KGF 2 trailer launch event : 'ಕೆಜಿಎಫ್ 2' ಟ್ರೈಲರ್ ರಿಲೀಸ್‌ಗೆ ಬೆಂಗಳೂರಿಗೆ ಬಂದು ತಲುಪಿದ ಅತಿಥಿಗಳು ಯಾರ್ಯಾರು?

'ಕೆಜಿಎಫ್ 2' ಟ್ರೈಲರ್ ರಿಲೀಸ್‌ಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇದೆ. ಇಚ್ಟು ದಿನ 'ಕೆಜಿಎಫ್ 2' ಟ್ರೈಲರ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ರು. ಅದರಂತೆ ಇವತ್ತು ಸಂಜೆ 6.40ಕ್ಕೆ 'ಕೆಜಿಎಫ್ 2' ಬಹುನಿರೀಕ್ಷಿತ 'ಕೆಜಿಎಫ್ 2' ಟ್ರೈಲರ್ ಬಿಡುಗಡೆಯಾಗುತ್ತಿದೆ. 'ಕೆಜಿಎಫ್ 2' ಟ್ರೈಲರ್ ಬಿಡುಗಡೆಗೆ ಸಾಕಷ್ಟು ಗಣ್ಯಾತಿಗಣ್ಯರು ಬೆಂಗಳೂರಿಗೆ ಇಂದು ಆಗಮಿಸುತ್ತಿದ್ದಾರೆ. ಇವತ್ತಿನ ಟ್ರೈಲರ್ ರಿಲೀಸ್ ಕಾರ್ಯಕ್ರಮದ ಪ್ರಮುಖ ಕೇಂದ್ರ ಬಿಂದುಗಳಂದ್ರೆ ಅತಿಥಿಗಳು.

ಚಿತ್ರತಂಡದ ಕಲಾವಿದರು ಸೇರಿದಂತೆ ಹಲವು ವಿಶೇಷ ಅತಿಥಿಗಳು ಆಗಮಿಸಲಿದ್ದಾರೆ. ಈಗಾಗಲೇ ಗಾರ್ಡನ್ ಸಿಟಿಗೆ ಬಾಲಿವುಡ್‌ ನಟ ಸಂಜಯ್ ದತ್ ಕೂಡ ಆಗಮಿಸಿದ್ದಾಗಿದೆ. ಬೆಂಗಳೂರಿಗೆ ಬಂದ ಕೂಡಲೇ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಕೆಲ ಸಮಯ ಅಲ್ಲೆ ಕಳೆದಿದ್ದಾರೆ. ಬಳಿಕ ಅಲ್ಲಿಂದ ಸ್ಟಾರ್ ಹೋಟೆಲ್‌ಗೆ ತೆರಳಿರುವ ಅತಿಥಿಗಳು ವಿಶ್ರಾಂತಿ ಪಡೆಯುತ್ತಿದ್ದಾರೆ. ಇದರ ಜೊತೆಗೆ ಮಲಯಾಳಂ ನಟ ಪೃಥ್ವಿರಾಜ್‌ ಕೂಡ ಬೆಂಗಳೂರಿಗೆ ಆಗಮಿಸಿದ್ದಾರೆ.

ಮಲಯಾಳಂನ 'ಕೆಜಿಎಫ್2' ಟ್ರೈಲರ್ ಅನ್ನು ಪೃಥ್ವಿರಾಜ್ ಅವರೇ ಲಾಂಚ್ ಮಾಡಲಿದ್ದು, ಮಲಯಾಳಂನ ಡಿಸ್ಟ್ರಿಬ್ಯೂಷನ್ ರೈಟ್ಸ್ ಅನ್ನು ಕೂಡ ಪಡೆದುಕೊಂಡಿದ್ದಾರೆ. ಇಂದು (ಮಾ.27) ಮಧ್ಯಾಹ್ನವೇ ನಟ ಪೃಥ್ವಿರಾಜ್ ಕೂಡ ಬಂದು ತಲುಪಿದ್ದಾರೆ. 'ಕೆಜಿಎಫ್ 2' ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದ್ರಿಂದ, 'ಕೆಜಿಎಫ್ 2'ನ ಕನ್ನಡ ಟ್ರೈಲರ್ ಅನ್ನು ಶಿವರಾಜ್‌ ಕುಮಾರ್, ತೆಲುಗು ರಾಮ್ ಚರಣ್, ತಮಿಳು ಸೂರ್ಯ, ಮತ್ತು ಹಿಂದಿ ಟ್ರೈಲರ್ ಅನ್ನು ಫರ್ಹಾನ್ ಅಕ್ತರ್ ರಿಲೀಸ್ ಮಾಡಲಿದ್ದಾರೆ.

Sanjay Dutt and Prithviraj arrived bangalore for Kgf chapter 2 trailer Release event

ಟ್ರೈಲರ್ ರಿಲೀಸ್‌ಗೆ ಇನ್ನೇನು ಕೆಲವೇ ಗಂಟೆಗಳು ಭಾಕಿ ಇದ್ದು, ಮುಖ್ಯ ಅತಿಥಿಗಳು ಈಗಾಗಲೇ ಆಗಮಿಸುತ್ತಿದ್ದಾರೆ. ಇನ್ನು ಕೆಲ ಹೊತ್ತಿನಲ್ಲಿ ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಯಶ್, ಪ್ರಶಾಂತ್ ನೀಲ್ ಕೂಡ ಒರಾಯನ್ ಮಾಲ್ ತಲುಪಲಿದ್ದಾರೆ.

Recommended Video

KGF Chapter 2: Trailer Launch LIVE from Bangalore | Yash | Sanjay Dutt | Prashanth Neel | Raveena

Sanjay Dutt and Prithviraj arrived bangalore for Kgf chapter 2 trailer Release event

More from Filmibeat

English summary
Sanjay Dutt and Prithviraj arrived bangalore for Kgf chapter 2 trailer Release, Here is guest list details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X