For Quick Alerts
  ALLOW NOTIFICATIONS  
  For Daily Alerts

  ಕಷ್ಟದ ಸಮಯದಲ್ಲೂ ಜೊತೆಯಲ್ಲಿ ನಿಂತ ಅಭಿಮಾನಿಗಳು ಮತ್ತು ಸ್ನೇಹಿತರಿಗೆ ಸಂಜನಾ ಪ್ರೀತಿಯ ಸಂದೇಶ

  By ಫಿಲ್ಮ್ ಡೆಸ್ಕ್
  |

  ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

  Recommended Video

  ಜೈಲಿಂದ ಹೊರಗೆ ಬಂದು ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ ಸಂಜನಾ | Filmibeat Kannada

  ಕಷ್ಟದ ಸಮಯದಲ್ಲೂ ಜೊತೆಯಲ್ಲಿ ನಿಂತ ಅಭಿಮಾನಿಗಳಿಗೆ ಮತ್ತು ಸ್ನೇಹಿತರಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೇಟಸ್ ಮೂಲಕ ಧನ್ಯವಾದ ತಿಳಿಸಿರುವ ಸಂಜನಾ ದೀರ್ಘವಾಗಿ ಬರೆದುಕೊಂಡಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿ 1 ತಿಂಗಳ ಬಳಿಕ ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷರಾಗಿದ್ದಾರೆ.

  ಕಷ್ಟದ ಸಮಯದಲ್ಲೂ ಜೊತೆಯಲ್ಲಿನಿಂತ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಸಂಜನಾ, ಸದ್ಯದಲ್ಲೇ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗುವುದಾಗಿ ಹೇಳಿದ್ದಾರೆ.

  ಸಂಜನಾ ಗಲ್ರಾನಿಗೆ ಬಲವಂತದ ಮತಾಂತರ: ಮೌಲ್ವಿ ವಿರುದ್ಧ ದೂರುಸಂಜನಾ ಗಲ್ರಾನಿಗೆ ಬಲವಂತದ ಮತಾಂತರ: ಮೌಲ್ವಿ ವಿರುದ್ಧ ದೂರು

  ಇನ್ಸ್ಟಾಗ್ರಾಮ್ ಸ್ಟೇಟಸ್ ನಲ್ಲಿ ಬರೆದುಕೊಂಡಿರುವ 'ನನಗೆ ಸಂದೇಶ ಕಳುಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಾನು ಪ್ರತಿಯೊಬ್ಬರ ಸಂದೇಶವನ್ನು ಓದುತ್ತಿದ್ದೇನೆ. ನಿಮ್ಮ್ ನಿಜವಾದ ಕಾಳಜಿ ಮತ್ತು ಪ್ರೀತಿಗೆ ನಾನಗೆ ಆಶೀರ್ವಾದ. ಆರೋಗ್ಯ ಸರಿಯಾದ ಮೇಲೆ ನಾನು ಮತ್ತೆ ಮೊದಲಿನಂತೆ ಸಾಮಾಜಿಕ ಜಾಲತಾಣಕ್ಕೆ ಮರಳುತ್ತೇನೆ. ನಿಮ್ಮೆಲ್ಲರ ಪ್ರೀತಿಗೆ ವಿಶೇಷವಾಗಿ ನನ್ನ ಕುಟುಂಬ, ಸ್ನೇಹಿತರು ಮತ್ತು ನನ್ನ ಅಭಿಮಾನಿಗಳಿಗೆ ನಾನು ಎಷ್ಟು ಧನ್ಯವಾದ ಹೇಳಿದರು ಸಾಲದು' ಎಂದು ಬರೆದುಕೊಂಡಿದ್ದಾರೆ.

  ಡ್ರಗ್ಸ್ ಜಾಲದ ಸಂಬಂಧ ನಟಿ ಸಂಜನಾ 2020 ಸೆಪ್ಟೆಂಬರ್ 8ರಂದು ಜೈಲು ಪಾಲಾಗಿದ್ದರು. ಸುಮಾರು 90 ದಿನಗಳ ನಂತರ ಅಂದರೆ ಡಿಸೆಂಬರ್ 12ರಂದು ಸಂಜನಾ ಅನಾರೋಗ್ಯದ ಕಾರಣದಿಂದ ವೈದ್ಯಕೀಯ ಆಧಾರದ ಮೇಲೆ ಜಾಮೀನು ಮಂಜೂರು ಮಾಡಲಾಯಿತು.

  ಇತ್ತೀಚಿಗಷ್ಟೆ ವಕೀಲರೊಬ್ಬರು, ನಟಿ ಸಂಜನಾ ಗಲ್ರಾನಿಯನ್ನು ಬಲವಂತದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದು ಮೌಲ್ವಿಯೊಬ್ಬರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂಜನಾ ರನ್ನು ಒತ್ತಾಯಪೂರ್ವಕವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ, ಸಂಜನಾ ಹೆಸರನ್ನು 'ಮಹಿರಾ' ಎಂದು ಬದಲಾಯಿಸಲಾಗಿದೆ. ಈ ಬಲವಂತದ ಮತಾಂತರ ಮಾಡಿರುವುದು ಟ್ಯಾನರಿ ರಸ್ತೆಯ ದಾರುಲ್ ಉಲುಮ್ ಶಾ ವಲಿಯುಲ್ಲಾ ಮದರಸಾದ ಮೌಲ್ವಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರನ್ನು ಸ್ವೀಕರಿಸಿರುವ ಪೊಲೀಸರು ಕಾನೂನು ತಜ್ಞರ ಸಲಹೆ ಪಡೆಯಲು ಮುಂದಾಗಿದ್ದಾರೆ.

  English summary
  Kannada Actress Sanjjana Galrani Thanks Family, Friends and Fans.
  Monday, January 4, 2021, 11:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X