For Quick Alerts
  ALLOW NOTIFICATIONS  
  For Daily Alerts

  ನಟಿ ಸಂಜನಾ ಗಲ್ರಾನಿ ಹಾಗೂ ಪತಿಗೆ ಕೊರೊನಾ ಪಾಸಿಟಿವ್

  |

  ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಸಂಕಷ್ಟ ಅನುಭವಿಸಿದ್ದ ನಟಿ ಸಂಜನಾ ಗಲ್ರಾನಿಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ.

  ಚೆನ್ನಾಗಿ ಸಾಯೋಣ ಹೆದರಿಕೊಂಡು ಸಾಯೋದು ಬೇಡ ಅಂದ್ರು Sanjana Galrani | Filmibeat Kannada

  ಸಂಜನಾ ಮಾತ್ರವೇ ಅಲ್ಲದೆ ಪತಿ ಅಜೀಜ್‌ ಪಾಷಾ ಅವರಿಗೂ ಕೊರೊನಾ ಪಾಸಿಟಿವ್ ಆಗಿದೆ. ಈ ಬಗ್ಗೆ ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

  ಸಂಜನಾ ಗಲ್ರಾನಿ ನಿನ್ನೆಯಷ್ಟೆ ಪತಿಯ ಕುಟುಂಬದೊಂದಿಗೆ ಡಿನ್ನರ್ ಪಾರ್ಟಿ ಮಾಡಿದ್ದರು. ಇಂದು ಸಂಜನಾಗೆ ಪಾಸಿಟಿವ್ ಆಗಿದ್ದು ಸಂಜನಾ ಅವರ ಪತಿಯ ಕುಟುಂಬದವರಿಗೂ ಆತಂಕ ಎದುರಾಗಿದೆ.

  'ನನಗೆ ಕೊರೊನಾ ಪಾಸಿಟಿವ್ ಆಗಿದೆ. ನನಗೆ ನನ್ನ ಪತಿಯಿಂದಲೇ ಕೊರೊನಾ ಸೋಂಕು ಆಗಿದೆ. ನನ್ನ ಪತಿ ವೈದ್ಯರಾಗಿದ್ದು ಪ್ರತಿ ದಿನ ಅವರು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರಬಲವಾದ ಕೊರೊನಾ ಎರಡನೇ ಅಲೆಯನ್ನು ಧೈರ್ಯದಿಂದ ಎದುರಿಸಲು ನಾವು ಸಜ್ಜಾಗಿದ್ದೇವೆ'' ಎಂದಿದ್ದಾರೆ ಸಂಜನಾ.

  ಸ್ಯಾಂಡಲ್‌ವುಡ್‌ ಡ್ರಗ್ಸ್ ಪ್ರಕರಣದಲ್ಲಿ ನಟಿ ಸಂಜನಾ ಗಲ್ರಾನಿ ಎಸ್‌ಐಟಿಯಿಂದ ಬಂಧನಕ್ಕೆ ಒಳಗಾಗಿ ಜೈಲುವಾಸ ಅನುಭವಿಸಿದ್ದರು. ನಟಿ ರಾಗಿಣಿ ದ್ವಿವೇದಿ ಸಹ ಇದೇ ಪ್ರಕರಣದಲ್ಲಿ ಸಿಲುಕಿಕೊಂಡು ಸಂಜನಾ ಜೊತೆಗೆ ಜೈಲು ವಾಸ ಅನುಭವಿಸಿದರು.

  English summary
  Actress Sanjana Galrani and her Husband Ajeez tested coronavirus positive.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X