For Quick Alerts
  ALLOW NOTIFICATIONS  
  For Daily Alerts

  ಕೋಕಾ ಕೋಲಾ ಹುಡುಗಿ ಈಗ ಬಾಲಿವುಡ್ ಸ್ಟಾರ್ ನಟಿ

  By Pavithra
  |

  ದೀಪಾವಳಿ ಹಬ್ಬಕ್ಕಾಗಿ ಕೋಕಾ ಕೋಲಾ ಕಂಪನಿಯವರು ಸಹೋದರ ಬಾಂದವ್ಯ ಬೆಸೆಯುವಂತಹ ಜಾಹೀರಾತನ್ನು ಮಾಡಿತ್ತು. ಜಾಹೀರಾತು ನೋಡಿದ ಪ್ರತಿಯೊಬ್ಬರು ಅದರಲ್ಲಿ ಅಭಿನಯಿಸಿದ ಹುಡುಗಿ ಯಾರು ಎಂದು ಗೂಗಲ್ ನ ಮೂಲೆ ಮೂಲೆಯಲ್ಲೂ ಹುಟುಕಾಟ ನಡೆಸಿದ್ದರು. ಅರೆ ಎಷ್ಟು ಚೆನ್ನಾಗಿದ್ದಾಳೆ ಮುಂದೊಂದು ದಿನ ಒಳ್ಳೆ ನಟಿ ಆಗಬಹುದು ಎಂದಿದ್ದರು. ಅದರಂತೆ ಈಗ ಈಕೆ ಬಾಲಿವುಡ್ ಸ್ಟಾರ್ ನಟಿ ಆಗಿ ಬದಲಾಗಿದ್ದಾರೆ.

  ಆಕೆಯೇ ಸಂಜನಾ ಸಾಂಗಿ, ಮಾಡೆಲ್ ಕ್ಷೇತ್ರದಲ್ಲಿ ಹಾಗೂ ಜಾಹೀರಾತು ಪ್ರಪಂಚದಲ್ಲಿ ಬಾರಿ ಹೆಸರು ಮಾಡಿರುವ ನಟಿ. ಸದ್ಯ ಸಂಜನಾ, ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಹಾಲಿವುಡ್ ನ 'ದಿ ಫಾಲ್ಟ್ ಇನ್ ಅವರ್ ಸ್ಟಾರ್' ಚಿತ್ರದ ಹಿಂದೆ ರಿಮೇಲ್ ನಲ್ಲಿ ಸಂಜನಾ ಹಾಗೂ ಸುಶಾಂತ್ ಒಟ್ಟಿಗೆ ಅಭಿನಯಿಸಲಿದ್ದಾರೆ.

  ಫಾಕ್ಸ್ ಸ್ಟಾರ್ ಸ್ಟುಡಿಯೋ ಸಿನಿಮಾವನ್ನ ನಿರ್ಮಾಣ ಮಾಡಲು ಮುಂದಾಗಿದ್ದು ಮುಖೇಶ್ ಛಬ್ರಾ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ. ಎ ಆರ್ ರೆಹಮಾನ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಂಜನಾ ಸಾಂಗಿ ಸಾಕಷ್ಟು ಫಾನ್ಸ್ ಫಾಲೋವರ್ ಇರುವ ನಟಿ ಆಗಿದ್ದು ಜಾಹೀರಾತಿನ ಅಭಿನಯದ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನ ಪಡೆದುಕೊಂಡಿದ್ದರು.

  ಇತ್ತೀಚಿಗೆ ಸಂಜನಾ ಹಿಂದಿ ಮೀಡಿಯಂ, ಫಿಕ್ರೆ ರಿಟರ್ನ್ಸ್, ರಾಕ್ ಸ್ಟಾರ್ ಚಿತ್ರದಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನ ನಿರ್ವಹಿಸಿದ್ದರು. ಸಂಜನಾ ಇನ್ ಸ್ಟಾಗ್ರಾಂ ನಲ್ಲಿ 11.7 ಕೆ ಫಾಲೋವರ್ಸ್ ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಪಾರ ಸಂಖ್ಯೆ ಅಭಿಮಾನಿಗಳನ್ನು ಹೊಂದಿರುವ ಸಂಜನಾ ಈ ಚಿತ್ರದ ಮೂಲಕ ಬಿ ಟೌನ್ ಸ್ಟಾರ್ ಆಗಿ ಮಿಂಚಲಿದ್ದಾರೆ.

  'ವಿರುಷ್ಕಾ' ಕಿಸ್ಸಿಂಗ್ ಸ್ಟೈಲ್ ಕಾಪಿ ಮಾಡಿ ಟೀಕೆಗೆ ಗುರಿಯಾದ 'ಬಿಗ್ ಬಾಸ್' ಪ್ರೇಮಿಗಳು!

  English summary
  sanjana sanghi selected as a heroin for Sushanth Singh Rajput's new film. Sushanth new film directed by Mukesh Chabra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X