ಅಧೀರ ಪಾತ್ರವನ್ನ ಸಂಜಯ್ ದತ್ ಯಾವುದಕ್ಕೆ ಹೋಲಿಸಿದ್ರು ಗೊತ್ತಾ?

Recommended Video

KGF 2 : ಅಧೀರ ಪಾತ್ರವನ್ನ ಸಂಜಯ್ ದತ್ ಹೋಲಿಸಿದ್ದು ಯಾವುದಕ್ಕೆ ಗೊತ್ತಾ? | FILMIBEAT KANNADA

ಬಾಲಿವುಡ್ ಸೂಪರ್ ಸ್ಟಾರ್ ನಟ ಸಂಜಯ್ ದತ್ ಕೆಜಿಎಫ್ ಚಾಪ್ಟರ್-2 ಚಿತ್ರದಲ್ಲಿ ಅಧೀರನಾಗಿ ನಟಿಸುತ್ತಿದ್ದಾರೆ. ಈ ಮೂಲಕ ಕನ್ನಡಕ್ಕೆ ಅಧಿಕೃತವಾಗಿ ದತ್ ಪ್ರವೇಶವಾಗಿದೆ.

ಅಧೀರ ಪಾತ್ರ ಕೆಜಿಎಫ್ ಚಿತ್ರದ ಬಹುಮುಖ್ಯ ವಿಲನ್ ಪಾತ್ರ. ಮೊದಲ ಭಾಗದಲ್ಲಿ ಅಷ್ಟಾಗಿ ಪ್ರಾಮುಖ್ಯತೆ ಇಲ್ಲದ ಈ ಪಾತ್ರ ಸೆಕೆಂಡ್ ಚಾಪ್ಟರ್ ನಲ್ಲಿ ಕಥೆಗೆ ಪ್ರಧಾನವಾಗಿದೆ. ಅದಕ್ಕಾಗಿಯೇ ಸಂಜಯ್ ದತ್ ಎಂಬ ಅದ್ಭುತ ನಟನನ್ನ ಈ ಪಾತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

ಈಗಾಗಲೇ ಅಧೀರನ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ. ಸಂಜಯ್ ದತ್ ಆಗಮನದಿಂದ ಕೆಜಿಎಫ್ ಚಿತ್ರವನ್ನ ಬಾಲಿವುಡ್ ಮಂದಿ ಸ್ವಲ್ಪ ಗಂಭೀರವಾಗಿ ಪರಿಗಣಿಸಿದ್ದಾರೆ.

Sanjay Dutt Spoke about Adhira

ಇನ್ನು ಅಧೀರ ಪಾತ್ರದ ಬಗ್ಗೆ ಮಾತನಾಡಿದ ಸಂಜಯ್ ದತ್ ''ಈ ಪಾತ್ರವನ್ನ ಹಾಲಿವುಡ್ ಸೂಪರ್ ಹಿಟ್ ಸಿನಿಮಾ ಅವೆಂಜರ್ಸ್ ಸರಣಿಯಲ್ಲಿ ಬರುವ ಥಾನೋಸ್ ಗೆ ಹೋಲಿಸಿದ್ದಾರೆ. ಥಾನೋಸ್ ರೀತಿಯಾದ ಪಾತ್ರ ಅಧೀರ ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದ್ದಾರೆ.

''ಅಧೀರ ಪವರ್ ಫುಲ್ ಪಾತ್ರ. ನೀವು ಅವೇಂಜರ್ ಸಿನಿಮಾ ನೋಡಿದ್ದರೆ, ಅದರಲ್ಲಿ ಬರುವ ಥಾನೋಸ್ ಪಾತ್ರದಂತೆ ಇದು. ಬಹಳ ಭಯಂಕರ ಪಾತ್ರ ಮತ್ತು ಭಯಂಕರ ಗೆಟಪ್ ಅದು. ನಾನು ಕುತೂಹಲದಿಂದ ಕಾಯ್ತಿದ್ದೇನೆ'' ಎಂದು ಸಂಜಯ್ ದತ್ ಮಾಧ್ಯಮಗಳ ಜೊತೆ ಮಾತನಾಡುವಾಗ ಹೇಳಿದರು.

60ನೇ ವರ್ಷಕ್ಕೆ ಕಾಲಿಟ್ಟು ಸಂಜಯ್ ದತ್ ಈಗ ಕನ್ನಡಕ್ಕೆ ಬರ್ತಿದ್ದಾರೆ. ಯಶ್ ಅಭಿನಯದ ಈ ಚಿತ್ರವನ್ನ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದು, ಪ್ರಮುಖ ಪಾತ್ರದಲ್ಲಿ ರವಿನಾ ಟಂಡನ್ ಕೂಡ ಬಣ್ಣ ಹಚ್ಚಿದ್ದಾರೆ. ಈಗಷ್ಟೇ ಚಿತ್ರೀಕರಣ ಆರಂಭಿಸಿರುವ ಕೆಜಿಎಫ್ 2, 2020ರಲ್ಲಿ ತೆರೆಗೆ ಬರಲಿದೆ.

More from Filmibeat

English summary
Bollywood actor Sanjay Dutt Spoke about his role Adhira in KGF.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X