ಡ್ರಗ್ಸ್ ಆರೋಪ ಮಾಡಿದ ಪ್ರಶಾಂತ್ ಸಂಬರಗಿಯನ್ನು ನಾಯಿಗೆ ಹೋಲಿಸಿದ ನಟಿ

ನಟಿ ಸಂಜನಾ ಗಲ್ರಾನಿಗೆ ಮಾದಕ ವ್ಯಸನವಿದೆ ಎಂದು ಆರೋಪ ಮಾಡಿದ ಪ್ರಶಾಂತ್ ಸಂಬರಗಿ ಮೇಲೆ ಉರಿದು ಬಿದ್ದಿದ್ದಾರೆ ಸಂಜನಾ.

Recommended Video

Sandalwood Drug Mafia ಬಗ್ಗೆ Kannada film Chamber ವಿಶೇಷ ಪತ್ರಿಕಾಗೋಷ್ಠಿ | Filmibeat Kannada

'ಗಬ್ಬುನಾಥ, ಸಂಜನಾ ಯಾವ ಮಟ್ಟಕ್ಕೆ ಇದ್ದಾರೆ ಎನ್ನುವುದು ಇಡೀ ಇಂಡಸ್ಟ್ರಿಗೆ ಗೊತ್ತಿದೆ, ಅವರ ಹೆಸರನ್ನು ಹೇಳಿ ನನ್ನ ಬಾಯಿ ಗಲೀಜು ಮಾಡಿಕೊಳ್ಳಲು ಇಷ್ಟವಿಲ್ಲ' ಎಂದು ಪ್ರಶಾಂತ್ ಸಂಬರಗಿ ತುಚ್ಛವಾಗಿಯೇ ಮಾತನಾಡಿದ್ದರು. ಇದು ಸಂಜನಾ ಅವರನ್ನು ಕೆರಳಿಸಿದೆ.

200 ರೂಪಾಯಿ ಗೆ ಬಿಟ್ಟಿ ಪ್ರಚಾರ ಪಡೆಯಲು ನಮ್ಮ ಮೇಲೆ ಪ್ರಶಾಂತ್ ಸಂಬರಗಿ ಆರೋಪ ಮಾಡುತ್ತಿದ್ದಾರೆ. ಆದರೆ ನಾಯಿ ಬೊಗಳಿದಾಗ, ನಾವು ತಿರುಗಿ ಬೊಗಳಬಾರದು ಎಂದಿದ್ದಾರೆ ನಟಿ ಸಂಜನಾ.

ನನ್ನ ಹೆಸರು ಹೇಳುವ ಯೋಗ್ಯತೆ ಅವನಿಗಿಲ್ಲ: ಸಂಜನಾ ಕಿಡಿ

ನನ್ನ ಹೆಸರು ಹೇಳುವ ಯೋಗ್ಯತೆ ಅವನಿಗಿಲ್ಲ: ಸಂಜನಾ ಕಿಡಿ

'ನಾನು ಡ್ರಗ್ಸ್ ವಿವಾದದ ಬಗ್ಗೆ ಈಗ ಮಾತನಾಡುವುದಿಲ್ಲ. ನನಗೆ ಚೀಪ್ ಪಬ್ಲಿಸಿಟಿ ಬೇಕಾಗಿಲ್ಲ. ಪ್ರಶಾಂತ್ ಸಂಬರಗಿಯನ್ನು ನಾನು ಭೇಟಿಯಾಗಿಲ್ಲ, ಆತ ಯಾರೆಂಬುದೂ ನನಗೆ ಗೊತ್ತಿಲ್ಲ. ನನ್ನ ಹೆಸರು ತೆಗೆದುಕೊಳ್ಳುವ ಯೋಗ್ಯತೆಯೂ ಆತನಿಗೆ ಇಲ್ಲ' ಎಂದು ಆಕ್ರೋಶ ಹೊರಹಾಕಿದ್ದಾರೆ.

