twitter
    For Quick Alerts
    ALLOW NOTIFICATIONS  
    For Daily Alerts

    ನಾಲ್ಕೇ ದಿನದಲ್ಲಿ 15 ಕೋಟಿ ಬಾಚಿದ ಸಂಗೊಳ್ಳಿ ರಾಯಣ್ಣ

    |
    <ul id="pagination-digg"><li class="next"><a href="/news/darshan-talks-sangolli-rayanna-grand-success-069337.html">Next »</a></li></ul>

    Darshan
    ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರವು ಅಮೋಘ ಯಶಸ್ಸಿನತ್ತ ಪ್ರಯಾಣಿಸುತ್ತಿದೆ. ಬಿಡುಗಡೆಯಾದ ನಾಲ್ಕೇ ದಿಗಳಲ್ಲಿ ಈ ಚಿತ್ರ ಬರೋಬ್ಬರಿ ರು. 15 ಕೋಟಿಗೂ ಅಧಿಕ ಗಳಿಸಿ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಕನ್ನಡದ ಮಟ್ಟಿಗೆ ಈ ಚಿತ್ರವು ಭಾರಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಚಿತ್ರವಾಗಿತ್ತು. ಸುದ್ದಿಮೂಲಗಳ ಪ್ರಕಾರ ಚಿತ್ರಕ್ಕೆ ಬರೋಬ್ಬರಿ ರು. 32 ಕೋಟಿ ಖರ್ಚುಮಾಡಲಾಗಿದೆ.

    ಕನ್ನಡದಲ್ಲಿ 'ಗಂಡುಗಲಿ ಕುಮಾರರಾಮ' ಚಿತ್ರದ ನಂತರ ಯಾವುದೇ ಐತಿಹಾಸಿಕ ಕಥೆಯಾಧಾರಿತ ಚಿತ್ರ ಬಂದಿರಲಿಲ್ಲ. ಆ 'ಗಂಡುಗಲಿ ಕುಮಾರರಾಮ' ಚಿತ್ರ ನಿರೀಕ್ಷಿಸಿದಷ್ಟು ಯಶಸ್ವಿಯಾಗಿರಲಿಲ್ಲ. ಹೀಗಾಗಿ ಸಹಜವಾಗಿಯೇ ಈ ಐತಿಹಾಸಿಕ 'ಸಂಗೊಳ್ಳಿ ರಾಯಣ್ಣ' ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯೇನೂ ಇರಲಿಲ್ಲ. ಆದರೆ ದರ್ಶನ್ ನಾಯಕತ್ದವ ಚಿತ್ರವಾದ್ದರಿಂದ ಸಹಜವಾಗಿಯೇ ತಕ್ಕಮಟ್ಟಿಗೆ ಯಶಸ್ಸನ್ನು ನಿರೀಕ್ಷಿಸಲಾಗಿತ್ತು. ಆಶ್ಚರ್ಯವೆಂಬಂತೆ ಚಿತ್ರವು ನಿರೀಕ್ಷೆ ಮೀರಿ ಯಶಸ್ವಿಯಾಗಿದೆ.

    ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ಎಲ್ಲಾ ವರ್ಗದ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ 'ಸಂಗೊಳ್ಳಿ ರಾಯಣ್ಣ' ಚಿತ್ರವು ಸಿನಿಮಾ ತುಂಬಾ ಚೆನ್ನಾಗಿದೆ ಎಂಬ ಭಾರಿ ಮೌತ್ ಪಬ್ಲಿಸಿಟಿಗೆ ಪಾತ್ರವಾಗಿದೆ. ಇಬ್ಬರು ಜೊತೆಯಾದರೆ ಸಾಕು 'ಸಂಗೊಳ್ಳಿ ರಾಯಣ್ಣ' ಚಿತ್ರ ನೋಡಿದ್ದೀರಾ ಎಂದು ಕೇಳುವಷ್ಟರ ಮಟ್ಟಿಗೆ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇನ್ನು ಕೇವಲ 129 ಚಿತ್ರಮಂದಿಗಳಲ್ಲಿ ಬಿಡುಗಡೆಯಾಗಿದ್ದ 'ಸಂಗೊಳ್ಳಿ ರಾಯಣ್ಣ', ಈಗ ಇನ್ನೂ 20 ಹೆಚ್ಚು ಥಿಯೇಟರ್ ಪಡೆದುಕೊಂಡಿದೆ.

    ಅಷ್ಟೇ ಅಲ್ಲ, ಚಿತ್ರರಂಗದಲ್ಲಿ ಹೊಸಬರು ಹಳಬರು ಹಾಗೂ ಅವರಕಡೆಯವರು ಇವರ ಕಡೆಯವರು ಎಂಬ ಭೇದವಿಲ್ಲದೇ ಗಣ್ಯಾತಿಗಣ್ಯರು ಸೇರಿದಂತೆ 'ಸಂಗೊಳ್ಳಿ ರಾಯಣ್ಣ' ಚಿತ್ರನೋಡಲು ಕುಟುಂಬ ಸಮೇತ ಬರುತ್ತಿದ್ದಾರೆ. ಕನ್ನಡ ಚಿತ್ರಗಳೆಂದರೆ ಮೂಗು ಮುರಿಯುತ್ತಿದ್ದ ಜನರೂ ಪ್ರೇಕ್ಷಕರಾಗಿ ಬದಲಾಗುತ್ತಿದ್ದಾರೆ. ಮಳೆ, ಛಳಿ ಲೆಕ್ಕಿಸದೇ ಕನ್ನಡ ಚಿತ್ರವೊಂದನ್ನು ನೋಡಲು ಚಿತ್ರಮಂದಿರದತ್ತ ಜನಪ್ರವಾಹ ಬರುತ್ತಿರುವುದು ಹೊಸ ಬೆಳವಣಿಗೆಯೇ ಸರಿ. ಮುಂದಿನ ಪುಟ ನೋಡಿ....

    <ul id="pagination-digg"><li class="next"><a href="/news/darshan-talks-sangolli-rayanna-grand-success-069337.html">Next »</a></li></ul>

    English summary
    Darshan Movie Sangolli Rayanna is screening successful in all the centers and recorded Grand Success. The number of theaters increased after the release and it collected Rs. 15 crore according to the sources. Here are the Darshan Opinion to read about the Kannada Audience...&#13; &#13;
    Monday, November 5, 2012, 10:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X