ ಎಂದು ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.

ಮತ್ತೆ ಹೊಸ ನಟಿಯರ ಜೊತೆಗೆ ರಕ್ಷಿತ್
ಈ ಹಿಂದೆ 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿಯೂ ರಕ್ಷಿತ್ ಶೆಟ್ಟಿ ಹೊಸ ನಾಯಕಿಯರ ಜೊತೆಗೆ ನಟಿಸಿದ್ದರು. ಈ ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ಹಾಗೂ ಸಂಯುಕ್ತ ಹೆಗ್ಡೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅದರ ನಂತರ ಈಗ ಮತ್ತೆ ರಕ್ಷಿತ್ ಹೊಸ ನಟಿಗೆ ಅವಕಾಶ ನೀಡಿದ್ದಾರೆ.

ಕಿರಣ್ ರಾಜ್ ನಿರ್ದೇಶನ
ಈ ಹಿಂದೆ 'ರಿಕ್ಕಿ' ಹಾಗೂ 'ಕಿರಿಕ್ ಪಾರ್ಟಿ' ಸಿನಿಮಾಗಳಿಗೆ ಕೆಲಸ ಮಾಡಿದ್ದ ಕಿರಣ್ ರಾಜ್ '777 ಚಾರ್ಲಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ನಾಯಿ ಮತ್ತು ಮನುಷ್ಯನ ನಡುವಿನ ಕಥೆಯನ್ನು ಸಿನಿಮಾ ಹೊಂದಿದೆ.


Click it and Unblock the Notifications











