ಎಂ.ಎಲ್.ಎ ಹ್ಯಾರಿಸ್ ಪರವಾಗಿ ಟ್ವೀಟ್ ಮಾಡಿದ ನಟಿ ಸಂಜನಾ.!

By Harshitha

ಕಳೆದ ಮೂರ್ನಾಲ್ಕು ದಿನಗಳಿಂದ ಯಾವುದೇ ಸುದ್ದಿ ವಾಹಿನಿ ಹಾಕಿದ್ರೂ, ಅದರಲ್ಲಿ ಶಾಂತಿನಗರದ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಗೂಂಡಾಗಿರಿ ಬಗ್ಗೆಯೇ ಬ್ರೇಕಿಂಗ್ ನ್ಯೂಸ್ ಬರುತ್ತಿದೆ.

ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಇದೀಗ ಮೊಹಮ್ಮದ್ ನಲಪಾಡ್ ಜೈಲು ಪಾಲಾಗಿದ್ದಾರೆ. ಮೊಹಮ್ಮದ್ ನಲಪಾಡ್ ವರ್ತನೆ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಹೀಗಿರುವಾಗಲೇ, ಕನ್ನಡ ನಟಿ ಸಂಜನಾ ಗಲ್ರಾನಿ ಎಂ.ಎಲ್.ಎ ಹ್ಯಾರಿಸ್ ಪರವಾಗಿ ಟ್ವೀಟ್ ಒಂದನ್ನು ಮಾಡಿದ್ದಾರೆ.

''ಎರಡು ದಶಕಗಳಿಂದ ಪ್ರಾಮಾಣಿಕ ಲೀಡರ್ ಆಗಿರುವ ಎಂ.ಎಲ್.ಎ ಹ್ಯಾರಿಸ್ ಇದೀಗ ತಮ್ಮ ತಪ್ಪಿಲ್ಲದೇ, ಪುತ್ರ ಎಸಗಿರುವ ಕೃತ್ಯದಿಂದ ಬೆಲೆ ತೆರಬೇಕಾಗಿ ಬಂದಿರುವುದಕ್ಕೆ ಅನುಕಂಪವಿದೆ'' ಎಂದು ಶಾಸಕ ಹ್ಯಾರಿಸ್ ಪರವಾಗಿ ನಟಿ ಸಂಜನಾ ಟ್ವೀಟ್ ಮಾಡಿದ್ದಾರೆ.

ನಿಮ್ಮ ಜನಪ್ರತಿನಿಧಿ: ಉದ್ಯಮಿ ನಲಪಾಡ್ ಅಹ್ಮದ್ ಹ್ಯಾರೀಸ್

ಜೊತೆಗೆ, ''ಯು.ಬಿ.ಸಿಟಿಯಲ್ಲಿ ನಡೆದ ಘಟನೆ ಕೇಳಿ ನಿಜಕ್ಕೂ ಶಾಕ್ ಆಗಿದೆ. ಹಲ್ಲೆಗೊಳಗಾದ ವಿದ್ವತ್ ಗೆ ನ್ಯಾಯ ಸಿಗಲಿ. ಬಡವರಾಗಲಿ, ಶ್ರೀಮಂತರಾಗಲಿ.. ಕಾನೂನು ಎಲ್ಲರಿಗೂ ಒಂದೇ ಆಗಿರಲಿ'' ಎಂದೂ ಕೂಡ ಸಂಜನಾ ಟ್ವೀಟ್ ಮಾಡಿದ್ದಾರೆ.

ಮೊಹಮ್ಮದ್ ನಲಪಾಡ್ ನಿಂದ ಹಲ್ಲೆಗೊಳಗಾದ ವಿದ್ವತ್ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದೆ.

More from Filmibeat

English summary
Check out Kannada Actress Sanjana Galrani's tweet on on #NalapadAttackonVidvat. Sanjana has expressed her sympathies towards MLA Harris.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X