For Quick Alerts
  ALLOW NOTIFICATIONS  
  For Daily Alerts

  ಮಾರಕ ಖಾಯಿಲೆ ವಿರುದ್ಧ ಹೋರಾಡಿ ಗೆದ್ದ 'ಅಧೀರ' ಸಂಜಯ್ ದತ್

  |

  ನಟ ಸಂಜಯ್ ದತ್ ಕಳೆದ ಎರಡು ತಿಂಗಳಿನಿಂದ ತೀವ್ರ ಒತ್ತಡದಲ್ಲಿದ್ದರು. ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ಸಂಜಯ್ ಕಳೆದ ಒಂದು ತಿಂಗಳಿನಿಂದ ಸತತ ಚಿಕಿತ್ಸೆಗೆ ಒಳಗಾಗಿದ್ದರು.

  ಆದರೆ ಈಗ ಸಂಜಯ್ ದತ್ ತಮ್ಮ ಆರೋಗ್ಯದ ಬಗ್ಗೆ ಸಿಹಿ ಸುದ್ದಿಯೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ಅಭಿಮಾನಿಗಳಿಗೆ ಪತ್ರ ಬರೆದಿರುವ ಸಂಜಯ್ ದತ್, 'ನಾನು ಆರೋಗ್ಯವಾಗಿದ್ದೇನೆ' ಎಂದಿದ್ದಾರೆ.

  ಸಂಜಯ್ ದತ್ ಗೆ 4ನೇ ಹಂತದ ಕ್ಯಾನ್ಸರ್ ಎಂದು ಖಚಿತ ಪಡಿಸಿದ ಆಸ್ಪತ್ರೆ ಮೂಲಗಳುಸಂಜಯ್ ದತ್ ಗೆ 4ನೇ ಹಂತದ ಕ್ಯಾನ್ಸರ್ ಎಂದು ಖಚಿತ ಪಡಿಸಿದ ಆಸ್ಪತ್ರೆ ಮೂಲಗಳು

  ಹೌದು, ಸಂಜಯ್ ದತ್ ಪತ್ರದಲ್ಲಿ ಹೇಳಿರುವಂತೆ ಅವರು ಮಾರಕ ಕ್ಯಾನ್ಸರ್‌ನಿಂದ ಗುಣಮುಖ ಆಗಿದ್ದಾರಂತೆ. ಇದಕ್ಕಾಗಿ ಅವರು ಕುಟುಂಬ ಸದಸ್ಯರು, ವೈದ್ಯರು, ಅಭಿಮಾನಿಗಳಿಗೆ ಧನ್ಯವಾದವನ್ನು ಸಹ ತಿಳಿಸಿದ್ದಾರೆ.

  ಅಪಾಯಕಾರಿ ಶ್ವಾಸಕೋಶದ ಕ್ಯಾನ್ಸರ್ ಆಗಿತ್ತು

  ಅಪಾಯಕಾರಿ ಶ್ವಾಸಕೋಶದ ಕ್ಯಾನ್ಸರ್ ಆಗಿತ್ತು

  ನಟ ಸಂಜಯ್ ದತ್‌ ಗೆ ಅಪಾಯಕಾರಿಯಾದ ಶ್ವಾಸಕೋಶದ ಕ್ಯಾನ್ಸರ್ ಆಗಿತ್ತು. ಆಗಸ್ಟ್ 8 ರಂದು ಸಂಜಯ್ ದತ್‌ಗೆ ತೀವ್ರ ಉಸಿರಾಟದ ಸಮಸ್ಯೆ ಎದುರಾಗಿತ್ತು. ಕೊರೊನಾ ಇರಬಹುದು ಎಂಬ ಊಹೆ ಕುಟುಂಬದವರದ್ದಾಗಿತ್ತು, ಆದರೆ ತಪಾಸಣೆ ಬಳಿಕ ಸಂಜಯ್‌ಗೆ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು.

  ಸಂಜಯ್ ದತ್ ಈ ಫೋಟೋ ನೋಡಿ ಮರುಗಿದ ಅಭಿಮಾನಿಗಳು: ಆರೋಗ್ಯದ ಬಗ್ಗೆ ಹೆಚ್ಚಿದ ಚಿಂತೆಸಂಜಯ್ ದತ್ ಈ ಫೋಟೋ ನೋಡಿ ಮರುಗಿದ ಅಭಿಮಾನಿಗಳು: ಆರೋಗ್ಯದ ಬಗ್ಗೆ ಹೆಚ್ಚಿದ ಚಿಂತೆ

