ಸದ್ಯದಲ್ಲೇ ತೆರೆಗೆ ದರ್ಶನ್ 'ಸಂಗೊಳ್ಳಿ ರಾಯಣ್ಣ'

<ul id="pagination-digg"><li class="next"><a href="/news/darshan-nikita-thukral-lead-sangolli-rayanna-release-068471.html">Next »</a></li></ul>

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರವು ಬರುವ ತಿಂಗಳು 12ರಂದು (ಅಕ್ಟೋಬರ್ 12, 2012) ತೆರೆಗೆ ಬರುವ ನಿರೀಕ್ಷೆಯಿದೆ. ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ನಿರ್ಮಾಣವಾದ ಈವರೆಗಿನ ಚಿತ್ರಗಳಲ್ಲೇ ಅತಿ ಹೆಚ್ಚು ಬಜೆಟ್ ಹೊಂದಿರುವ ಚಿತ್ರವಾಗಿದೆ. 'ಸಂಗೊಳ್ಳಿ ರಾಯಣ್ಣ' ಚಿತ್ರದ ಒಟ್ಟೂ ಬಜೆಟ್ ಕನ್ನಡದ ಮಟ್ಟಿಗೆ ಬರೋಬ್ಬರಿ ಎನ್ನಬಹುದಾದ 30 ಕೋಟಿ ರೂಪಾಯಿಗಳಿಗೂ ಹೆಚ್ಚು.

'ಸಂಗೊಳ್ಳಿ ರಾಯಣ್ಣ' ಚಿತ್ರದ ನಿರ್ಮಾಪಕರು ಆನಂದ್ ಅಪ್ಪುಗೋಳ್. ಸಂಗೊಳ್ಳಿ ರಾಯಣ್ಣ ಹುಟ್ಟಿದ ಬೆಳಗಾವಿ ಜಿಲ್ಲೆಯವರಾದ ನಿರ್ಮಾಪಕ ಆನಂದ ಅಪ್ಪುಗೋಳ್ ಈ ಚಿತ್ರವನ್ನು ನಿರ್ಮಾಣ ಮಾಡಲು ಪ್ರಮುಖ ಕಾರಣ, ಸಂಗೊಳ್ಳಿ ರಾಯಣ್ಣ ಮೇಲೆ ಆನಂದ್ ಅವರಿಗಿರುವ ಉತ್ಕಟ ಅಭಿಮಾನ. ರಾಯಣ್ಣರ ಮೇಲೆ ಚಿತ್ರ ಮಾಡುವುದೇ ಅವರ ಕನಸು ಹಾಗೂ ಗುರಿಯತಾಗಿತ್ತು. ಅದನ್ನವರು ಈಗ ನೆರವೇರಿಸಿಕೊಂಡಿದ್ದಾರೆ.

ಈ ಚಿತ್ರದ ನಿರ್ಮಾಣ ಕಾರ್ಯವನ್ನು ಮುಗಿಸಿ ಇದೀಗ ಬಿಡುಗಡೆಗೆ ಸಿದ್ಧರಾಗಿರುವ ಆನಂದ್ ಅಪ್ಪುಗೋಳ್ ಇತ್ತೀಚಿಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. "ಈ ಚಿತ್ರ ಗೆದ್ದರೂ ಸೋತರೂ ನಾನಂತೂ ತಲೆಕೆಡಿಸಿಕೊಳ್ಳಲಾರೆ. ಚಿತ್ರದಿಂದ ರು. 100 ಕೋಟಿ ಬಂದರೆ ನಾನು ಖುಷಿಯಾಗಲಾರೆ, ಗೋತಾ ಹೊಡೆದರೂ ಚಿಂತೆ ಮಾಡಲಾರೆ. ಚಿತ್ರ ನಿರ್ಮಿಸುವ ಏಕೈಕ ಕನಸಿತ್ತು, ನಿರ್ಮಿಸಿದ್ದೇನೆ" ಎಂದಿದ್ದಾರೆ.

ಮುಂದುವರಿದ ಆನಂದ್ ಅಪ್ಪುಗೋಳ್, "ಸಂಗೊಳ್ಳಿ ರಾಯಣ್ಣ ಚಿತ್ರವನ್ನು ಮಾಡಿ ಮುಗಿಸಿರುವ ಮೂಲಕ ನನ್ನ ಭಾರಿ ಕನಸು ಈಡೇರಿದೆ, ಅಷ್ಟು ನನಗೆ ಸಾಕು. ನಮ್ಮ ದೇಶದ ಯುವ ಜನತೆಗೆ ಇಂತಹ ಚಿತ್ರ ಸ್ಫೂರ್ತಿ ನೀಡಲಿ. ರಾಷ್ಟ್ರಕ್ಕೆ ಆಪತ್ತು ಎದುರಾದಾಗ, ಯುದ್ಧದಂತಹ ಸಂದರ್ಭದಲ್ಲಿ ದೇಶ ರಕ್ಷಣೆಗೆ ಸಂಗೊಳ್ಳಿ ರಾಯಣ್ಣರಂತೆ ಎಲ್ಲರೂ ಮುಂದಾಗಲಿ. ದೇಶಭಕ್ತಿ ಎಂಬುದು ಎಲ್ಲರ ನರನಾಡಿಗಳಲ್ಲಿ ಹರಿಯಲಿ" ಎಂದಿದ್ದಾರೆ ಆನಂದ್ ಅಪ್ಪುಗೋಳ್. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/darshan-nikita-thukral-lead-sangolli-rayanna-release-068471.html">Next »</a></li></ul>

More from Filmibeat

English summary
Challenging Star Darshan upcoming movie 'Sangolli Rayanna' to hit Screen on next month 12th (12th October 2012), as the recent sources are concerned. Nikita Thukral acted as Heroine for Drashan and Jayaprada is in an Important Role. Yashovardhan Music, Ramesh Babu Cemara and Govardhan editing for this. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X