For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಕೊರೊನಾ ಸಂಕಷ್ಟದಲ್ಲಿ ಸಂಜನಾ ಗಲ್ರಾನಿ ಸಮಾಜ ಸೇವೆ

  |

  ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ವಾಸ ಅನುಭವಿಸಿ ಇದೀಗ ಜಾಮೀನಿನ ಮೇಲೆ ಹೊರಗಿರುವ ನಟಿ ಸಂಜನಾ ಗಲ್ರಾನಿ ಕೋವಿಡ್ ಸಮಯದಲ್ಲಿ ಜನರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

  ಕೆಲವು ದಿನಗಳ ಹಿಂದಷ್ಟೆ ನಟಿ ರಾಗಿಣಿ ದ್ವಿವೇದಿ ಸಂಕಷ್ಟದಲ್ಲಿರುವವರಿಗೆ ಆಹಾರ ವಿತರಣೆ, ಆಹಾರ ಧಾನ್ಯ ವಿತರಣೆ ಕಾರ್ಯ ಮಾಡುತ್ತಿದ್ದಾರೆ. ಇದೀಗ ನಟಿ ಸಂಜನಾ ಗಲ್ರಾನಿ ಉಚಿತವಾಗಿ ಆಹಾರ ಧಾನ್ಯ ವಿತರಣೆ ಮಾಡುತ್ತಿದ್ದಾರೆ.

  ಈ ಬಗ್ಗೆ ಫೇಸ್‌ಬುಕ್‌ನಲ್ಲಿ ವಿಡಿಯೋ ಹಾಕಿರುವ ನಟಿ ಸಂಜನಾ, 'ಈ ಸಮಯದಲ್ಲಿ ಬಹಳ ಮೊದಲ ಅಗತ್ಯವಾಗಿರುವ ಬೆಡ್ ಹಾಗೂ ಆಮ್ಲಜನಕದ ವ್ಯವಸ್ಥೆ ಮಾಡುವ ದಾರಿ ನನಗೆ ಗೊತ್ತಿಲ್ಲ. ಹಾಗಾಗಿ ಈ ಲಾಕ್‌ಡೌನ್ ಅವಧಿಯಲ್ಲಿ ಹಸಿವು ಹೋಗಲಾಡಿಸುವ ಕಾರ್ಯಕ್ಕೆ ಮುಂದಾಗಿದ್ದೇನೆ' ಎಂದಿದ್ದಾರೆ.

  ಉಚಿತವಾಗಿ ದಿನಸಿ ವಿತರಿಸುವ ಕಾರ್ಯ ಮಾಡುತ್ತಿರುವುದಾಗಿ ಹೇಳಿದ ಸಂಜನಾ ತಾವು ವಿತರಣೆ ಮಾಡಲು ತಯಾರು ಮಾಡಿಟ್ಟುಕೊಂಡಿರುವ ದೊಡ್ಡ ದಿನಸಿ ಪ್ಯಾಕೆಟ್‌ಗಳನ್ನು ವಿಡಿಯೋದಲ್ಲಿ ತೋರಿಸಿದ್ದಾರೆ.

  ಸಂಜನಾ ಗಲ್ರಾನಿ ಫೌಂಡೇಶನ್‌ ವತಿಯಿಂದ ಈ ಕಾರ್ಯ ಮಾಡುತ್ತಿದ್ದು, ನನ್ನ ಈ ಕಾರ್ಯಕ್ಕೆ ನನ್ನ ಕುಟುಂಬದವರು ಸಹ ಜೊತೆ ನಿಂತಿದ್ದಾರೆ. ಅವರಿಗೆ ನಾನು ಧನ್ಯವಾದ ಹೇಳಲೇಬೇಕು ಎಂದು ಸಂಜನಾ ಹೇಳಿದ್ದಾರೆ.

  ನಾವು ಯಾರಿಗೆ ಈ ಕಿಟ್‌ಗಳನ್ನು ನೀಡಬೇಕು ಎಂದು ಈಗಾಗಲೇ ಪಟ್ಟಿ ಮಾಡಿಕೊಂಡಿದ್ದೇವೆ. ನಾವೇ ಖುದ್ದಾಗಿ ಮನೆಗಳಿಗೆ ಭೇಟಿ ನೀಡಿ ಅವರ ಪರಿಸ್ಥಿತಿ ಅರಿತು ಯಾರಿಗೆ ದಿನಸಿ ಕಿಟ್‌ನ ಅವಶ್ಯಕತೆ ಇದೆ, ಯಾರಿಗೆ ಇಲ್ಲ ಎಂಬುದನ್ನು ನಿರ್ಧರಿಸಿ ಅವಶ್ಯಕತೆ ಇದ್ದವರಿಗೆ ಮಾತ್ರವೇ ಕಿಟ್ ನೀಡುತ್ತಿದ್ದೇವೆ ಎಂದಿದ್ದಾರೆ.

  ಮಂಗಳಮುಖಿಯರಿಗೆ ದಿನಸಿ ಕಿಟ್ ಗಳನ್ನು ನೀಡಿದ ನಟಿ ರಾಧಿಕಾ ಕುಮಾರಸ್ವಾಮಿ | Filmibeat Kannada

  ಸಂಜನಾ ಗಲ್ರಾನಿ ನೀಡುತ್ತಿರುವ ದಿನಸಿ ಕಿಟ್‌ನಲ್ಲಿ ಐದು ಕೆಜಿ ಅಕ್ಕಿ, ಎರಡು ಕೇಜಿ ಮೈದಾ, ಒಂದು ಲೀಟರ್ ಅಡುಗೆ ಎಣ್ಣೆ, ಒಂದು ಕೇಜಿ ಸಕ್ಕರೆ, ಎರಡು ಕೆಜಿ ಬೇಳೆ ಇದೆ.

  English summary
  Sanjjanaa Galrani distributing grocery kit to people. She posted video in her facebook.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X