'ಸಲಗ'ನ ಜೊತೆಯಾದ ನಟಿ ಸಂಜನಾ ಆನಂದ್
Recommended Video
ನಟ ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಲಿರುವ 'ಸಲಗ' ಚಿತ್ರತಂಡ ಮೇಕಿಂಗ್ ಹಂತದಲ್ಲೇ ಭಾರಿ ಕುತೂಹಲ ಮೂಡಿಸುತ್ತಿದೆ. ಇಷ್ಟು ದಿನ ತೆರೆಮೇಲೆ ಅಬ್ಬರಿಸಿದ್ದ ವಿಜಿ ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಲು ತಯಾರಾಗಿದ್ದಾರೆ.
ಈಗಾಗಲೆ ಚಿತ್ರದ ಮುಹೂರ್ತಕ್ಕೆ ಭರ್ಜರಿ ತಯಾರಿ ಮಾಡಿಕೊಂಡಿರುವ 'ಸಲಗ' ಟೀಂಗೆ ನಾಯಕಿಯ ಎಂಟ್ರಿಯಾಗಿದೆ. ಹೌದು, 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದ ನಾಯಕಿ ಸಂಜನಾ ಆನಂದ್ ಈಗ 'ಸಲಗ'ನ ಜೊತೆಯಾಗಿದ್ದಾರೆ.
ಸಂಜನಾ ಆನಂದ್ ಅಭಿನಯದ ಮೊದಲ ಸಿನಿಮಾ 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಚೊಚ್ಚಲ ಚಿತ್ರದಲ್ಲೆ ಚಿತ್ರಪ್ರಿಯ ಗಮನ ಸೆಳೆದಿದ್ದ ಸಂಜನಾ ಈಗ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸಂಜನಾ ಇತ್ತೀಚಿಗಷ್ಟೆ ಚಿರಂಜೀವಿ ಸರ್ಜ ಅಭಿನಯದ ಹೊಸ ಸಿನಿಮಾ 'ಕ್ಷತ್ರಿಯಾ' ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು ಅಜೇಯ್ ರಾವ್ ಜೊತೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಸಲಗ ಚಿತ್ರಕ್ಕೆ ಇದೇ ತಿಂಗಳು ಜೂನ್ 6 ರಂದು ಗವಿಪುರ ಗುಟ್ಟಳ್ಳಿಯಲ್ಲಿರುವ ಬಂಡೆ ಮಹಾಕಾಳಿ ದೇವಾಲಯದಲ್ಲಿ ಅದ್ಧೂರಿ ಮುಹೂರ್ತ ನಡಯಲಿದೆ. ಚಿತ್ರದ ಮುಹೂರ್ತಕ್ಕೆ ಈಗಾಗಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದಾರೆ.
ಇತ್ತೀಚಿಗಷ್ಟೆ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಅವರು ಕಿಚ್ಚ ಸುದೀಪ್ ಅವರನ್ನ ಭೇಟಿಯಾಗಿ ಸಲಗ ಚಿತ್ರದ ಮೂಹೂರ್ತಕ್ಕೆ ಅತಿಥಿಯಾಗಿ ಬರಲು ಆಹ್ವಾನಿಸಿದ್ದಾರೆ. ಸುದೀಪ್ ಕೂಡ ಒಪ್ಪಿದ್ದಾರೆ ಎನ್ನಲಾಗಿದೆ. ರಾಜಕೀಯ ನಾಯಕರು, ಸಿನಿಮಾ ಗೆಳೆಯರಿಗೆ ಆಹ್ವಾನ ನೀಡಿದ್ದಾರೆ 'ಸಲಗ' ಟೀಂ. ಚಿತ್ರದಲ್ಲಿ ಧನಂಜಯ್, ಟಗರು ಕಾಕ್ರೋಚ್ ಸೇರಿದಂತೆ ಟಗರು ತಂತ್ರಜ್ಞರು ಚಿತ್ರದಲ್ಲಿದ್ದಾರೆ.


Click it and Unblock the Notifications











