ಪವರ್ ಸ್ಟಾರ್ 'ಯುವರತ್ನ' ಟ್ರೈಲರ್ ನೋಡಿ ಸಂಜಯ್ ದತ್ ಹೇಳಿದ್ದೇನು?

ಕನ್ನಡದ ಸಿನಿಮಾಗಳು ಗಡಿಗೂ ಮೀರಿ ಸದ್ದು ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಇತ್ತೀಚಿಗೆ ಸಾಕಷ್ಟು ಕನ್ನಡದ ಸಿನಿಮಾಗಳಿಗೆ ಪರಭಾಷೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ರಾಬರ್ಟ್ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆದ ಬೆನ್ನಲ್ಲೇ ಮತ್ತೊಂದು ಬಿಗ್ ಬಜೆಟ್ ನ ಬಿಗ್ ಸ್ಟಾರ್ ಸಿನಿಮಾ ಯುವರತ್ನ ಬಿಡುಗಡೆಗೆ ಭರ್ಜರಿ ತಯಾರಿ ನಡೆಸುತ್ತಿದೆ.

Recommended Video

ಯುವರತ್ನ ಟ್ರೈಲರ್ ನೋಡಿ ಫಿದಾ ಆದ್ರು ಅಧೀರ ಸಂಜಯ್ ದತ್ | Filmibeat Kannada

ಈಗಾಗಲೇ ಸಿನಿಮಾದ ಹಾಡುಗಳು, ಟೀಸರ್ ಮತ್ತು ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತೀಚಿಗೆ ರಿಲೀಸ್ ಆದ ಟ್ರೈಲರ್‌ಗೆ ಎಲ್ಲಾ ಕಡೆಯಿಂದ ಮೆಚ್ಚುಗೆ ಸಿಗುತ್ತಿದೆ. ವಿಶೇಷ ಎಂದರೆ ಪವರ್ ಸ್ಟಾರ್ ಯುವರತ್ನ ಟ್ರೈಲರ್ ನೋಡಿ ಬಾಲಿವುಡ್ ಮುನ್ನಾಭಾಯ್ ಸಂಜಯ್ ದತ್ ಕೂಡ ಹಾಡಿ ಹೊಗಳಿದ್ದಾರೆ.

ಸಂಜಯ್ ದತ್ ಸಾಮಾಜಿಕ ಜಾಲತಾಣದಲ್ಲಿ ಕನ್ನಡದ ಟ್ರೈಲರ್‌ನ ಲಿಂಕ್ ಶೇರ್ ಮಾಡುವ ಜೊತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಅದ್ಭುತವಾಗಿದೆ. ಇಡೀ ಯುವರತ್ನ ತಂಡಕ್ಕೆ ಒಳ್ಳೆಯದಾಗಲಿ' ಎಂದು ಹರಿಸಿದ್ದಾರೆ. ಸಂಜಯ್ ದತ್ ಟ್ವೀಟ್‌ಗೆ ಪವರ್ ಸ್ಟಾರ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

 Sanjay Dutt reaction on Puneeth Rajkumar starrer Yuvaratna movie trailer

ಈ ಹಿಂದೆಯೂ ಯುವರತ್ನ ಸಿನಿಮಾದ ಬಗ್ಗೆ ಸಂಜಯ್ ದತ್ ಟ್ವೀಟ್ ಮಾಡಿದ್ದರು. ಟೀಸರ್ ರಿಲೀಸ್ ಆದ ಸಮಯದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಇದೀಗ ಟ್ರೈಲರ್ ಶೇರ್ ಮಾಡಿರುವುದು ಕನ್ನಡ ಅಭಿಮಾನಿಗಳಿಗೆ ಖುಷಿ ತಂದಿದೆ.

ಬಹುನಿರೀಕ್ಷೆಯ ಯುವರತ್ನ ಏಪ್ರಿಲ್ 1ಕ್ಕೆ ತೆರೆಗೆ ಬರುತ್ತಿದೆ. ಈಗಾಗಲೇ ಸಿನಿಮಾತಂಡ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದು, ಪ್ರತೀ ಜಿಲ್ಲೆಗೆ ಭೇಟಿ ನೀಡಿ, ಅಭಿಮಾನಿಗಳನ್ನು ಭೇಟಿಯಾಗುತ್ತಿದ್ದಾರೆ. ಬೆಳಗಾವಿ, ಹುಬ್ಬಳ್ಳಿ, ಕಲಬುರ್ಗಿ ಕಡೆ ಮೊದಲ ಪಯಣ ಬೆಳೆಸಿರುವ ಸಿನಿಮಾತಂಡಕ್ಕೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ಸಿಕ್ಕಿದೆ.

More from Filmibeat

English summary
Bollywood Actor Sanjay Dutt reaction on Puneeth Rajkumar starrer Yuvaratna movie trailer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X