ನಾನು 43 ಸಿನಿಮಾಗಳಲ್ಲಿ ಕೆಲಸ ಮಾಡಿದ್ದೀನಿ: ಸಂಜನಾ

ನಾನು 43 ಸಿನಿಮಾಗಳಲ್ಲಿ ಕೆಲಸ ಮಾಡಿದ್ದೀನಿ: ಸಂಜನಾ

'ಗಂಡ-ಹೆಂಡತಿ' ಒಂದು ಸಿನಿಮಾ ಮಾಡಿ ಇಷ್ಟೋಂದು ಹಣ ಹೇಗೆ ಸಂಪಾದನೆ ಮಾಡಿದಳು ಎಂದು ಪ್ರಶ್ನೆ ಮಾಡಿದ್ದಾರೆ. ನನ್ನ ವಿಕಿಪೀಡಿಯಾ ಪೇಜ್ ನೋಡಿ, ನಾನು 43 ಸಿನಿಮಾಗಳಲ್ಲಿ ನಟಿಸಿದ್ದೇನೆ. ಬಾಲಿವುಡ್‌ನಲ್ಲಿ ಟಿವಿಗಳಲ್ಲಿಯೂ ಕೆಲಸ ಮಾಡಿದ್ದೇನೆ. ಪವನ್ ಕಲ್ಯಾಣ್, ಪ್ರಭಾಸ್, ಮೋಹನ್ ಲಾಲ್, ಸುದೀಪ್, ದರ್ಶನ್, ಶಿವಣ್ಣ ಅವರಂಥಹವರೊಟ್ಟಿಗೆ ಕೆಲಸ ಮಾಡಿದ್ದೇನೆ ಎಂದಿದ್ದಾರೆ ಸಂಜನಾ.

'ಹದಿನಾರು ವರ್ಷ ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದೀನಿ'

'ಹದಿನಾರು ವರ್ಷ ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದೀನಿ'

ಹದಿನಾರು ವರ್ಷ ನಾನು ಸಿನಿಮಾರಂಗದಲ್ಲಿ ಕೆಲಸ ಮಾಡಿದ್ದೇನೆ. ನಾನು ಸಂಪಾದಿಸಿರುವ ಒಂದೊಂದು ರೂಪಾಯಿಗೂ ನನ್ನ ಬಳಿ ಲೆಕ್ಕವಿದೆ. ನಾನು ಪ್ರಶಾಂತ್ ಸಂಬರಗಿ ಅಂಥಹವರಿಗೆ ಉತ್ತರ ಕೊಡಬೇಕಿಲ್ಲ ಎಂದಿದ್ದಾರೆ ಸಂಜನಾ.

ನಟಿಯರು ಅಶಕ್ತರೆಂದು ಆರೋಪ ಮಾಡುತ್ತಿದ್ದಾರೆ: ಸಂಜನಾ

ನಟಿಯರು ಅಶಕ್ತರೆಂದು ಆರೋಪ ಮಾಡುತ್ತಿದ್ದಾರೆ: ಸಂಜನಾ

ನಾಯಕಿ ನಟಿಯರು ಅಶಕ್ತರು ಎಂದು ಅವರ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ಆತನಿಗೆ ನನ್ನ ಹೆಸರು ಹೇಳುವ ಧೈರ್ಯ ಸಹ ಇಲ್ಲ. ಅಷ್ಟು ಸಣ್ಣ ವ್ಯಕ್ತಿ ಆತ ಎಂದು ಪ್ರಶಾಂತ್ ಸಂಬರಗಿ ವಿರುದ್ಧ ಹರಿಹಾಯ್ದಿದ್ದಾರೆ ಸಂಜನಾ ಗಲ್ರಾನಿ.

More from Filmibeat

English summary
Actress Sanjana Gaglani lambasted on Prashant Sambargi for dragging her name in Drug issue.
Read more about: sanjana galrani
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X