ಕನ್ನಡದ ಬಿಗ್ ಸ್ಟಾರ್ ಚಿತ್ರದಲ್ಲಿ ಹಾಡುವ ಅವಕಾಶ ಗಿಟ್ಟಿಸಿದ ಸಂಜಿತ್ ಹೆಗ್ಡೆ!
'ಜೀ ಕನ್ನಡ' ವಾಹಿನಿಯ 'ಸರಿಗಮಪ ಸೀಸನ್ 13' ಸ್ಪರ್ಧಿಗಳ ಪೈಕಿ ಸಂಜಿತ್ ಹೆಗ್ಡೆ ಕೂಡ ಒಬ್ಬರು. ತನ್ನ ವಿಭಿನ್ನ ಸಿಂಗಿಂಗ್ ಸ್ಟೈಲ್ ಮೂಲಕ ಎಲ್ಲರ ಫೇವರಿಟ್ ಆಗಿದ್ದ ಸಂಜಿತ್ ಈಗ ನಟ ಗಣೇಶ್ ಅವರ ಸಿನಿಮಾದಲ್ಲಿ ಹಾಡುವ ಅವಕಾಶವನ್ನು ಪಡೆದಿದ್ದಾರೆ.
ಗಣೇಶ್ ಅಭಿನಯದ ಹೊಸ ಸಿನಿಮಾ 'ಚಮಕ್' ಚಿತ್ರದ ಒಂದು ಹಾಡನ್ನು ಸಂಜಿತ್ ಹಾಡಲಿದ್ದಾರೆ. ಸಂಜಿತ್ ಹೆಗ್ಡೆ ಧ್ವನಿಗೆ ಮಾರು ಹೋಗಿರುವ ಚಿತ್ರತಂಡ ಚಿತ್ರದ ಒಂದು ವಿಶೇಷ ಹಾಡನ್ನು ಅವರಿಂದ ಹಾಡಿಸುವ ನಿರ್ಧಾರ ಮಾಡಿದೆಯಂತೆ. ಜುಡಾ ಸ್ಯಾಂಡಿ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಸಿಂಪಲ್ ಸುನಿ ನಿರ್ದೇಶನದ ಚಿತ್ರ ಇದಾಗಿದೆ.

ಅಂದಹಾಗೆ, ಸಂಜಿತ್ ಹೆಗ್ಡೆ 'ಸರಿಗಮಪ ಸೀಸನ್ 13' ಕಾರ್ಯಕ್ರಮದಲ್ಲಿ ಮೈಕ್ ಟೈಸನ್ ಎಂದೇ ಫೇಮಸ್ ಆಗಿದ್ದರು. ಜೊತೆಗೆ ಈ ಹಿಂದೆ 'ಒಂದು ಮೊಟ್ಟೆಯ ಕಥೆ' ಚಿತ್ರದ ಪ್ರಮೋಷನಲ್ ಹಾಡಿಗೆ ಸಂಜಿತ್ ಧ್ವನಿಯಾಗಿದ್ದರು.
More from Filmibeat
English summary
Zee Kannada channel's 'Sarigamapa Season 13' contestant Sanjith Hegde got a chance to sing in Ganesh's 'Chamak' movie


Click it and Unblock the Notifications











