'ಯುವರತ್ನ' ಟೀಸರ್ ನೋಡಿ ಬ್ರಿಲಿಯಂಟ್ ಎಂದ ಬಾಲಿವುಡ್ ಸ್ಟಾರ್
Recommended Video
ನಿನ್ನೆ (ಸಪ್ಟೆಂಬರ್ 7) ದಸರಾ ಹಬ್ಬದ ವಿಶೇಷವಾಗಿ 'ಯುವರತ್ನ' ಟೀಸರ್ ಬಿಡುಗಡೆಯಾಗಿದೆ. ಟೀಸರ್ ಸಖತ್ ಪವರ್ ಫುಲ್ ಆಗಿದ್ದು, ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ.
'ಯುವರತ್ನ' ಹವಾ ಬಾಲಿವುಡ್ ವರೆಗೆ ತಲುಪಿದೆ. ನಟ ಸಂಜಯ್ ದತ್ ಟೀಸರ್ ನೋಡಿ ಟ್ವೀಟ್ ಮಾಡಿದ್ದಾರೆ. ''ಯುವರತ್ನ' ಟೀಸರ್ ನೋಡಲು ಬ್ರಿಲಿಯಂಟ್ ಆಗಿದೆ. ಎಂದು ಇಡೀ ತಂಡ ಶುಭ ಹಾರೈಸಿದ್ದಾರೆ. 'ಯುವರತ್ನ' ಹೊಂಬಾಳೆ ಫಿಲ್ಮ್ಸ್ ನಲ್ಲಿ ನಿರ್ಮಾಣವಾಗಿದೆ. ಇದೇ ಸಂಸ್ಥೆಯ 'ಕೆಜಿಎಫ್ 2' ಸಿನಿಮಾದ ಮೂಲಕ ಸಂಜಯ್ ದತ್ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.
ರಗ್ಬಿ ಆಟದ ಸುತ್ತ ಟೀಸರ್ ಮಾಡಲಾಗಿದೆ. ಡ್ರಸ್ಸಿಂಗ್ ರೂಮ್ ನಿಂದ ಮೈದಾನಕ್ಕೆ ಬರುವುದು, ಹೊಡೆದಾಟದ ನಂತರ ಕಪ್ ಗೆಲ್ಲುವುದು ಟೀಸರ್ ನಲ್ಲಿ ಬರುವ ದೃಶ್ಯಗಳಾಗಿವೆ. ಪುನೀತ್ 29ನೇ ಸಿನಿಮಾ ಆಗಿರುವ ಕಾರಣ ಅವರ ಜರ್ಸಿ ಮೇಲೆ ಅದೇ ಸಂಖ್ಯೆ ಬರೆಯಲಾಗಿದೆ. ಅವರ ತಂಡ ಹೆಸರು RK (ರಾಜ್ ಕುಮಾರ್ ) ಎಂದಾಗಿದೆ.

''ಈ ದುನಿಯಾದಲ್ಲಿ ಮೂರು ತರ ಗಂಡಸರು ಇರುತ್ತಾರೆ. ರೂಲ್ ನ ಫಾಲೋ ಮಾಡುವವರು, ರೂಲ್ ನ ಬ್ರೇಕ್ ಮಾಡುವವರು, ಮೂರನೆಯವರು ನನ್ನ ತರ ರೂಲ್ ಮಾಡಲು'' ಎಂಬ ಟೀಸರ್ ನ ಡೈಲಾಗ್ ಹಿಟ್ ಆಗಿದೆ.
14 ಗಂಟೆಗಳಲ್ಲಿ 8 ಲಕ್ಷಕ್ಕೂ ಅಧಿಕ ಹಿಟ್ಸ್ ಅನ್ನು ಟೀಸರ್ ಪಡೆದುಕೊಂಡಿದೆ. ಸಿನಿಮಾದ ಕ್ವಾಲಿಟಿಯನ್ನು ಟೀಸರ್ ಮೂಲಕ ತೋರಿಸಲಾಗಿದೆ. ಕ್ಯಾಮರಾ ವರ್ಕ್ ತುಂಬ ಚೆನ್ನಾಗಿದೆ.

'ಯುವರತ್ನ' ಸಂತೋಷ್ ಆನಂದ್ ರಾಮ್ ನಿರ್ದೇಶನದ ಸಿನಿಮಾವಾಗಿದೆ. ತಮನ್ ಸಿನಿಮಾಗೆ ಸಂಗೀತ ನೀಡಿದ್ದಾರೆ. ಸಯೇಶಾ ಸೈಗಲ್ ಚಿತ್ರದ ನಾಯಕಿಯಾಗಿದ್ದಾರೆ.


Click it and Unblock the Notifications











