For Quick Alerts
  ALLOW NOTIFICATIONS  
  For Daily Alerts

  ನಿರ್ಮಾಪಕಿ ವಂದನಾ ವಿರುದ್ಧ ಜೀವ ಬೆದರಿಕೆ ದೂರು ನೀಡಿದ ನಟಿ ಸಂಜನಾ

  |

  ಸ್ಯಾಂಡಲ್ ವುಡ್ ನಟಿ ಸಂಜನಾ ಮತ್ತು ವಂದನಾ ಜೈನ್ ಬಾರ್ ಗಲಾಟೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ನಟಿ ಸಂಜನಾ ಇಂದು ಬೆಳಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ಗೆ ತೆರಳಿ ವಂದನಾ ವಿರುದ್ಧ ಜೀವ ಬೆದರಿಕೆ ದೂರು ದಾಖಲಿಸಿದ್ದಾರೆ. ಡಿಸಿಪಿ ಚೇತನ್ ಸಿಂಗ್ ರಾಥೋಡ್ ಭೇಟಿಯಾಗಿ ಡಿಸೆಂಬರ್ 24ರಂದು ರಾತ್ರಿ ನಡೆದ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ.

  ಬಾರ್ ನಲ್ಲಿ ವಂದನಾ ಹಲ್ಲೆ ಮಾಡಿರುವ ಬಗ್ಗೆ ಮೆಡಿಕಲ್ ರೆಕಾರ್ಡ್ ಜೊತೆಗೆ ಬಂದು ಸಂಜನಾ ದೂರು ನೀಡಿದ್ದಾರೆ. ತಾಯಿ ಜೊತೆ ಪೊಲೀಸ್ ಸ್ಟೇಷನ್ ಗೆ ಆಗಮಿಸಿದ ಸಂಜನಾ, ವಂದನಾ ಅವರು ರಾತ್ರಿ ಫೋನ್ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ವಂದನಾ ವಿರುದ್ದ ದೂರು ಕೊಟ್ಟಿದ್ದಾರೆ.

  ಈ ಸಮಯದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಂಜನಾ, "ವಿಸ್ಕಿ ಬಾಟಲ್ ನಲ್ಲಿ ಹೊಡೆದರು ಎಂದು ಹೇಳಲಾಗುತ್ತಿದೆ, ಇದಕ್ಕೆ ಏನು ಸಾಕ್ಷಿ ಇದೆ, ಯಾವ ಆಧಾರದ ಮೇಲೆ ಈ ರೀತಿಯಾ ಸುದ್ದಿಗಳನ್ನು ಬಿತ್ತರಿಸಲಾಗುತ್ತಿದೆ ಎಂದು ಗರಂ ಆದರು. ನಾನು ಐದು ಭಾಷೆಯಲ್ಲಿ ಅಭಿನಯಿಸುತ್ತಿದ್ದೀನಿ ಈ ರೀತಿಯಾಗಿ ಹೇಳಿ ನನ್ನ ಹೆಸರನ್ನು ಹಾಳು ಮಾಡಬೇಡಿ" ಎಂದರು.

  ಬಾರ್ ನಲ್ಲಿ ಕುಡಿದು ಗಲಾಟೆ: ನಟಿ ಸಂಜನಾ ವಿರುದ್ಧ ದೂರು ನೀಡಿದ ಬಾಲಿವುಡ್ ನಿರ್ಮಾಪಕಿಬಾರ್ ನಲ್ಲಿ ಕುಡಿದು ಗಲಾಟೆ: ನಟಿ ಸಂಜನಾ ವಿರುದ್ಧ ದೂರು ನೀಡಿದ ಬಾಲಿವುಡ್ ನಿರ್ಮಾಪಕಿ

  "ಮೊದಲು ಗಲಾಟೆ ಮಾಡಿದ್ದು ವಂದನಾ, ಅವರು ಕೆಟ್ಟಪದಗಳಿಂದ ಬೈದರು, ಅಲ್ಲದೆ ತಾಯಿಯ ಬಗ್ಗೆ ಕೆಟ್ಟ ಪದಳಿಂದ ಬೈದರು ಹಾಗಾಗಿ ನಾನು ಕೂಡ ಬೈದೆ ಅಷ್ಟೆ, ವಿಸ್ಕಿ ಬಾಟಲ್ ನಿಂದ ಹೊಡೆದಿಲ್ಲ. ಗಲಾಟೆ ಆದ ರಾತ್ರಿ ವಂದನಾ ಪೊಲೀಸರಿಗೆ ಫೋನ್ ಮಾಡಿದ್ದರು, ನನ್ನನ್ನು ಅರೆಸ್ಟ್ ಮಾಡಲು ರಾತ್ರಿ ಇಬ್ಬರು ಪೊಲೀಸರು ಬಂದಿದ್ದರು. ಆದರೆ ಆ ಸಮಯದಲ್ಲಿ ನಾನು ಇರಲಿಲ್ಲ. ಹೋಟೆಲ್ ನಿಂದ ಹೊರಟಿದ್ದೆ" ಎಂದು ಹೇಳಿದ್ದಾರೆ.

  ಇನ್ನು ಒಂದುವೇಳೆ ವಂದನಾ ದೂರು ವಾಪಾಸ್ ಪಡೆದರೆ ನಾನು ದೂರನ್ನು ವಾಪಾಸ್ ತೆಗೆದುಕೊಳ್ಳುತ್ತೇನೆ. ಆಕೆಯ ಸಹವಾಸವೆ ಬೇಡ ನನಗೆ. ನಾನು ಈಗ ಸಿನಿಮಾದಲ್ಲಿ ಬ್ಯುಸಿಯಾಗಿದ್ದೀನಿ. ನನ್ನ ಹೆಸರು ಹಾಳಾಗುವುದು ಇಷ್ಟವಿಲ್ಲ ಎಂದು ಹೇಳಿದ್ದಾರೆ.

  Read more about: sanjana ಸಂಜನಾ
  English summary
  Sanjana Galrani filed complaint of A life threatening against Vandana Jain.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X