  ಸಂಜಯ್ ದತ್‌ಗೆ ನಾಲ್ಕನೇ ಹಂತದ ಕ್ಯಾನ್ಸರ್ ಆಗಿತ್ತು

  ಸಂಜಯ್ ದತ್‌ಗೆ ನಾಲ್ಕನೇ ಹಂತದ ಕ್ಯಾನ್ಸರ್ ಆಗಿತ್ತು

  ಸಂಜಯ್ ದತ್‌ ಗೆ ನಾಲ್ಕನೇ ಹಂತದ ಶ್ವಾಸಕೋಶದ ಕ್ಯಾನ್ಸರ್‌ ಇರುವುದು ಪತ್ತೆಯಾಗಿತ್ತು. ಸಂಜಯ್ ದತ್ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳುತ್ತಾರೆ ಎಂದು ಸುದ್ದಿ ಹರಡಿತ್ತು, ಆದರೆ ಸಂಜಯ್, ತಮ್ಮ ಚಿಕಿತ್ಸೆಯನ್ನು ಭಾರತದಲ್ಲಿಯೇ ಮಾಡಿಸಿಕೊಂಡರು. ಚಿಕಿತ್ಸೆ ಸಮಯದಲ್ಲಿ ಸಂಜಯ್ ದೇಹ ಕೃಶಗೊಂಡಿತ್ತು.

  ಮಕ್ಕಳ ಹುಟ್ಟುಹಬ್ಬಕ್ಕೆ ನನ್ನ ಆರೋಗ್ಯವೇ ಉಡುಗೊರೆ: ಸಂಜಯ್

  ಮಕ್ಕಳ ಹುಟ್ಟುಹಬ್ಬಕ್ಕೆ ನನ್ನ ಆರೋಗ್ಯವೇ ಉಡುಗೊರೆ: ಸಂಜಯ್

  'ನನಗೆ ಹಾಗೂ ನನ್ನ ಕುಟುಂಬಕ್ಕೆ ಕೆಲವು ದಿನಗಳು ಬಹಳ ಕಠಿಣವಾಗಿದ್ದವು, ಆದರೆ ದೇವರು, ತನ್ನ ವೀರ ಸೈನಿಕನಿಗೆ ಕಠಿಣವಾದ ಯುದ್ಧವನ್ನು ನೀಡುತ್ತಾನೆ. ನಾನು ಆ ಯುದ್ಧ ಗೆದ್ದಿದ್ದೇನೆ. ಮಕ್ಕಳ ಹುಟ್ಟುಹಬ್ಬಕ್ಕೆ ನಾನು ಆರೋಗ್ಯವಾಗಿ ಬಂದಿರುವುದು ನಾನು ನೀಡುತ್ತಿರುವ ಉಡುಗೊರೆ' ಎಂದು ಪತ್ರದಲ್ಲಿ ಬರೆದಿದ್ದಾರೆ ಸಂಜಯ್ ದತ್.

  Big News: ಕೆಜಿಎಫ್ ಚಾಪ್ಟರ್ 2 ಬಗ್ಗೆ ಕೊನೆಗೂ ಸ್ಪಷ್ಟನೆ ನೀಡಿದ ಸಂಜಯ್ ದತ್Big News: ಕೆಜಿಎಫ್ ಚಾಪ್ಟರ್ 2 ಬಗ್ಗೆ ಕೊನೆಗೂ ಸ್ಪಷ್ಟನೆ ನೀಡಿದ ಸಂಜಯ್ ದತ್

  KGF ಸುಂದರಿಗೆ ವಿಶೇಷವಾಗಿ ವಿಶ್ ಮಾಡಿದ ಕ್ಯಾಮೆರಾಮೆನ್ ಭುವನ್ ಗೌಡ | Happy Birthday Srinidhi Shetty |Filmibeat
  ವೈದ್ಯೆ ಸೇವಂತಿಗೆ ಧನ್ಯವಾದ ತಿಳಿಸಿದ ಸಂಜಯ್

  ವೈದ್ಯೆ ಸೇವಂತಿಗೆ ಧನ್ಯವಾದ ತಿಳಿಸಿದ ಸಂಜಯ್

  ನಿಮ್ಮೆಲ್ಲರ (ಅಭಿಮಾನಿಗಳ) ಹಾರೈಕೆ ಇಲ್ಲದೇ ಹೋಗಿದ್ದರೆ ನಾನು ಯುದ್ಧದಲ್ಲಿ ಗೆಲ್ಲಲಾಗುತ್ತಿರಲಿಲ್ಲ ಎಂದಿರುವ ಸಂಜಯ್ ದತ್, ತಮಗೆ ಚಿಕಿತ್ಸೆ ನೀಡಿದ ಕೋಕಿಲಾ ಬೇನ್ ಆಸ್ಪತ್ರೆಯ ವೈದ್ಯೆ ಸೇವಂತಿ ಹಾಗೂ ಎಲ್ಲಾ ವೈದ್ಯ ಹಾಗೂ ವೈದ್ಯಕೇತರ ಸಿಬ್ಬಂದಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

  English summary
  Actor Sanjay Dutt who suffering from lungs cancer now recovered from deadly disease. He thanked his family, fans and doctors who treated him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X