Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸ್ವಂತ ತಂಗಿ ನಿಕ್ಕಿ ಗಲ್ರಾನಿ ಮದುವೆಗೆ ಯಾಕೆ ಹೋಗಿರಲಿಲ್ಲ ಎಂದು ಕಾರಣ ಬಿಚ್ಚಿಟ್ಟ ಸಂಜನಾ ಗಲ್ರಾನಿ!
ಸಂಜನಾ ಗಲ್ರಾನಿ 2005ರಲ್ಲಿ ಬಿಡುಗಡೆಗೊಂಡ ತೆಲುಗು ಚಿತ್ರ ಸೊಗ್ಗಾಡು ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ನಟಿ. ನಂತರ 2006ಕ್ಕೆ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟಿ ಸಂಜನಾ ಗಲ್ರಾನಿ ಮೊದಲ ಚಿತ್ರ 'ಗಂಡ ಹೆಂಡತಿ'ಯಲ್ಲಿ ಬೋಲ್ಡ್ ಪಾತ್ರ ನಿರ್ವಹಿಸಿ ವೈರಲ್ ಆಗಿದ್ದರು. ಹೀಗೆ ಮೊದಲ ಚಿತ್ರದ ಮೂಲಕವೇ ದೊಡ್ಡ ಮಟ್ಟದಲ್ಲಿ ಸುದ್ದಿಗೀಡಾಗಿದ್ದ ನಟಿ ಸಂಜನಾ ಗಲ್ರಾನಿ ದರ್ಶನ್, ಶಿವ ರಾಜ್‌ಕುಮಾರ್ ಹಾಗೂ ರವಿಚಂದ್ರನ್ ರೀತಿಯ ದೊಡ್ಡ ನಟರ ಚಿತ್ರಗಳಲ್ಲಿ ನಟಿಸಿದರು.
ದೊಡ್ಡ ಹಿಟ್ ಚಿತ್ರಗಳನ್ನು ನೀಡಿ ಹೆಚ್ಚು ಹೆಚ್ಚು ಮುಖ್ಯ ನಾಯಕಿ ಪಾತ್ರವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗದಿದ್ದರೂ ಸಹ ಸಿಕ್ಕ ಪಾತ್ರಗಳನ್ನು ಮಾಡಿ ಸುದ್ದಿಯಲ್ಲಿ ಇರುತ್ತಿದ್ದ ನಟಿ ವೃತ್ತಿ ಜೀವನದಲ್ಲಿ ಬಿರುಗಾಳಿ ಹಾಗೂ ಕಪ್ಪು ಚುಕ್ಕೆಯಾಗಿ ಪರಿಣಮಿಸಿದ್ದು ಡ್ರಗ್ ಕೇಸ್ ವಿಚಾರಣೆಗಾಗಿ ನಟಿ ಮನೆ ಮೇಲೆ ಸಿಸಿಬಿ ದಾಳಿ ನಡೆಸಿದ್ದು ಹಾಗೂ ಬಂಧಿಸಿದ್ದು.
ಇಷ್ಟೆಲ್ಲಾ ಏಳುಬೀಳುಗಳನ್ನು ಕಂಡರೂ ಧೃತಿಗೆಡದ ಸಂಜನಾ ಗಲ್ರಾನಿ ಈಗ ಮೊದಲಿನಂತೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಜೀವನ ಸಾಗಿಸುತ್ತಿದ್ದಾರೆ. ಪತಿ ಅಜಿಜ್ ಪಾಷಾ ಜತೆ ಅನ್ಯೋನ್ಯ ಜೀವನ ಸಾಗಿಸುತ್ತಿರುವ ನಟಿ ಸಂಜನಾ ಗಲ್ರಾನಿಗೆ ಗಂಡು ಮಗು ಕೂಡ ಇದೆ. ಇನ್ನು ಸಂಜನಾ ಗಲ್ರಾನಿ ಅವರ ತಂಗಿ ನಿಕ್ಕಿ ಗಲ್ರಾನಿ ಕೂಡ ನಟಿಯಾಗಿ ಮಿಂಚಿದ್ದಾರೆ. ತೆಲುಗು ನಟ ಆದಿ ಪಿನಿಶೆಟ್ಟಿ ಜತೆ ನಿಕ್ಕಿ ಗಲ್ರಾನಿ ಇದೇ ವರ್ಷ ವೈವಾಹಿಕ ಜೀವನಕ್ಕೂ ಸಹ ಕಾಲಿಟ್ಟಿದ್ದಾರೆ. ಆದರೆ ನಿಕ್ಕಿ ಗಲ್ರಾನಿ ವಿವಾಹಕ್ಕೆ ಅಕ್ಕ ಸಂಜನಾ ಗಲ್ರಾನಿಯೇ ಆಗಮಿಸಿರದೇ ಇದ್ದದ್ದು ಆಶ್ಚರ್ಯ ಹಾಗೂ ಹಲವು ಪ್ರಶ್ನಗಳು ಹುಟ್ಟುವಂತೆ ಮಾಡಿದ್ದವು. ಸದ್ಯ 'ಫಿಲ್ಮ್ ಟ್ರೀ' ಎಂಬ ತೆಲುಗಿನ ಯುಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಸಂಜನಾ ಗಲ್ರಾನಿ ತಂಗಿ ನಿಕ್ಕಿ ಮದುವೆಗೆ ಯಾಕೆ ಹೋಗಿರಲಿಲ್ಲ ಎಂಬುದನ್ನು ತಿಳಿಸಿದ್ದಾರೆ.

