'ಕೆಜಿಎಫ್-2'ಗೆ ಸಂಜಯ್ ದತ್ ಎಂಟ್ರಿ: ನಿರ್ಮಾಪಕ ವಿಜಯ್ ಹೇಳಿದ್ದೇನು?

Recommended Video

KGF ನಲ್ಲಿ ನಟಿಸಲಿದ್ದಾರೆ ಸಂಜು..! | FILMIBEAT KANNADA

ಕೆಜಿಎಫ್ ಚಾಪ್ಟರ್ 1 ಯಶಸ್ಸಿನ ಬೆನ್ನಲ್ಲೆ ಈಗ ಚಾಪ್ಟರ್ 2 ಬಗ್ಗೆ ಕುತೂಹಲ ಹೆಚ್ಚಾಗಿದೆ. ಕೆಜಿಎಫ್ 2 ಯಾವಾಗ ಶುರುವಾಗುತ್ತೆ, ಯಾವಾಗ ರಿಲೀಸ್ ಆಗುತ್ತೆ ಎಂಬ ಚರ್ಚೆಯ ಮಧ್ಯೆ ಪಾರ್ಟ್-2 ಸಿನಿಮಾಗೆ ಬಾಲಿವುಡ್ ನಟ ವಿಲನ್ ಆಗಿ ಎಂಟ್ರಿ ಕೊಡಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ಕೆಜಿಎಫ್ ಚಾಪ್ಟರ್ 2ನಲ್ಲಿ ಪ್ರಮುಖ ಪಾತ್ರಕ್ಕೆ ಹಿಂದಿ ನಟ ಸಂಜಯ್ ದತ್ ಅವರನ್ನ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ.

ಇದು ನಿಜಾನ ಅಥವಾ ಸುಳ್ಳ ಎಂಬ ಚರ್ಚೆಗೆ ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರ್ ಅವರೇ ಬ್ರೇಕ್ ಹಾಕಿದ್ದಾರೆ. ಸಂಜಯ್ ದತ್ ಬರ್ತಾರಾ ಅಥವಾ ಇದು ಬರಿ ಗಾಸಿಪ್ ಎಂಬ ವಿಷ್ಯದ ಬಗ್ಗೆ ಫಿಲ್ಮಿಬೀಟ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. (ವಿಜಯ್ ಕಿರಗಂದೂರ್ ಅವರ ಪೂರ್ತಿ ಸಂದರ್ಶನ ನಿರೀಕ್ಷಿಸಿ) ಮುಂದೆ ಓದಿ.....

ಸಂಜಯ್ ದತ್ ಬರಬಹುದು.!

ಸಂಜಯ್ ದತ್ ಬರಬಹುದು.!

ಈಗಾಗಲೇ ಸುದ್ದಿಯಾಗಿರುವಂತೆ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಬಾಲಿವುಡ್ ನಟ ಸಂಜಯ್ ದತ್ ಬರಬಹುದು ಎಂದು ಸ್ವತಃ ನಿರ್ಮಾಪಕರೇ ಬಹಿರಂಗಪಡಿಸಿದ್ದಾರೆ. ದತ್ ಜೊತೆ ಒಂದು ಸುತ್ತಿನ ಮಾತುಕತೆ ಕೂಡ ಆಗಿದೆ. ಆದ್ರೆ, ಸದ್ಯಕ್ಕೆ ಖಚಿತವಾಗಿಲ್ಲ ಎಂದು ವಿಜಯ್ ಕಿರಗಂದೂರ್ ಹೇಳಿದ್ದಾರೆ.

ಮೂರ್ನಾಲ್ಕು ಖಳನಟರು.!

ಮೂರ್ನಾಲ್ಕು ಖಳನಟರು.!

ಸಂಜಯ್ ದತ್ ಮಾತ್ರವಲ್ಲ, ಚಾಪ್ಟರ್ 2 ನಲ್ಲಿ ಮೂರ್ನಾಲ್ಕು ಹೊಸ ಖಳನಾಯಕರು ಬರುವ ಸಾಧ್ಯತೆ ಇದೆ. ಆದ್ರೆ, ಯಾರು ಎಂಬುದನ್ನ ಪಕ್ಕಾ ಆಗಿಲ್ಲ. ಕಥೆಯಲ್ಲಿ ಟ್ವಿಸ್ಟ್, ರೋಚಕತೆ ಇರಲಿದ್ದು, ಅದಕ್ಕೆ ತಕ್ಕಂತೆ ಖಳನಾಯಕರು ಇರಲಿದ್ದಾರೆ ಎಂದು ವಿಜಯ್ ತಿಳಿಸಿದ್ದಾರೆ.

ದತ್ ಓಕೆ ಎನ್ನಬಹುದು.!

ದತ್ ಓಕೆ ಎನ್ನಬಹುದು.!

ಕೆಜಿಎಫ್ ಚಿತ್ರದ ಯಶಸ್ಸು ನೋಡಿರುವ ಸಂಜಯ್ ದತ್, ಬಹುಶಃ ಚಾಪ್ಟರ್ 2 ಚಿತ್ರಕ್ಕೆ ಒಪ್ಪಿಕೊಂಡರು ಯಾವುದೇ ಅನುಮಾನವಿಲ್ಲ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿರುವುದರಿಂದ ಸಂಜಯ್ ದತ್ ಮನಸ್ಸು ಮಾಡಬಹುದು. ಒಂದು ವೇಳೆ ದತ್ ನಿರಾಕರಿಸಿದರೂ, ಆ ಜಾಗಕ್ಕೆ ಬೇರೆ ಯಾರಾದರೂ ಖ್ಯಾತ ನಟ ಬರಬಹುದು.

ಸಂಜು ಬಂದ್ರೆ ಕೆಜಿಎಫ್ ಹವಾ ಹೆಚ್ಚಾಗುತ್ತೆ

ಸಂಜು ಬಂದ್ರೆ ಕೆಜಿಎಫ್ ಹವಾ ಹೆಚ್ಚಾಗುತ್ತೆ

ಒಂದು ವೇಳೆ ಸಂಜಯ್ ದತ್ 'ಕೆಜಿಎಫ್' ಚಾಪ್ಟರ್ 2 ಸೇರಿಕೊಂಡರೇ, ಈ ಚಿತ್ರದ ಖದರ್ ಮತ್ತಷ್ಟು ಹೆಚ್ಚಾಗುತ್ತೆ. ನಿರೀಕ್ಷೆ ಬೆಟ್ಟದಷ್ಟಾಗುತ್ತೆ. ಯಶ್ ಎದುರು ಸಂಜಯ್ ದತ್ ಅವರನ್ನ ನೋಡಲು ಮಜಾ ಇರುತ್ತೆ. ಇದು ಸಾಧ್ಯವಾಗಲಿ ಎಂದು ಯಶ್ ಅಭಿಮಾನಿಗಳು ಆಸೆಪಡ್ತಿದ್ದಾರೆ.

More from Filmibeat

English summary
Bollywood actor Sanjay Dutt will play the main villain in the kgf sequel. Producer vijay kiragandur clears about this rumours.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X