For Quick Alerts
  ALLOW NOTIFICATIONS  
  For Daily Alerts

  ಎಲ್ಲರಿಗೂ ಬೀಗರ ಊಟ ಹಾಕಿಸುವ ಆಸೆ ಇತ್ತು; ಭಾವುಕರಾದ ನಟಿ ಸಂಜನಾ

  |

  ಬಹುಭಾಷಾ ನಟಿ ಸಂಜನಾ ಗಲ್ರಾನಿ ಸದ್ಯ ಕೊರೊನಾ ಸಂಕಷ್ಟದಲ್ಲಿರುವ ಜನರ ನೆರವಿಗೆ ನಿಂತಿದ್ದಾರೆ. ಒಂದೊತ್ತಿನ ಊಟಕ್ಕೂ ಕಷ್ಟಪಡುತ್ತಿರುವ ಚಿತ್ರರಂಗದ ಕಾರ್ಮಿಕರಿಗೆ ಸಂಜನಾ ಸಹಾಯ ಹಸ್ತ ಚಾಚಿದ್ದಾರೆ. ಡ್ರಗ್ಸ್ ಪ್ರಕರಣ ವಿಚಾರವಾಗಿ ಜೈಲು ಪಾಲಾಗಿದ್ದ ಸಂಜನಾ ಹೊರಬಂದ ಬಳಿಕ ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

  ಕಳೆದ ವರ್ಷ ಸಂಜನಾ ಜೈಲು ಸೇರುತ್ತಿದ್ದಂತೆ ಅವರ ಮದುವೆ ವಿಚಾರ ಕೂಡ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಸಂಜನಾ ಮದುವೆ ಫೋಟೋ ಲೀಕ್ ಆಗುತ್ತಿದ್ದಂತೆ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಅಂದಹಾಗೆ ಸಂಜನಾ ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ವೈದ್ಯ ಅಜೀಜ್ ಪಾಷ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಮದುವೆ ವಿಚಾರ ಮಾತನಾಡಿ ಭಾವುಕರಾಗಿದ್ದಾರೆ. ಮುಂದೆ ಓದಿ..

  ಆನ್‌ಲೈನ್‌ಗೆ ಬಂದು ಹೊಟ್ಟೆಯ ಬೊಜ್ಜು ತೋರಿಸಿದ್ದೇಕೆ ನಟಿ ಸಂಜನಾ ಗಲ್ರಾನಿಆನ್‌ಲೈನ್‌ಗೆ ಬಂದು ಹೊಟ್ಟೆಯ ಬೊಜ್ಜು ತೋರಿಸಿದ್ದೇಕೆ ನಟಿ ಸಂಜನಾ ಗಲ್ರಾನಿ

  ಬೀಗರ ಊಟ ಹಾಕಿಸುವ ಆಸೆ ಇತ್ತು

  ಬೀಗರ ಊಟ ಹಾಕಿಸುವ ಆಸೆ ಇತ್ತು

  ಇಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಸಂಕಷ್ಟದಲ್ಲಿರುವ ಸಿನಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದರು. ಈ ವೇಳೆ ಮದುವೆ ಬಗ್ಗೆ ಮತ್ತು ಮದುವೆ ವಿಚಾರವಾಗಿ ಕಂಡಿದ್ದ ಕನಸಿನ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಎಲ್ಲರಿಗೂ ಬೀಗರ ಊಟ ಹಾಕಿಸುವ ಆಸೆ ಇತ್ತು, ಆದರೆ ಲಾಕ್ ಡೌನ್ ಮತ್ತು ಡ್ರಗ್ಸ್ ಪ್ರಕರಣದಿಂದ ಸಾಧ್ಯವಾಗಿಲ್ಲ ಎಂದಿದ್ದಾರೆ.

  ಮದುವೆ ಬಗ್ಗೆ ದೊಡ್ಡ ಕನಸು ಕಟ್ಟಿದ್ದೆ

  ಮದುವೆ ಬಗ್ಗೆ ದೊಡ್ಡ ಕನಸು ಕಟ್ಟಿದ್ದೆ

  'ಎಲ್ಲರಿಗೂ ಬೀಗರ ಊಟ ಹಾಕಿಸುವ ಆಸೆ ಇತ್ತು. ನನ್ನ ಮದುವೆ ಆಗಿದ್ದು ಲಾಕ್ ಡೌನ್ ನಲ್ಲಿ, ಅಷ್ಟರಲ್ಲೇ ಎರಡನೇ ಲಾಕ್ ಡೌನ್ ಬಂತು. ಮಧ್ಯದಲ್ಲಿ ನನ್ನ ಮೇಲೆ ಆರೋಪ ಬಂತು. ಎಲ್ಲರಿಗೂ ಜೋರಾಗಿ ಊಟ ಹಾಕಿಸಬೇಕು ಎನ್ನುವ ಆಸೆ ಇತ್ತು. ಮದುವೆ ಬಗ್ಗೆ ದೊಡ್ಡ ಕನಸು ಕಟ್ಟಿದ್ದೆ. ಆದರೆ ಆ ಅವಕಾಶವನ್ನು ಭಗವಂತ ಕೊಟ್ಟಿಲ್ಲ' ಎಂದು ಹೇಳುತ್ತಾ ಸಂಜನಾ ಭಾವುಕರಾಗಿದ್ದಾರೆ.

  ವಿಡಿಯೋ: ಕೊರೊನಾ ಸಂಕಷ್ಟದಲ್ಲಿ ಸಂಜನಾ ಗಲ್ರಾನಿ ಸಮಾಜ ಸೇವೆವಿಡಿಯೋ: ಕೊರೊನಾ ಸಂಕಷ್ಟದಲ್ಲಿ ಸಂಜನಾ ಗಲ್ರಾನಿ ಸಮಾಜ ಸೇವೆ

  ಈಗ ಕಷ್ಟದಲ್ಲಿರೋರಿಗೆ ಸಹಾಯ ಮುಖ್ಯ

  ಈಗ ಕಷ್ಟದಲ್ಲಿರೋರಿಗೆ ಸಹಾಯ ಮುಖ್ಯ

  ಮದುವೆಗೆ ಹಾಕಿಸುವ ಊಟವನ್ನು ಸಂಕಷ್ಟದಲ್ಲಿರುವ ಜನರಿಗೆ ಕೊಡೋಣ ಎಂದು ಅಮ್ಮ ಹೇಳಿದ್ರು ಅಂತ ಸಂಜನಾ ಹೇಳಿದ್ದಾರೆ. 'ಅಮ್ಮ ಹೇಳಿದ್ರು, ಸದ್ಯದ ಪರಿಸ್ಥಿತಿಯಲ್ಲಿ ಮದುವೆ ಊಟ ಹಾಕಿಸಲು ಆಗಲ್ಲ. ಕೊರೊನಾ ಯಾವಾಗ ಹೋಗುತ್ತಾ ಗೊತ್ತಿಲ್ಲ. ಜನ ಈಗ ಇದ್ದ ಸ್ಥಿತಿಯಲ್ಲಿ ಅವರಿಗೆ ಸಹಾಯ ಮಾಡುವುದು ತುಂಬಾ ಮುಖ್ಯ' ಎಂದು ಸಂಜನಾ ಹೇಳಿದ್ದಾರೆ.

  ನಮ್ಮಂತ ಚಿಕ್ಕ ಆರ್ಟಿಸ್ಟ್ ಗಳನ್ನ ಯಾಕೆ ಟಾರ್ಗೆಟ್ ಮಾಡ್ತೀರಾ? | Chandu Gowda | Filmibeat Kannada
  ಕಳೆದ ವರ್ಷ ಲಾಕ್ ಡೌನ್ ನಲ್ಲಿ ಮದುವೆ

  ಕಳೆದ ವರ್ಷ ಲಾಕ್ ಡೌನ್ ನಲ್ಲಿ ಮದುವೆ

  ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಸಂಜನಾ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿರುವ ಅಜೀಜ್ ಪಾಷ ