ಸಂಜನಾ ಗಲ್ರಾನಿಗೆ ಇಂದು ಸಹ ಇಲ್ಲ ಜಾಮೀನು
ಮಾದಕ ವಸ್ತು ಪ್ರಕರಣದಲ್ಲಿ ಸಿಸಿಬಿ ಇಂದ ಬಂಧನಕ್ಕೆ ಒಳಗಾಗಿರುವ ನಟಿ ಸಂಜನಾ ಗಲ್ರಾನಿಗೆ ಇಂದು ಸಹ ಜಾಮೀನು ಸಿಗಲಿಲ್ಲ. ಸಂಜನಾ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಲಾಗಿದೆ.
ಅಕ್ಟೋಬರ್ 22 ಕ್ಕೆ ಮುದೂಡಲಾಗಿದ್ದ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆದಿದ್ದು, ಮತ್ತೆ ಜಾಮೀನು ಅರ್ಜಿಯ ವಿಚಾರಣೆ ಅಕ್ಟೋಬರ್ 24 ಕ್ಕೆ ಮುಂದೂಡಲಾಗಿದೆ.
ಸಂಜನಾ ಪರ ವಾದ ಮಂಡಿಸಿದ ವಕೀಲ ಹಷಮತ್ ಶಾ, ಸಂಜನಾ ಬಳಿ ಹೆಚ್ಚು ಪ್ರಮಾಣದ ಅಥವಾ ವಾಣಿಜ್ಯ ಪ್ರಮಾಣದ ಡ್ರಗ್ಸ್ ಪತ್ತೆಯಾಗಿಲ್ಲ, ಇಂಥಹುದೇ ಪ್ರಕರಣದಲ್ಲಿ ರಿಯಾ ಚಕ್ರವರ್ತಿಗೆ ಜಾಮೀನು ನೀಡಲಾಗಿದೆ ಎಂದಿದ್ದರು.

ಒಂದು ಗಂಟೆ ಕಾಲ ವಾದ
ಸುಮಾರು ಒಂದು ಗಂಟೆಗಳ ಸಂಜನಾ ಪರವಾಗಿ ವಾದ ಮಂಡಿಸಿದ ವಕೀಲ ಹಷಮತ್ ಶಾ, ಸಂಜನಾ ಗೆ ಕ್ರಿಮಿನಲ್ ಹಿನ್ನೆಲೆ ಇಲ್ಲ ಹಾಗಾಗಿ ಜಾಮೀನು ನೀಡಬೇಕು ಎಂದು ಒತ್ತಾಯಿಸಿದರು.

'ಈ ಹಿಂದೆ ಸಂಜಾ ವಿರುದ್ಧ ದೂರು ದಾಖಲಾಗಿಲ್ಲ'
ಈ ಹಿಂದೆ ಸಂಜನಾ ವಿರುದ್ಧ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ವಕೀಲರು, ಸುಪ್ರೀಂ ಕೋರ್ಟ್ ನ ತೀರ್ಪುಗಳನ್ನು ಓದಿ ಹೇಳಿದರು.

ಸೆಪ್ಟೆಂಬರ್ 8 ರಂದು ಬಂಧನ
ಸಂಜನಾ ಗಲ್ರಾನಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 8 ರಂದು ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
Recommended Video

ಹಲವು ಖ್ಯಾತ ನಾಮರ ವಿಚಾರಣೆ
ಸಂಜನಾ ಗಲ್ರಾನಿ ಜೊತೆಗೆ ನಟಿ ರಾಗಿಣಿ ದ್ವಿವೇದಿ, ರಾಗಿಣಿ ಹಾಗೂ ಸಂಜನಾ ಆಪ್ತರು ಹಲವರು ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಯೋಗಿ, ನಿರೂಪಕ ಅಕುಲ್ ಬಾಲಾಜಿ, ನಟ ದಿಗಂತ್, ಐಂದ್ರಿತಾ ರೈ, ನಿರೂಪಕಿ ಅನುಶ್ರೀ ಅವರುಗಳನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.


Click it and Unblock the Notifications











