ಸಂಜನಾ ಬಳಿ ಇರುವ ಆಸ್ತಿ ಎಷ್ಟು.? ಎರಡು ವಾರಕ್ಕೆ 'ಬಿಗ್ ಬಾಸ್' ಕೊಟ್ಟ ಸಂಭಾವನೆ ಅಷ್ಟೊಂದಾ.?

'ಗಂಡ ಹೆಂಡತಿ' ಸಿನಿಮಾ ಖ್ಯಾತಿಯ ನಟಿ ಸಂಜನಾ #ಮೀಟೂ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. 'ಗಂಡ ಹೆಂಡತಿ' ಸಿನಿಮಾ ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಸಂಜನಾ ಗಲ್ರಾನಿ ರೊಚ್ಚಿಗೆದ್ದಿದ್ದಾರೆ.

''ಬೇಕು ಅಂತ ಹೆಚ್ಚು ಕಿಸ್ಸಿಂಗ್ ಸೀನ್ ಮಾಡಿಸಿ ಕಿರುಕುಳ ಕೊಟ್ಟರು'' ಎಂದು ರವಿ ಶ್ರೀವತ್ಸ ವಿರುದ್ಧ ಸಂಜನಾ ಗಲ್ರಾನಿ ಆರೋಪಿಸಿದ್ದಾರೆ. ಸಂಜನಾ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು ಎಂಬ ಸಾಬೀತು ಮಾಡಲು ಇಂದು ನಿರ್ದೇಶಕ ಸಂಘ ಪತ್ರಿಕಾಗೋಷ್ಠಿ ಕರೆದಿತ್ತು.

'ಗಂಡ ಹೆಂಡತಿ' ಸಿನಿಮಾ ಬಿಡುಗಡೆ ವೇಳೆ ಸಂಜನಾ ಕೊಟ್ಟಿದ್ದ 'ಬೋಲ್ಡ್' ಹೇಳಿಕೆಗಳನ್ನು ಮಾಧ್ಯಮಗಳ ಮುಂದೆ ರವಿ ಶ್ರೀವತ್ಸ ಇಟ್ಟರು. ಅಲ್ಲದೇ, ಎರಡುವರೆ ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಸಂಜನಾ, ಕೋಟ್ಯಾಂತರ ರೂಪಾಯಿ ಆಸ್ತಿ ಮಾಡಿದ್ದು ಹೇಗೆ.? ಎಂದು ಪ್ರೆಸ್ ಮೀಟ್ ನಲ್ಲಿ ರವಿ ಶ್ರೀವತ್ಸ ಪ್ರಶ್ನಿಸಿದರು. ಮುಂದೆ ಓದಿರಿ....

ಐಟಿ ರಿಟರ್ನ್ಸ್ ಫೈಲ್ ಮಾಡಿದ್ದಾರಾ.?

ಐಟಿ ರಿಟರ್ನ್ಸ್ ಫೈಲ್ ಮಾಡಿದ್ದಾರಾ.?

''ನಿಮ್ಮ ಅಷ್ಟು ಕೋಟಿ ರೂಪಾಯಿ ಆಸ್ತಿ ಇದ್ಯಲ್ಲ.. ಅದರ ಐಟಿ ರಿಟರ್ನ್ಸ್ ಫೈಲ್ ಮಾಡಿದ್ದೀರಾ ನೀವು.? ಎರಡು ಲಕ್ಷಕ್ಕೆ ತಾನೇ ನೀವು ಬಂದ್ರಿ.. ಇವತ್ತು ನಿಮ್ಮ ಬಳಿ ಜಾಗ್ವಾರ್ ಕಾರ್ ಇದೆ. ನನ್ನ ಬಳಿ ಕೇವಲ ಒಂದು ಮಾರುತಿ ಬಲೇನೋ ಇದೆ. ನೀವು ಮನೆ ಕಟ್ಟಿದ್ದೀರಾ. ನಾನಿನ್ನೂ ಬಾಡಿಗೆ ಮನೆಯಲ್ಲಿ ಇರುವೆ'' - ರವಿ ಶ್ರೀವತ್ಸ, ನಿರ್ದೇಶಕ.

ನನ್ನ ಒಂದು ದಿನದ ಸಂಬಳ ಎಷ್ಟು ಗೊತ್ತಾ.?

ನನ್ನ ಒಂದು ದಿನದ ಸಂಬಳ ಎಷ್ಟು ಗೊತ್ತಾ.?

''ಇವತ್ತು ನನ್ನ ಒಂದು ದಿನದ ಸಂಬಳ ಒಂದುವರೆ ಲಕ್ಷ. ನಾನು 'ಬಾಹುಬಲಿ' ನಿರ್ಮಾಪಕರ 'ಸ್ವರ್ಣಖಡ್ಗಂ' ನಲ್ಲಿ ನಟಿಸ್ತಾಯಿದ್ದೇನೆ. ನನ್ನ ಸ್ಟಾಫ್ ನ ಒಂದು ದಿನದ ಸಂಬಳ ಹದಿನಾಲ್ಕು ಸಾವಿರ'' - ಸಂಜನಾ ಗಲ್ರಾನಿ, ನಟಿ

ಸಂಜನಾ ಮಾಡಿರುವ ಆಸ್ತಿ ಎಷ್ಟು.?

ಸಂಜನಾ ಮಾಡಿರುವ ಆಸ್ತಿ ಎಷ್ಟು.?

''ನನ್ನ ಬಳಿ ಜಾಗ್ವಾರ್, ಬಿ.ಎಂ.ಡಬ್ಲ್ಯೂ, ಹುಂಡೈ ವರ್ನಾ ಕಾರ್ ಇದೆ. ಚೆನ್ನೈನಲ್ಲಿ ಮನೆ ಇದೆ. ಬೆಂಗಳೂರಿನ ಇಂದಿರಾನಗರದಲ್ಲಿ ಸ್ವಂತ ಮನೆ ಇದೆ. ಹೆಬ್ಬಾಳದಲ್ಲಿ ಸ್ವಂತ ಮನೆ ಇದೆ. ರಾಜಾನುಕುಂಟೆಯಲ್ಲಿ ಸೈಟ್ ಮಾಡಿದ್ದೇನೆ. ಹೈದರಾಬಾದ್ ನಲ್ಲಿ ಸೈಟ್ ಗಳನ್ನು ಖರೀದಿ ಮಾಡಿದ್ದೇನೆ. ಎಲ್ಲದಕ್ಕೂ ನನ್ನ ಬಳಿ ಐಟಿ ರಿಟರ್ನ್ಸ್ ಇದೆ'' - ಸಂಜನಾ ಗಲ್ರಾನಿ, ನಟಿ

'ಬಿಗ್ ಬಾಸ್'ಗಾಗಿ ಪಡೆದ ಸಂಭಾವನೆ ಎಷ್ಟು.?

'ಬಿಗ್ ಬಾಸ್'ಗಾಗಿ ಪಡೆದ ಸಂಭಾವನೆ ಎಷ್ಟು.?

''ಸುದೀಪ್ ಸರ್ ಜೊತೆಗೆ 'ಬಿಗ್ ಬಾಸ್'ಗೋಸ್ಕರ, ಬರೀ ಎರಡು ವಾರಕ್ಕಾಗಿ ಇಪ್ಪತ್ತು ಲಕ್ಷ ಸಂಬಳ ತೆಗೆದುಕೊಂಡಿದ್ದೇನೆ'' ಎಂದು ಬಹಿರಂಗವಾಗಿ 'ಪಬ್ಲಿಕ್ ಟಿವಿ'ಗೆ ಸಂಜನಾ ಗಲ್ರಾನಿ ತಿಳಿಸಿದ್ದಾರೆ.

More from Filmibeat

English summary
Kannada Actress Sanjana was paid 20 lakhs for her 2 weeks stay in Bigg Boss house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X