For Quick Alerts
  ALLOW NOTIFICATIONS  
  For Daily Alerts

  ಸಂಜಯ್ ದತ್ ಹಂಚಿಕೊಂಡ ಕೆಜಿಎಫ್ 2 ಪೋಸ್ಟರ್ ಸಖತ್ ವೈರಲ್

  |

  ಎಲ್ಲೆಲ್ಲಿಯೂ ಕೆಜಿಎಫ್ 2 ಸಿನಿಮಾದ್ದೇ ಮಾತು. ಇನ್ನೆರಡು ದಿನಗಳಲ್ಲಿ ಕೆಜಿಎಫ್ 2 ಟೀಸರ್ ಬಿಡುಗಡೆ ಆಗಲಿದ್ದು, ರಾಕಿ ಭಾಯ್ ಹಾಗೂ ಅಧೀರನ ಮೊದಲ ಲುಕ್ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ.

  Sanjay Dutt ಪೋಸ್ಟ್ ನೋಡಿ ಹೆಚ್ಚಾಯ್ತು ಅಭಿಮಾನಿಗಳ ಕುತೂಹಲ | Fimibeat Kannada

  ಕೆಜಿಎಫ್ 2 ನಲ್ಲಿ ಅಧೀರ ಪಾತ್ರದಲ್ಲಿ ನಟಿಸಿರುವ ಸಂಜಯ್ ದತ್ ಇಂದು ಸಿನಿಮಾದ ಪೋಸ್ಟರ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟರ್ ಸಹ ಸಖತ್ ವೈರಲ್ ಆಗುತ್ತಿದೆ.

  ಸಂಜಯ್ ದತ್ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ ಅಧೀರನ ಕತ್ತಿ ಹಿಡಿದ ಕೈ ಮಾತ್ರವೇ ಕಾಣುತ್ತಿದೆ. ಬೆರಳಿಗೆ ತೊಟ್ಟಿರುವ ಸಿಂಹದ ಮುಖದ ಉಂಗುರ ಅಧೀರನ ಪಾತ್ರದ ಗುರುತು ಹೇಳುತ್ತಿದೆ.

  ಅಧೀರನ ಪಾತ್ರದ ಪೋಸ್ಟರ್ ಅನ್ನು ಹಂಚಿಕೊಂಡಿರುವ ಸಂಜಯ್ ದತ್, 'ಇನ್ನೆರಡು ದಿನ ಅಷ್ಟೆ. ಅಧೀರನನ್ನು ನಿಮಗೆ ಪರಿಚಯಿಸಲಿದ್ದೇವೆ' ಜನವರಿ 8 ಕ್ಕೆ ಬೆಳಿಗ್ಗೆ 10:18 ಕ್ಕೆ ಕೆಜಿಎಫ್ 2 ಟೀಸರ್ ಬಿಡುಗಡೆ ಆಗಲಿದೆ, ನೆನಪಿಟ್ಟುಕೊಳ್ಳಿ ಎಂದಿದ್ದಾರೆ ಸಂಜಯ್ ದತ್.

  ಜನವರಿ 8 ರಂದು ನಟ ಯಶ್ ಹುಟ್ಟುಹಬ್ಬವಿದ್ದು, ಅದೇ ದಿನ ಬೆಳಿಗ್ಗೆ ಕೆಜಿಎಫ್ 2 ಟೀಸರ್ ಬಿಡುಗಡೆ ಆಗುತ್ತಿದೆ. ಅದು ಮಾತ್ರವೇ ಅಲ್ಲದೆ, ತಮಿಳಿನ ಮಾಸ್ಟರ್ ಸಿನಿಮಾ ಬಿಡುಗಡೆ ಆದಾಗ ಚಿತ್ರಮಂದಿರಗಳಲ್ಲಿ ಸಹ ಟ್ರೇಲರ್ ಅನ್ನು ಪ್ರದರ್ಶಿಸಲು ಚಿತ್ರತಂಡ ಯೋಜನೆ ರೂಪಿಸಿದೆ.

  ಕೆಜಿಎಫ್ 2 ಸಿನಿಮಾದಲ್ಲಿ ರಾಕಿ ಭಾಯ್ ಆಗಿ ಯಶ್, ಅಧೀರನಾಗಿ ಸಂಜಯ್ ದತ್, ರಮಿಕಾ ಸೇನ್ ಆಗಿ ರವೀನಾ ಟಂಡನ್, ರೀಮಾ ಪಾತ್ರದಲ್ಲಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಕೆಜಿಎಫ್ ಮೊದಲ ಭಾಗದಲ್ಲಿ ಇರದಿದ್ದ ಹಲವು ಪಾತ್ರಗಳು ಕೆಜಿಎಫ್ 2 ನಲ್ಲಿ ಕಾಣಿಸಿಕೊಳ್ಳಲಿವೆ. ನಟ ಪ್ರಕಾಶ್ ರೈ ಕೆಜಿಎಫ್ 2 ನಲ್ಲಿ ಇರಲಿದ್ದಾರೆ.

  English summary
  Actor Sanjay Dutt shared KGF 2 movie poster. Teaser will be out on January 08 on Yash's birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X