'ಕೆಡಿ'ಗೆ ಜೊತೆಯಾದ ಅಧೀರ! ಮತ್ತೊಂದು ಕನ್ನಡ ಸಿನಿಮಾ ಶೂಟಿಂಗ್‌ಗೆ ಸಂಜಯ್ ದತ್ ಹಾಜರು

By ಫಿಲ್ಮಿಬೀಟ್ ಡೆಸ್ಕ್

'ಕೆಜಿಎಫ್ 2' ಸಿನಿಮಾದಲ್ಲಿ ಅಧೀರನಾಗಿ ಅಬ್ಬರಿಸಿದ್ದ ನಟ ಸಂಜಯ್ ದತ್ ಈಗ ಮತ್ತೊಂದು ಕನ್ನಡ ಸಿನಿಮಾದಲ್ಲಿ ನಟಿಸಲು ಆಗಮಿಸಿದ್ದಾರೆ.

ಪ್ರೇಮ್ ನಿರ್ದೇಶಿಸಿ ಧ್ರುವ ಸರ್ಜಾ ನಟಿಸುತ್ತಿರುವ 'ಕೆಡಿ' ಸಿನಿಮಾದಲ್ಲಿ ಸಂಜಯ್ ದತ್ ಕಾಣಿಸಿಕೊಳ್ಳಲಿದ್ದು, ನಿನ್ನೆಯಷ್ಟೆ 'ಕೆಡಿ'ಗೆ ಆಗಮಿಸಿ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂಜಯ್ ದತ್ ಅವರನ್ನು ಚಿತ್ರತಂಡ ಬಹು ಆತ್ಮೀಯವಾಗಿ ಸ್ವಾಗತಿಸಿದೆ. ಚಿತ್ರೀಕರಣ ಈಗಾಗಲೇ ಶುರುವಾಗಿದ್ದು ಕೆಲವು ದಿನಗಳ ಕಾಲ್‌ಶೀಟ್ ಅನ್ನಷ್ಟೆ ಸಂಜಯ್ ದತ್ ಸಿನಿಮಾಕ್ಕಾಗಿ ನೀಡಿದ್ದಾರಾದ್ದರಿಂದ ಚಿತ್ರೀಕರಣ ಭರದಿಂದ ಸಾಗಲಿದೆ.

Sanjay Dutt Started Shooting For Kannada Movie KD Staring Dhruva Sarja

ಕೆವಿಎನ್ ಪ್ರೊಡಕ್ಷನ್‌ನವರು 'ಕೆಡಿ' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಸಿನಿಮಾದಲ್ಲಿ ಸಂಜಯ್ ದತ್ ಮಾತ್ರವೇ ಅಲ್ಲದೆ ಇನ್ನೂ ಕೆಲವು ಬಹುಭಾಷಾ ಸ್ಟಾರ್ ನಟರು ನಟಿಸುತ್ತಿದ್ದಾರೆ.

ಧ್ರುವ ಸರ್ಜಾ ಮುಖ್ಯ ನಾಯಕರಾಗಿರುವ ಈ ಸಿನಿಮಾದಲ್ಲಿ ನಟ ರವಿಚಂದ್ರನ್, ಮಲಯಾಳಂನ ಮೋಹನ್‌ಲಾಲ್, ತಮಿಳು ಚಿತ್ರರಂಗದ ಸ್ಟಾರ್ ನಟ ವಿಜಯ್ ಸೇತುಪತಿ, ಇನ್ನೂ ಕೆಲವು ದೊಡ್ಡ ನಟರು ಸಿನಿಮಾದ ಭಾಗವಾಗಲಿದ್ದಾರೆ.

ಈಗಷ್ಟೆ 'ಮಾರ್ಟಿನ್' ಸಿನಿಮಾ ಮುಗಿಸಿರುವ ನಟ ಧ್ರುವ ಸರ್ಜಾ, ಪ್ರೇಮ್‌ರ 'ಕೆಡಿ' ಸಿನಿಮಾಕ್ಕಾಗಿ ತಯಾರಾಗಿದ್ದಾರೆ. ಸಿನಿಮಾಕ್ಕಾಗಿ ಕೆಲವೇ ದಿನಗಳಲ್ಲಿ ತೂಕ ಕಳೆದುಕೊಂಡಿದ್ದು ಭಿನ್ನವಾಗಿ ಕಾಣುತ್ತಿದ್ದಾರೆ.

'ಕೆಡಿ' ಸಿನಿಮಾವು ಪಕ್ಕಾ ರೌಡಿಸಂ ಕತೆಯನ್ನು ಒಳಗೊಂಡಿದ್ದು, ಸಿನಿಮಾವು 1980 ರ ಕಾಲಘಟ್ಟದ ಕತೆಯನ್ನು ಹೊಂದಿರಲಿದೆ ಎನ್ನಲಾಗುತ್ತಿದೆ. 'ಕೆಡಿ' ಮೂಲಕ ಪ್ರೇಮ್ ಮತ್ತೊಮ್ಮೆ ತಮ್ಮ ಮೆಚ್ಚಿನ ರೌಡಿಸಂ ಕತೆಗಳತ್ತ ಹೊರಳಿದ್ದು, ಈ ಸಿನಿಮಾದ ಫಲಿತಾಂಶ ಏನಾಗಲಿದೆ ಎಂಬ ಕುತೂಹಲ ಇದೆ.

ಕೆವಿಎನ್ ಪ್ರೊಡಕ್ಷನ್‌ನವರು ನಿರ್ಮಾಣ ಮಾಡುತ್ತಿರುವ ಈ ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

More from Filmibeat

English summary
Actor Sanjay Dutt started shooting for Kannada movie KD starring Dhruva Sarja and directing by Prem. This is Sanjay Dutt's second Kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X