For Quick Alerts
  ALLOW NOTIFICATIONS  
  For Daily Alerts

  ಬಾರ್ ನಲ್ಲಿ ಕಿರಿಕ್: ಸುದೀರ್ಘ ಪತ್ರ ಬರೆದು ಸ್ಪಷ್ಟನೆ ನೀಡಿದ ಸಂಜನಾ ಗಲ್ರಾನಿ

  |

  ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಮತ್ತು ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ನಡುವಿನ ಕಿರಿಕ್ ಪ್ರಕರಣ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದೆ. ಕ್ರಿಸ್ಮಸ್ ಈವ್ ಸಂದರ್ಭದಲ್ಲಿ ಕೋಝಿ ಬಾರ್ ನಲ್ಲಿ ಪಾರ್ಟಿ ಮಾಡುತ್ತಿದ್ದ ಸಂಜನಾ ಮತ್ತು ವಂದನಾ ಜೈನ್ ನಡುವೆ ಕುಡಿದ ಮತ್ತಿನಲ್ಲಿ ಮಾರಾಮಾರಿ ನಡೆದಿದೆ ಎನ್ನಲಾಗಿದೆ.

  ವಂದನಾ ಜೈನ್ ಗೆ ಸಂಜನಾ ವಿಸ್ಕಿ ಬಾಟಲ್ ನಲ್ಲಿ ಹೊಡೆದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಘಟನೆ ಸಂಬಂಧ ಕಬ್ಬನ್ ಪೊಲೀಸ್ ಸ್ಟೇಷನ್ ಗೆ ವಂದನಾ ಜೈನ್ ದೂರು ನೀಡಿದ್ದಾರೆ.

  ಇಷ್ಟೆಲ್ಲಾ ನಡೆದರೂ, ಪತ್ರಿಕಾ ಮತ್ತು ಮಾಧ್ಯಮ ಮಿತ್ರರಿಗೆ ಘಟನೆ ಬಗ್ಗೆ ಸಂಜನಾ ಗಲ್ರಾನಿ ಸ್ಪಷ್ಟನೆ ಕೊಟ್ಟಿರಲಿಲ್ಲ. ವದಂತಿಗಳು ಹೆಚ್ಚಾಗಿ ಹಬ್ಬಿದ ಬಳಿಕ ಪ್ರಕರಣದ ಕುರಿತು ಸುದೀರ್ಘ ಪತ್ರ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ನಟಿ ಸಂಜನಾ ಗಲ್ರಾನಿ ಹಂಚಿಕೊಂಡಿದ್ದಾರೆ. ಪತ್ರದ ಸಾರಾಂಶ ಇಲ್ಲಿದೆ ಓದಿರಿ...

  ಸಂಜನಾ ಬರೆದಿರುವ ಪತ್ರದಲ್ಲಿ ಏನಿದೆ.?

  ಸಂಜನಾ ಬರೆದಿರುವ ಪತ್ರದಲ್ಲಿ ಏನಿದೆ.?

