ಮತ್ತೊಂದು ಮಗುವಿಗೆ ಜನ್ಮ ನೀಡಿದ ಸಂಜನಾ ಗಲ್ರಾನಿ, ಮುಸ್ಲಿಂ ವೈದ್ಯ ಅಜೀಜ್‌ ಪಾಷಾ ಜೊತೆ ಮದುವೆಯಾಗಿರುವ ನಟಿ..!

By ಫಿಲ್ಮಿಬೀಟ್ ಡೆಸ್ಕ್

ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವಂತಹ ನಿಗೂಢವಾದ ಶಕ್ತಿ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಈ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆ ಇದೆ. ಇನ್ನು ನಿಜವಾದ ಪ್ರೀತಿಯ ಆಳಕ್ಕೆ ಇಳಿದು ನೋಡಿದಾಗ ಅದರ ಅರ್ಥ ಹುಡುಕುತ್ತಾ ಹೋದಾಗ ಪ್ರೀತಿ ಎನ್ನುವುದು ಮನಸಿಂದ ಬರಬೇಕೆ ಹೊರತು ಆ ಪ್ರೀತಿ ಒತ್ತಾಯಪೂರ್ವಕವಾಗಿ ಆಗಬಾರದು ಎಂಬ ವಿಚಾರದ ಅರಿವು ಅನೇಕರಿಗೆ ಆಗುತ್ತೆ.

ಹೀಗೆ ಪ್ರೀತಿಯನ್ನು ಅರಿತುಕೊಂಡು ಪ್ರೀತಿಯನ್ನು ಅರ್ಥ ಮಾಡಿಕೊಂಡು ಪ್ರೀತಿಗೋಸ್ಕರ ತನ್ನ ವೃತ್ತಿಯನ್ನೇ ತ್ಯಾಗ ಮಾಡಿ ಮೇ 2020ರಲ್ಲಿ ಲಾಕ್ ಡೌನ್ ಸಮಯದಲ್ಲಿ ಮುಸ್ಲಿಂ ವೈದ್ಯ ಡಾ.ಅಜೀಜ್ ಪಾಷಾ ಅವರನ್ನು ಸಂಜನಾ ಗಲ್ರಾನಿ ಮದುವೆಯಾದರು.

sanjjanaa-galrani-becomes-mother-again-welcomes-baby-girl-after-a-son

ಆ ನಂತರ 2022ರಲ್ಲಿ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದ ಸಂಜನಾ ಗಲ್ರಾನಿ ಆಗ ಮುಸ್ಲಿಂ ಸಂಪ್ರಾದಾಯದಂತೆ ಸೀಮಂತ ಶಾಸ್ತ್ರ ಮಾಡಿಕೊಂಡಿದ್ದರು. ಮೇ 19ರಂದು ಗಂಡು ಮಗುಗೆ ಜನ್ಮ ನೀಡಿದ್ದರು.

ಇಂಥಾ ಸಂಜನಾ ಗಲ್ರಾನಿ ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಮ್ಮ ಮನೆಗೆ ಹೊಸ ಅತಿಥಿಯನ್ನು ಬರ ಮಾಡಿಕೊಂಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದು ಸಂಜನಾ ಮತ್ತು ಅಜೀಜ್ ಪಾಶಾ ಅವರ ಮನೆಯಲ್ಲಿ ಸದ್ಯ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

ಇನ್ನು ವಿಶೇಷ ಅಂದರೆ ಸಂಜನಾ ಗಲ್ರಾನಿ ತಮ್ಮ ಗಂಡು ಮಗುವಿಗೆ 2022ರ ಮೇ 19ರಂದು ಜನ್ಮ ನೀಡಿದ್ದರು. ಕಾಕತಾಳೀಯನಾ ಗೊತ್ತಿಲ್ಲ..! ಇದೀಗ ಅದೇ ಮೇ 19ರಂದು 2025ನೇ ಇಸ್ವಿಯಲ್ಲಿ ಸಂಜನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಮೇ 19 ಸಂಜನಾ ಬದುಕಿನಲ್ಲಿ ಮರೆಯಲಾಗದ ದಿನ ಅಂದರೆ ಅದು ತಪ್ಪಾಗಲಿಕ್ಕಿಲ್ಲ. ಒಂದೇ ದಿನ ಮಗ ಮತ್ತು ಮಗಳ ಬರ್ತ್‌ಡೇಯನ್ನು ಆಚರಿಸಲಿದ್ದಾರೆ ಸಂಜನಾ.

ಅಂದ್ಹಾಗೇ ಮೊದಲನೇ ಮಗುಗೆ 'ಅಲಾರಿಕ್' ಎಂದು ನಾಮಕರಣ ಮಾಡಿರುವ ಸಂಜನಾ ಗಲ್ರಾನಿ ಯುಗಾದಿ ಹಬ್ಬದಂದು ತಾವು ಮತ್ತೊಮ್ಮೆ ಗರ್ಭಿಣಿಯಾಗಿರುವ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದರು.

ತಮ್ಮ ಅಭಿಮಾನಿಗಳಿಗಾಗಿ ತಮ್ಮನ್ನು ಇಷ್ಟ ಪಡುವ ಸೋಶಿಯಲ್ ಮೀಡಿಯಾ ಫಾಲೋವರ್ಸ್‌ಗಳಿಗಾಗಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದ ಸಂಜನಾ ಯುಗಾದಿಯ ಹೊಸ ಬೆಳಕು ನಿಮ್ಮ ಜೀವನದಲ್ಲಿ ಶಾತಿ, ಸಮೃದ್ದಿ ಮತ್ತು ಸಂತೋಷವನ್ನು ತರಲಿ, ಈ ಹಬ್ಬ ನಮಗೆ ತುಂಬಾ ವಿಶೇಷವಾದದ್ದು ಯಾಕೆಂದರೆ ನಮ್ಮ ಕುಟುಂಬಕ್ಕೆ ಹೊಸ ಸದಸ್ಯರೊಬ್ಬರು ಶೀಘ್ರದಲ್ಲಿಯೇ ಬರಲಿದ್ದಾರೆ. ನಿಮ್ಮ ಪ್ರೀತಿ ಮತ್ತು ಆಶೀವಾದ ಸದಾ ನಮ್ಮ ಮೇಲಿರಲಿ ಎಂದು ಬರೆದುಕೊಂಡಿದ್ದರು.

ಸಂಜನಾ ಗಲ್ರಾನಿ ಅವರ ಸೀಮಂತ ಶಾಸ್ತ್ರದ ಫೋಟೊಗಳು ಆಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅನೇಕರು ಸಂಜನಾ ಅವರಿಗೆ ಶುಭಾಶಯವನ್ನು ಕೋರಿದ್ದರು. ಈಗಲೂ ಅನೇಕರು ಹೆಣ್ಣು ಮಗುವಿನ ತಾಯಿಯಾದ ಸಂಜನಾಗೆ ಅನೇಕರು ಶುಭಾಶಯವನ್ನು ಕೋರುತ್ತಿದ್ದಾರೆ.

ಇನ್ನುಳಿದಂತೆ ಡಾ.ಅಜೀಜ್ ಪಾಶಾ ಅವರನ್ನು ಮದುವೆಯಾದ ನಂತರ ಚಿತ್ರರಂಗದಿಂದ ಅಂತರವನ್ನು ಕಾಪಾಡಿಕೊಂಡಿರುವ ಸಂಜನಾ 2020ರಲ್ಲಿಯೇ ಮಾದಕ ಮಾಯಾಜಾಲದಲ್ಲಿ ಸಿಲುಕಿಕೊಂಡಿದ್ದರು. ಡ್ರಗ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು. ಚಿತ್ರರಂಗದಲ್ಲಿ ಬೆಳೆಯಬೇಕೆನ್ನುವ ಸಂಜನಾ ಅವರ ಈ ಆಶಯಕ್ಕೆ ಈ ಪ್ರಕರಣ ಮುಳುವಾಗಿದ್ದು ಸುಳ್ಳಲ್ಲ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೊಮ್ಮೆ ಮಾತನಾಡಿದ್ದ ಸಂಜನಾ, ಡ್ರಗ್ಸ್ ಪ್ರಕರಣದಲ್ಲಿ ನಾನು ಬಂಧಿಯಾದಾಗ ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲಾ ರೀತಿಯ ಮಾಧ್ಯಮವೂ ನನ್ನನ್ನು ಆರೋಪಿ ಅಪರಾಧಿ ಎಂಬಂತೆ ಪ್ರತಿಬಿಂಬಿಸಿತು.

ಆದರೆ, ಅಲ್ಲಿ ಯಾವುದೇ ರೀತಿಯ ಕುರುಹುಗಳಿಲ್ಲದೆ ಇಡೀ ಕೇಸ್ ಬಿದ್ದು ಹೋಯಿತು. ಅದನ್ನು ಯಾವ ಮಾಧ್ಯಮದವರು ಹೈಲೈಟ್ ಮಾಡಲೇ ಇಲ್ಲ. ಬದಲಾಗಿ ನನ್ನನ್ನು ಆರೋಪಿಯಾಗಿ ಮಾತ್ರ ಚಿತ್ರಿಸುವ ಪ್ರಯತ್ನ ನಡೆಯಿತು ಎಂದು ತಮ್ಮ ಬೇಸರವನ್ನು ಹೊರ ಹಾಕಿದ್ದರು. ಸದ್ಯ ಸಂಜನಾ ಗಲ್ರಾನಿ ಎರಡನೇ ಮಗುವಿಗೆ ತಾಯಿಯಾಗಿದ್ದು ಅನೇಕರು ಸಂಜನಾ ಅವರಿಗೆ ಶುಭಾಶಯವನ್ನು ಕೋರುತ್ತಿದ್ದಾರೆ.

More from Filmibeat

English summary
Joyous news! Sanjjanaa Galrani is now a proud mom of two! The Kannada actress has welcomed a baby girl after having a boy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X