»   » 'ದಂಡುಪಾಳ್ಯ-2' ಚಿತ್ರದಲ್ಲಿ ಸಂಜನಾ ಬೆತ್ತಲಾಗಿಲ್ಲ, ಸಾಕ್ಷಿ ಇಲ್ಲಿದೆ

'ದಂಡುಪಾಳ್ಯ-2' ಚಿತ್ರದಲ್ಲಿ ಸಂಜನಾ ಬೆತ್ತಲಾಗಿಲ್ಲ, ಸಾಕ್ಷಿ ಇಲ್ಲಿದೆ

Posted By:
Subscribe to Filmibeat Kannada

'ದಂಡುಪಾಳ್ಯ-2' ಚಿತ್ರದಲ್ಲಿ ನಟಿ ಸಂಜನಾ ಬೆತ್ತಲಾಗಿ ಅಭಿನಯಿಸಿದ್ದಾರೆ ಎಂದು ಹೇಳಲಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಲೀಕ್ ಆಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಂಜನಾ, ನಾನು ಬೆತ್ತಲಾಗಿ ಅಭಿನಯಿಸಿಲ್ಲ, ಇದು ಯಾರೋ ಗ್ರಾಫಿಕ್ಸ್ ಮಾಡಿದ್ದು, ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಇದಕ್ಕೆ ಸಂಬಂಧಪಟ್ಟಂತೆ ಇಂದು ಸುದ್ದಿಗೋಷ್ಠಿ ನಡೆಸಿದ ಸಂಜನಾ 'ದಂಡುಪಾಳ್ಯ-2' ಚಿತ್ರದಲ್ಲಿ ತಾವು ಬೆತ್ತಲಾಗಿ ಅಭಿನಯಿಸಿಲ್ಲ ಎಂಬುದಕ್ಕೆ ಫೋಟೋಗಳನ್ನ ಸಾಕ್ಷಿಯಾಗಿ ನೀಡಿದರು.


ಕನ್ನಡದ ನಟಿ ಸಂಜನಾ ಬೆತ್ತಲೆ ಫೋಟೋ ಲೀಕ್..!


Sanjjanaa Galrani Gives Clarity About 'Dandupalya 2' Controversy.

ಈ ವೇಳೆ ಮಾತನಾಡಿದ ಸಂಜನಾ ''ದೇಹದ ಮುಂಭಾಗವನ್ನು ನಾನು ಮುಚ್ಚಿಕೊಂಡಿದ್ದೇನೆ. ಸಿನಿಮಾ ಶೂಟಿಂಗ್ ವೇಳೆ ಈ ದೃಶ್ಯ ಇರುವುದು ಗೊತ್ತಿದ್ದೇ ಸಹಿ ಮಾಡಿದೆ. ಆದ್ರೆ ಈ ಮಟ್ಟಿಗೆ ಅದು ಸುದ್ದಿಯಾಗುತ್ತದೆ ಎಂದು ಗೊತ್ತಿರಲಿಲ್ಲ. ಇದನ್ನು ಮಾಧ್ಯಮಗಳು ಇನ್ನಷ್ಟು ವೈಭವಿಕರಿಸುತ್ತಿದೆ'' ಎಂದು ಕಿಡಿಕಾರಿದ್ದಾರೆ.


ಈ ಬಗ್ಗೆ 'ದಂಡುಪಾಳ್ಯ-2' ಚಿತ್ರದ ನಿರ್ದೇಶಕರ ಬಳಿ ಮಾತನಾಡಿದ್ದೇನೆ. ವಾಣಿಜ್ಯ ಮಂಡಳಿ ಹಾಗೂ ಸೈಬರ್ ಕ್ರೈಂ ದೂರು ನೀಡುವುದಾಗಿ ತಿಳಿಸಿದ್ದಾರೆ.


'ಬೆತ್ತಲೆ ಸೀನ್' ಬಗ್ಗೆ ನಿಜ ಬಾಯ್ಬಿಟ್ಟ ನಟಿ ಸಂಜನಾ.!

English summary
Actress Sanjjanaa Galrani's Give Clarification About Her Controversy In 'Dandupalya 2' Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada