ನಮ್ಮ ಸಿಂಹಿಣಿಯನ್ನ ನೋಡಿ ಹುಲಿ ಕೂಡ ಓಡಿ ಹೋಗಬೇಕು ; ಸಂಗೀತಾ ವೈಲ್ಡ್ ಲೈಫ್ ಅಡ್ವೆಂಚರ್

ಚಾರ್ಲಿ ಚಿತ್ರದ ಮೂಲಕ ಜನಜನಿತವಾದವರು ಸಂಗೀತಾ ಶೃಂಗೇರಿ. ಆ ನಂತರ ಸಂಗೀತಾ ಒಂದಾದ ಮೇಲೊಂದು ಸಿನಿಮಾ ಮಾಡ್ತಾರೆ ಎಂದೇ ಎಲ್ಲ ಅಂದುಕೊಂಡಿದ್ದರು. ಆದರೆ ಸಂಗೀತಾ ಮಾತ್ರ ಸೀದಾ ಹೋಗಿದ್ದು ಬಿಗ್ ಬಾಸ್ ಮನೆಗೆ.

ಸಾಮಾನ್ಯವಾಗಿ ಹೊರ ಜಗತ್ತಿನಲ್ಲಿ ಒಳ್ಳೆ ಹೆಸರು ಮಾಡಿದ್ದವರೂ ಕೂಡಾ ಬಿಗ್ ಬಾಸ್ ಮನೆಯೊಳಗಿನ ವರ್ತನೆಗಳಿಂದ ಹೆಸರು ಕೆಡಿಸಿಕೊಂಡಿದ್ದಿದೆ. ಆದರೆ ಅದೆಂಥಾ ಸವಾಲುಗಳು ಬಂದರೂ ತಾವು ತಾವಾಗೇ ಉಳಿದ, ಸಹಜವಾದ ಮಾತು ವರ್ತನೆಗಳಿಂದನೇ ಅನೇಕರ ಹೃದಯವನ್ನ ಗೆದ್ದ ಸಂಗೀತಾ ಶೃಂಗೇರಿ, ಸಿಂಹಿಣಿ ಎಂಬ ಬಿರುದನ್ನೂ ಅಭಿಮಾನಿಗಳಿಂದ ಪಡೆದರು. ಇಂಥ ಸಿಂಹಿಣಿ ಇದೀಗ ಹುಲಿಯ ಚಲನವಲನಗಳನ್ನ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದುಕೊಂಡು ಬಂದಿದ್ದಾರೆ.

sangeetha-sringeri-popular-from-bigg-boss-enjoys-quality-time-on-bandipur-safari

ಹೌದು, ಸಂಗೀತಾ ಶೃಂಗೇರಿ ಬಂಡೀಪುರದ ಅಭಯಾರಣ್ಯಕ್ಕೆ ಹೋಗಿದ್ದರು. ಇನ್ನೂ ಬಂಡೀಪುರ ಅಭಯಾರಣ್ಯ ಹುಲಿ ರಕ್ಷಿತಾರಣ್ಯವೂ ಹೌದು. ರಾಜ್ಯದಲ್ಲೇ ಅತಿ ಹೆಚ್ಚು ಹುಲಿಯನ್ನು ಹೊಂದಿರುವ ಕಾಡು ಎಂಬ ಹೆಗ್ಗಳಿಕೆ ಬಂಡೀಪುರಕ್ಕಿದೆ. ಹೀಗಾಗಿಯೇ ಬಂಡೀಪುರಕ್ಕೆ ಕ್ಯಾಮರಾ ಸಮೇತ ಹೋಗಿದ್ದ ಸಂಗೀತಾ ಶೃಂಗೇರಿ, ಹುಲಿಯನ್ನ ತೀರಾ ಹತ್ತಿರದಿಂದ ಕಣ್ತುಂಬಿಕೊಂಡಿದ್ದಾರೆ. ಅವರೇ ಹೇಳಿರುವಂತೆ ಹತ್ ಹತ್ರ ಒಂದು ಘಂಟೆ ಹುಲಿಯ ದರ್ಶನವನ್ನ ಮಾಡಿಕೊಂಡು ಮರಳಿದ್ದಾರೆ.

ತಮ್ಮ ಈ ಅನುಭವವನ್ನಸಂಗೀತಾ ಶೃಂಗೇರಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಮೇತ ಹಂಚಿಕೊಂಡ ಬೆನ್ನಲ್ಲಿಯೇ, ಇವರ ಅಭಿಮಾನಿ ಬಳಗ ಜಾಗೃತಗೊಂಡಿದೆ. ಬಗೆ ಬಗೆಯಾಗಿ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದೆ. ನಮ್ಮ ಸಿಂಹಿಣಿಯನ್ನ ನೋಡಿ ಹುಲಿ ಕೂಡ ಓಡಿ ಹೋಗಬೇಕು ಎನ್ನುತ್ತಿದೆ.

ಇನ್ನೂ ಇದರ ನಡುವೆ ಸಂಗೀತಾ ಶೃಂಗೇರಿ ಅವರ ಛಾಯಾಗ್ರಹಣದ ಕಲೆಯನ್ನೂ ಕೂಡ ಮೆಚ್ಚಿಕೊಳ್ಳುತ್ತಿದ್ದಾರೆ. ಇದೆಲ್ಲದರ ಪ್ರತಿಫಲವೆಂಬಂತೆ ಸಂಗೀತಾ ಅವರ ಈ ವೈಲ್ಡ್ ಲೈಫ್ ಅಡ್ವೆಂಚರ್‌ನ 20.000 ಕ್ಕೂ ಅಧಿಕ ಜನ ಇಷ್ಟಪಟ್ಟಿದ್ದಾರೆ.

ಅಂದ್ಹಾಗೇ ಸಂಗೀತಾ ಶೃಂಗೇರಿ ಅವರಿಗೆ ಹೆಸರು ತಂದು ಕೊಟ್ಟ 777 ಚಾರ್ಲಿ, ಜಪಾನ್‌ ನಲ್ಲಿ ಬಿಡುಗಡೆಯಾಗಲಿದೆ. ಜಪಾನ್ ಚಿತ್ರರಂಗದ ದೊಡ್ಡ ಸಂಸ್ಥೆ 'ಶೋಚಿಕೋ ಮೂವೀ' ಕಿರಣ್​ ರಾಜ್​ ನಿರ್ದೇಶನದ '777 ಚಾರ್ಲಿ' ಚಿತ್ರವನ್ನು ಜಪಾನಿನಲ್ಲಿ ವಿತರಣೆ ಮಾಡಲು ಮುಂದಾಗಿದೆ. ಈ ಹಿಂದೆ ಇದೇ ಸಂಸ್ಥೆ 'Hachi: A Dog's Tale' ಸಿನಿಮಾವನ್ನು ಜಪಾನಿನಲ್ಲಿ ವಿತರಣೆ ಮಾಡಿ ಗಮನ ಸೆಳೆದಿತ್ತು.

ವಿಶೇಷ ಅಂದರೆ ಕಳೆದ ವರ್ಷ 777 ಚಾರ್ಲಿ ಥೈಲ್ಯಾಂಡ್‌ಗೆ ಡಬ್ ಆಗಿತ್ತು. ಅಲ್ಲಿಯೂ ಜನ ಮನ ಗೆದ್ದಿತ್ತು. ಈಗ ಜಪಾನ್ ಸರದಿ. ಮುಂದೆ.. ರಷ್ಯಾ, ಲ್ಯಾಟಿನ್ ಅಮೆರಿಕ, ಜರ್ಮನಿ, ತೈವಾನ್ ಮುಂತಾದ ದೇಶಗಳಲ್ಲಿ ಕೂಡ 777 ಚಾರ್ಲಿ ಬಿಡುಗಡೆ ಆಗಲಿದೆ. ಗೊತ್ತಿಲ್ಲ 777 ಚಾರ್ಲಿಯನ್ನ ನೋಡಿದ ನಂತರ, ಜಪಾನ್ ಜನ ಕೂಡ ಅಭಿಮಾನಿಗಳ ಸಿಂಹಿಣಿ ಸಂಗೀತಾ ಶೃಣಗೇರಿ ಅವರ ಅಭಿಮಾನಿಗಳಾದರೂ ಆಗಬಹುದು

ಒಟ್ನಲ್ಲಿ ಸದ್ಯಕ್ಕೆ ಸಂಗೀತಾ ಶೃಂಗೇರಿ ಹುಲಿಯನ್ನ ಹತ್ತಿರದಿಂದ ನೋಡುವ ಮೂಲಕ ಸದ್ಯಕ್ಕೆ ಸುದ್ದಿಯಲ್ಲಿದ್ದಾರೆ. ಇನ್ನೂ ಇವರ ಮುಂದಿನ ಚಿತ್ರದ ಕುರಿತು ಯಾವತ್ತು ಹೊಸ ಸುದ್ದಿ ಹೊರ ಬೀಳಲಿದೆ ಅನ್ನುವುದನ್ನ ಈಗ ಕಾದು ನೋಡಬೇಕಿದೆ.

More from Filmibeat

English summary
Sangeetha Sringeri, Recognized from Bigg Boss, Relishes a Memorable Experience on Bandipur Safari"
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X