ನಿಕ್ಕಿ ಗಲ್ರಾನಿ ಮದುವೆಗೆ ಹೋಗದಿರಲು ಕಾರಣ
ನೀವು ನಿಮ್ಮ ತಂಗಿ ನಿಕ್ಕಿ ಗಲ್ರಾನಿ ಮದುವೆಗೆ ಯಾಕೆ ಹೋಗಿರಲಿಲ್ಲ ಎಂಬ ಪ್ರಶ್ನೆ ಎದುರಾದಾಗ ಉತ್ತರಿಸಿದ ಸಂಜನಾ ಗಲ್ರಾನಿ "ರಾತ್ರಿ 2.30ಕ್ಕೆ ಅವಳ ವಿವಾಹದ ಮುಹೂರ್ತವಿತ್ತು. ಇತ್ತ ಬೆಳಗ್ಗೆ 6.30ಕ್ಕೆ ನನ್ನ ಮಗುವಿನ ಡೆಲಿವರಿಗೆ ಸಮಯ ನೀಡಲಾಗಿತ್ತು. ಹೀಗಾಗಿ ಆ ದಿನ ಮದುವೆಗೆ ಹೋಗಲಾಗಲಿಲ್ಲ. ನಾನು ಬೆಂಗಳೂರಿನಲ್ಲಿದ್ದೆ, ಅವಳು ಚೆನ್ನೈನಲ್ಲಿ ಇದ್ದಳು. ಒಂಬತ್ತು ತಿಂಗಳ ತುಂಬು ಗರ್ಭಿಣಿಯಾಗಿ ಹೇಗೆ ಹತ್ತು ಗಂಟೆ ಪ್ರಯಾಣಿಸುವುದು ಹೇಗೆ ಸಾಧ್ಯ?" ಎಂದು ಹೇಳಿಕೆ ನೀಡಿದರು.

ತಂಗಿ ಸೆಟಲ್ ಆಗಿದ್ದಾಳೆ
ಇನ್ನೂ ಮುಂದುವರಿದು ಮಾತನಾಡಿದ ಸಂಜನಾ ಗಲ್ರಾನಿ ತಂಗಿ ಒಳ್ಳೆ ಜೀವನ ಕಟ್ಟಿಕೊಂಡಿದ್ದಾಳೆ, ಅವಳು ಸೆಟಲ್ ಆಗಿರುವುದನ್ನು ಕಂಡರೆ ಖುಷಿಯಾಗುತ್ತದೆ ಎಂದು ಸಂಜನಾ ಗಲ್ರಾನಿ ಹೇಳಿಕೆ ನೀಡಿದರು. ಆದಿ ಪಿನಿಶೆಟ್ಟಿ ಎಂಬ ತೆಲುಗು ನಟನನ್ನು ಮದುವೆಯಾಗಿರುವ ನಟಿ ನಿಕ್ಕಿ ಗಲ್ರಾನಿ ಮೊದಲಿನಂತೆ ಮದುವೆಯಾದ ನಂತರವೂ ಸಹ ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ಈ ವರ್ಷ ನಿಕ್ಕಿ ಗಲ್ರಾನಿ ನಟನೆಯ ಈಡಿಯಟ್ ಎಂಬ ತಮಿಳು ಚಿತ್ರ ಬಿಡುಗಡೆಗೊಂಡಿದ್ದು, ಸದ್ಯ ಮಲಯಾಳಂನ ಎರಡು ಚಿತ್ರಗಳು, ತಮಿಳಿನ ಒಂದು ಚಿತ್ರ ಹಾಗೂ ತೆಲುಗಿನ ಒಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ.

ಲಿಮ್ಕಾ ದಾಖಲೆ ನೆನೆದ ಸಂಜನಾ
ಇನ್ನು ಇದೇ ಸಂದರ್ಶನದಲ್ಲಿ ನಟಿ ಸಂಜನಾ ಗಲ್ರಾನಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತಾವು ದಾಖಲೆ ನಿರ್ಮಿಸಿದ್ದನ್ನು ಮೆಲುಕು ಹಾಕಿದರು. ತಮ್ಮ ಸ್ನೇಹಿತರ ಗುಂಪಿನ ಜತೆ ಸತತವಾಗಿ 108 ಗಂಟೆ ಸೈಕ್ಲಿಂಗ್ ಮಾಡಿದ್ದಕ್ಕಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರು ಇದೆ ಎಂದು ಸಂಜನಾ ತಿಳಿಸಿದರು.