For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ಬಗ್ಗೆ ಸಂಜಯ್ ದತ್ ಹೇಳಿದ್ದೇನು?

  |
  KGF ನಿಂದ ಸಂಜಯ್ ದತ್ ಫುಲ್ ಹ್ಯಾಪಿ | KGF2 | SANJAYDUTT | YASH | PRASHANTH NEEL | RAVI BASRUR

  ಡಿಸೆಂಬರ್ 21ಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗುತ್ತಿದೆ. ಹೊಂಬಾಳೆ ಫಿಲಂಸ್ ಸಂಸ್ಥೆ ಈ ಸುದ್ದಿಯನ್ನು ಅಧಿಕೃತವಾಗಿ ಪ್ರಕಟ ಮಾಡಿದೆ.

  ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ರಿಲೀಸ್ ಆಗುತ್ತಿದೆ ಎಂದು ನಿರ್ದೇಶಕ ಮತ್ತು ನಿರ್ಮಾಪಕರು ಖಚಿತ ಪಡಿಸಿದ್ದಾರೆ.

  ಡಿಸೆಂಬರ್ 21ಕ್ಕೆ 'ಕೆಜಿಎಫ್' ಅಭಿಮಾನಿಗಳಿಗೆ 'ಬಿಗ್' ನ್ಯೂಸ್ಡಿಸೆಂಬರ್ 21ಕ್ಕೆ 'ಕೆಜಿಎಫ್' ಅಭಿಮಾನಿಗಳಿಗೆ 'ಬಿಗ್' ನ್ಯೂಸ್

  ಈ ಕುರಿತು ಬಾಲಿವುಡ್ ನಟ ಸಂಜಯ್ ದತ್ ಕೂಡ ಟ್ವೀಟ್ ಮಾಡಿದ್ದು, ಚಿತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ''ಅಧೀರನ ಜರ್ನಿ ಆರಂಭ. ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ನಾನು ಭಾಗಿಯಾಗಿರುವುದು ಸಂತಸ ತಂದಿದೆ. ಇದೊಂದು ಅದ್ಭುತ ಅನುಭವ'' ಎಂದಿದ್ದಾರೆ.

  ಅಂದ್ಹಾಗೆ, ಕೆಜಿಎಫ್ 2 ಚಿತ್ರದಲ್ಲಿ ಸಂಜಯ್ ದತ್ ಅಧೀರನ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಬಹುಮುಖ್ಯ ಪಾತ್ರ ಇದಾಗಿದ್ದು, ದತ್ ಮತ್ತು ಯಶ್ ಕಾಂಬಿನೇಷನ್ ಮೇಲೆ ಕುತೂಹಲ ಹೆಚ್ಚಿದೆ.

  ಬಾಂಗ್ಲಾದೇಶ ಅಭಿಮಾನಿಯ ಈ ಕಾಮೆಂಟ್ ನೋಡಿದ್ರೆ ಯಶ್ ಖುಷ್ ಆಗೋದು ಪಕ್ಕಾ!ಬಾಂಗ್ಲಾದೇಶ ಅಭಿಮಾನಿಯ ಈ ಕಾಮೆಂಟ್ ನೋಡಿದ್ರೆ ಯಶ್ ಖುಷ್ ಆಗೋದು ಪಕ್ಕಾ!

  ಈಗಾಗಲೇ ಸಂಜಯ್ ದತ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿತ್ತು. ಕೆಲವು ದೃಶ್ಯಗಳ ಶೂಟಿಂಗ್ ಕೂಡ ಮಾಡಿ ಮುಗಿಸಿದ್ದಾರೆ ಎನ್ನಲಾಗಿದೆ. ಇನ್ನುಳಿದಂತೆ ಬಾಲಿವುಡ್ ನಟಿ ರವೀನಾ ಟಂಡನ್ ಕೂಡ ಮುಖ್ಯ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ ಎಂಬ ಮಾಹಿತಿ ಇದೆ.

  ಸದ್ಯಕ್ಕೆ ಫಸ್ಟ್ ಲುಕ್ ರಿಲೀಸ್ ಮಾಡುತ್ತಿರುವ ಕೆಜಿಎಫ್ 2020ನೇ ವರ್ಷದ ಮಧ್ಯದಲ್ಲಿ ತೆರೆಗೆ ಬರುವ ತಯಾರಿ ನಡೆಸಿದೆ. ಕೆಜಿಎಫ್ ಚಾಪ್ಟರ್ 1 ಸಿನಿಮಾ 2018ರ ಡಿಸೆಂಬರ್ 21 ರಂದು ಬಿಡುಗಡೆಯಾಗಿತ್ತು. ಪ್ರಶಾಂತ್ ನೀಲ್ ಈ ಚಿತ್ರ ನಿರ್ದೇಶನ ಮಾಡಿದ್ದು, ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದರು.

  English summary
  Bollywood Actor Sanjay Dutt has tweeted about Kgf Chapter 2 first look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X