ಮುಸ್ಲಿಂ ಸಂಪ್ರಾದಾಯದಂತೆ ನಟಿ ಸಂಜನಾ ಗಲ್ರಾನಿ ಸೀಮಂತ ಕಾರ್ಯ: ಇಲ್ಲಿವೆ ಫೋಟೊಗಳು
ಕನ್ನಡ ಸೇರಿದಂತೆ ತೆಲುಗು, ತಮಿಳು ಚಿತ್ರರಂಗದಲ್ಲಿ ಮಿಂಚಿರುವ ಸೌತ್ ಬ್ಯೂಟಿ ನಟಿ ಸಂಜನಾ ಗಲ್ರಾನಿ. ಇತ್ತೀಚಿಗೆ ಹಿಂದೂ ಹಾಗೂ ಮುಸ್ಲಿಂ ಸಂಪ್ರದಾಯದಂತೆ ಸೀಮಂತ ಮಾಡಿಸಿಕೊಂಡಿದ್ದಾರೆ. ಕನ್ನಡದಲ್ಲಿ 'ಗಂಡ ಹೆಂಡತಿ' ಸಿನಿಮಾ ಮೂಲಕ ಬೋಲ್ಡ್ ಆಗಿ ತೆರೆ ಮೇಲೆ ಕಾಣಿಸಿಕೊಂಡಿದ್ದ ನಟಿ ಸಂಜನಾ ವಿಭಿನ್ನವಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಸದ್ಯ ಬೋಲ್ಡ್ ಬ್ಯೂಟಿ ತುಂಬು ಗರ್ಭಿಯಾಗಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ನಟಿ ಸಂಜನಾ ತಮ್ಮ ಚೊಚ್ಚಲ ಮಗುವಿನ ಸೀಮಂತದ ಪೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಎರಡೆರಡು ಬಾರಿ ಸೀಮಂತ ಕಾರ್ಯ ಮಾಡಿಸಿಕೊಂಡಿರುವ ಸಂಜನಾ ತಮ್ಮ ಮುದ್ದಿನ ಮಗುವಿನ ಬರುವಿಕೆಗಾಗಿ ಕಾತುರರಾಗಿದ್ದಾರೆ. ಸೀಮಂತ ಕಾರ್ಯದಲ್ಲಿ ಕಲರ್ ಫುಲ್ ಆಗಿ ಕಾಣಿಸಿಕೊಂಡಿದ್ದರು. ಬಿಳಿ ಬಣ್ಣದ ಲೆಹೆಂಗಾದಲ್ಲಿ ಥೇಟ್ ಮುಸ್ಲಿಂ ಹೆಣ್ಣು ಮಗಳಂತೆ ಕಂಗೊಳಿಸುತ್ತಿದ್ದರು. ಇನ್ನು ಪತಿ ಅಜೀಜ್ ಕೂಡ ಬಿಳಿ ಬಣ್ಣದ ಶೇರ್ವಾನಿ ಧರಿಸಿ ಮಿಂಚಿದ್ದರು.

ಸದ್ಯ ನಟಿ ಸಂಜನಾ ಮುಸ್ಲಿಂ ಸಂಪ್ರದಾಯದಂತೆ ಅದ್ಧೂರಿಯಾಗಿ ಸೀಮಂತ ಕಾರ್ಯ ಮಾಡಿಸಿಕೊಂಡಿದ್ದಾರೆ. ಈ ಪೋಟೊಗಳನ್ನು ಸಹ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಆ ಸಂಭ್ರಮದ ಪೋಟೊಗಳು ಇದೀಗ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಸಂಜನಾಗೆ ಅಭಿಮಾನಿಗಳು ಹಾಗೂ ಸ್ನೇಹಿತರು ಶುಭಾಶಯವನ್ನು ಕೋರುತ್ತಿದ್ದಾರೆ. ಇತ್ತೀಚಿಗಷ್ಟೇ ಸಂಜನಾ ಬೇಬಿ ಬಂಪ್ ಪೋಟೊಶೂಟ್ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗ ಸೀಮಂತದ ಪೋಟೊಗಳು ಹರಿದಾಡ್ತಿವೆ.


Click it and Unblock the Notifications











