ಧ್ರುವ ಸರ್ಜಾ 'KD' ಸಿನಿಮಾ ಶೂಟಿಂಗ್‌ ವೇಳೆ ಅವಘಡ: ಸಂಜಯ್ ದತ್‌ಗೆ ಪೆಟ್ಟು

ಧ್ರುವ ಸರ್ಜಾ ನಟನೆಯ 'KD' ಸಿನಿಮಾ ಶೂಟಿಂಗ್ ವೇಳೆ ಬಾಲಿವುಡ್ ನಟ ಸಂಜಯ್ ದತ್ ಗಾಯಗೊಂಡಿದ್ದಾರೆ. ಸಾಹಸ ಸನ್ನಿವೇಶದ ಚಿತ್ರೀಕರಣದ ವೇಳೆ ಬಾಂಬ್ ಬ್ಲಾಸ್ಟಿಂಗ್ ಸಮಯದಲ್ಲಿ ಸಂಜು ಬಾಬಗೆ ಪೆಟ್ಟಾಗಿದೆ. ಜೋಗಿ ಪ್ರೇಮ್‌ ನಿರ್ದೇಶನದ 'KD' ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗ್ತಿದ್ದು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಬಂಡವಾಳ ಹೂಡಿದೆ. ಮಾಗಡಿ ರಸ್ತೆಯ ಸೀಗೆನಹಳ್ಳಿಯಲ್ಲಿ ಚಿತ್ರೀಕರಣ ವೇಳೆ ಈ ಅವಘಡ ನಡೆದಿದೆ.

ಆಕ್ಷನ್ ಸನ್ನಿವೇಶಕ್ಕಾಗಿ ಸಣ್ಣ ಮಟ್ಟದ ಬಾಂಬ್ ಬ್ಲಾಸ್ಟ್ ನಡೆಸಲಾಗುತ್ತಿತ್ತು. ಈ ವೇಳೆ ಗ್ಲಾಸ್ ಪೀಸ್ ಸಂಜಯ್ ದತ್ ಕಣ್ಣಿನ ಕೆಳಭಾಗದಲ್ಲಿ ಬಿದ್ದು ಸಣ್ಣ ಪ್ರಮಾಣದ ಗಾಯವಾಗಿದೆ ಎಂದು ವರದಿಯಾಗಿದೆ. ಸಂಜಯ್ ದತ್‌ಗೆ ಗಾಯವಾದ ಬೆನ್ನಲ್ಲೇ ತಾತ್ಕಾಲಿಕವಾಗಿ ಸಿನಿಮಾ ಚಿತ್ರೀಕರಣ ನಿಲ್ಲಿಸಿದೆ ಚಿತ್ರತಂಡ. 'KGF ಚಾಪ್ಟರ್- 2' ಚಿತ್ರದಲ್ಲಿ ಅಧೀರನಾಗಿ ನಟಿಸಿದ ಬಳಿಕ ನಟ ಸಂಜಯ್‌ ದಕ್ಷಿಣದ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ.

Sanjay Dutt gets injured while shooting for Dhruva Sarja Starrer KD Movie in Bangalore

ನಿನ್ನೆ ಸಂಜೆ(ಮಂಗಳವಾರ) ಈ ಅವಘಡ ನಡೆದಿದ್ದು ಸಂಜಯ್ ದತ್ ಕೂಡಲೇ ಮುಂಬೈಗೆ ಮರಳಿದ್ದಾರೆ ಎನ್ನಲಾಗ್ತಿದೆ. ಇವತ್ತು ಹೆಚ್‌ಎಂಟಿ ಫ್ಯಾಕ್ಟರಿಯಲ್ಲಿ ಮತ್ತೆ 'KD' ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಪ್ರೇಮ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್‌ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಶಿಲ್ಪಾ ಶೆಟ್ಟಿ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಟೈಟಲ್ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಮೂಡಿ ಬರ್ತಿದೆ.

More from Filmibeat

English summary
Bollywood Actor Sanjay Dutt gets injured while shooting for Dhruva Sarja Starrer KD Movie in Bangalore. Jogi Prem Directed KD movie will be released in multiple languages. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X