  "ಇತ್ತೀಚೆಗೆ ನನ್ನ ಬಗ್ಗೆ ಹರಡುತ್ತಿರುವ ಪ್ರತಿಯೊಂದು ವಿಷಯವೂ ಕೇವಲ ಸುಳ್ಳು ವದಂತಿಯಾಗಿದೆ. ನನ್ನನ್ನು ದೂಷಿಸುತ್ತಿರುವ ಆ ಮಹಿಳೆಯ ಬಳಿ ಯಾವುದೇ ಪುರಾವೆಗಳಿಲ್ಲ. ಇಲ್ಲಿ ನಾನು ವಿವರವಾಗಿ ಹೇಳಲೂ ಸಾಧ್ಯವಾಗದಂತಹ ಅವಾಚ್ಯ ಪದಗಳನ್ನು ಬಳಸಿ ಅವಳು ನನ್ನನ್ನು, ನನ್ನ ತಾಯಿಯನ್ನು ಹಾಗೂ ನನ್ನ ಕುಟುಂಬವನ್ನು ನಿಂದಿಸಿದ್ದಾಳೆ. ನನ್ನಿಂದ ಹಾಗೂ ನನ್ನ ವೃತ್ತಿ ಜೀವನದಿಂದ ದೂರ ಇರಲು ಹಲವು ಬಾರಿ ಅವಳಿಗೆ ತಿಳಿ ಹೇಳಿದೆ. ಆದರೆ ನನ್ನ ವೃತ್ತಿ ಜೀವನವನ್ನು ಹಾಳು ಮಾಡಲು, ನನ್ನನ್ನು ಜೈಲಿಗೆ ಕಳುಹಿಸಲು ಹಾಗೂ ನನ್ನ ಹಾಗೂ ನನ್ನ ಕುಟುಂಬದವರ ಹೆಸರನ್ನು ಹಾಳು ಮಾಡಳು ಅವಳು ಸಂಚು ನಡೆಸುತ್ತಿದ್ದಾಳೆ. ಅವಳು ಯಾವಾಗಲೂ ಅಗ್ಗದ ಪ್ರಚಾರ ಬಯಸುವವಳು ಹಾಗೂ ಅವಳೊಂದಿಗೆ ಯಾವುದೇ ರೀತಿಯ ಸಂಬಂಧವನ್ನು ನಾನು ಬಯಸುವುದಿಲ್ಲ. ತಾವು ನನ್ನ ಬಗ್ಗೆ ಯಾವುದೇ ರೀತಿಯ ನಿರ್ಧಾರಕ್ಕೆ ಬರುವ ಮೊದಲು ದಯಮಾಡಿ ಅವಳ ಬಗ್ಗೆ ವಿವರವಾಗಿ ತಿಳಿದುಕೊಳ್ಳತಕ್ಕದ್ದು'' ಎಂದು ಪತ್ರದಲ್ಲಿ ಸಂಜನಾ ಗಲ್ರಾನಿ ಉಲ್ಲೇಖಿಸಿದ್ದಾರೆ.

  ಬಾರ್ ನಲ್ಲಿ ಕುಡಿದು ಗಲಾಟೆ: ನಟಿ ಸಂಜನಾ ವಿರುದ್ಧ ದೂರು ನೀಡಿದ ಬಾಲಿವುಡ್ ನಿರ್ಮಾಪಕಿಬಾರ್ ನಲ್ಲಿ ಕುಡಿದು ಗಲಾಟೆ: ನಟಿ ಸಂಜನಾ ವಿರುದ್ಧ ದೂರು ನೀಡಿದ ಬಾಲಿವುಡ್ ನಿರ್ಮಾಪಕಿ

  ವಿಸ್ಕಿ ಬಾಟಲ್ ನಿಂದ ಹೊಡೆದಿರುವ ಗುರುತು ಇದ್ಯಾ.?

  ವಿಸ್ಕಿ ಬಾಟಲ್ ನಿಂದ ಹೊಡೆದಿರುವ ಗುರುತು ಇದ್ಯಾ.?

  ''ನಾನು ಕಳೆದ 10 ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದೇನೆ ಹಾಗೂ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದೇನೆಯೇ ಹೊರತು ಬೇರೆ ಯಾವುದೇ ವಿಧವಾದ ಅಗ್ಗದ ಪ್ರಚಾರ ಬಯಸಿರುವುದಿಲ್ಲ. ನನ್ನನ್ನೇ ನಿರ್ದಿಷ್ಟವಾಗಿ ಗುರಿ ಮಾಡಿ ಈ ಅಗ್ಗದ ಪ್ರಚಾರಕ್ಕೆ ಎಳೆದು ತರಲಾಗಿದೆ. ಅವಳು ನನ್ನ ಕೈಯನ್ನು ತಿರುಚಿ, ನನ್ನ ಫೋನನ್ನು ಕಸಿದುಕೊಳ್ಳುತ್ತಿರುವ ಮೊಬೈಲ್ ವಿಡಿಯೋ ದೃಶ್ಯವನ್ನು ನಾನು ಈಗಾಗಲೇ ಸಾಕ್ಷಿಯಾಗಿ ಬಿಡುಗಡೆ ಮಾಡಿರುತ್ತೇನೆ. ಸದರಿ ವಿಡಿಯೋ ದೃಶ್ಯದಲ್ಲಿ ಅವರ ಮುಖಕ್ಕೆ ಅಥವಾ ತಲೆಗೆ ಏನಾದರೂ ಗಾಯವಾಗಿದೆಯೇ ಎಂದು ತಾವು ಗಮನಿಸಬಹುದು. ವಿಸ್ಕಿ ಬಾಟಲ್ ನಿಂದ ಹೊಡೆದಿದ್ದರೆ ಯಾವುದೇ ರೀತಿಯ ರಕ್ತದ ಕಲೆ/ಗುರುತು ಇರಬೇಕಲ್ಲವೇ? ನಾನು ನನ್ನ ಜೀವನದಲ್ಲಿ ಬೇಜವಾಬ್ದಾರಿಯುತವಾಗಿ ವರ್ತಿಸಿರುವುದಿಲ್ಲ. ನನ್ನ ವಿರುದ್ಧ ಇದೊಂದು ಆಧಾರರಹಿತ ಆರೋಪವಾಗಿದೆ'' - ಸಂಜನಾ ಗಲ್ರಾನಿ.

  ನಿರ್ಮಾಪಕಿ ವಂದನಾ ವಿರುದ್ಧ ಜೀವ ಬೆದರಿಕೆ ದೂರು ನೀಡಿದ ನಟಿ ಸಂಜನಾನಿರ್ಮಾಪಕಿ ವಂದನಾ ವಿರುದ್ಧ ಜೀವ ಬೆದರಿಕೆ ದೂರು ನೀಡಿದ ನಟಿ ಸಂಜನಾ

  ನಿರ್ಮಾಪಕಿ ಅಲ್ಲ.!

  ನಿರ್ಮಾಪಕಿ ಅಲ್ಲ.!

  ''ಅವಳು ತನ್ನನ್ನು ತಾನು ನಿರ್ಮಾಪಕಿಯೆಂದು ಸುಳ್ಳು ಪ್ರಚಾರ ಮಾಡಿಕೊಳ್ಳುತ್ತಾ, ನನ್ನನ್ನೇ ನಿರ್ದಿಷ್ಟವಾಗಿ ಗುರಿ ಮಾಡಿ ಈ ಅಗ್ಗದ ಪ್ರಚಾರಕ್ಕೆ ಎಳೆದು ತರುವ ಕೆಲಸ ಮಾಡಿದ್ದಾಳೆ. ಈ ರೀತಿಯ ಸುಳ್ಳು ಪ್ರಚಾರದ ಮೂಲಕ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾಳೆ. ನನಗೆ ನಿರ್ಮಾಪಕರ ಮೇಲೆ ಅಪಾರ ಗೌರವವಿದೆ ಹಾಗೂ ಅವರನ್ನು ನಾನು ದೇವರು ಹಾಗೂ ಅನ್ನದಾತರೆಂದು ನಂಬಿರುತ್ತೇನೆ'' - ಸಂಜನಾ ಗಲ್ರಾನಿ

  ಅಮಿತ್ ಮಿಶ್ರಾಗೂ ಹೀಗೆ ಮಾಡಿದ್ರು.!

  ಅಮಿತ್ ಮಿಶ್ರಾಗೂ ಹೀಗೆ ಮಾಡಿದ್ರು.!

  ''ಇದೇ ರೀತಿ ಈ ಮೊದಲು ಅವಳು ಅಮಿತ್ ಮಿಶ್ರಾ ಎಂಬ ಕ್ರಿಕೆಟ್ ಸ್ಪಿನ್ ಬೌಲರ್ ನನ್ನು ಮದುವೆಯಾಗಲು ನಾನಾ ರೀತಿಯ ಪ್ರಯತ್ನ ನಡೆಸಿ, ಅದು ಸಾಧ್ಯವಾಗದಿದ್ದಾಗ, ಅವರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಬ್ಲ್ಯಾಕ್ ಮೇಲ್ ಮಾಡಿ, ಅವರನ್ನು ಭಾರತ ಕ್ರಿಕೆಟ್ ತಂಡದಿಂದ ಹೊರಹಾಕುವ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿರುತ್ತಾಳೆ. ಈಗ ನಾನು ಅವಳ ಅಗ್ಗದ ಪ್ರಚಾರದ ಬಲೆಯಲ್ಲಿ ಸಿಲುಕಿರುತ್ತೇನೆ. ದಯವಿಟ್ಟು ಯಾವುದೇ ರೀತಿಯ ಪುರಾವೆಗಳಿಲ್ಲದ ಸುಳ್ಳು ವದಂತಿಗಳಿಗೆ ಕಿವಿಗೊಡದೆ, ನನ್ನ ರಕ್ಷಿಸಬೇಕಾಗಿ ಕೋರುತ್ತೇನೆ" ಎಂದು ಪತ್ರದಲ್ಲಿ ಸಂಜನಾ ಗಲ್ರಾನಿ ತಿಳಿಸಿದ್ದಾರೆ.

  English summary
  Kannada Actress Sanjana Galrani gives clarification on the allegations made by Bollywood Producer Vandana Jain.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X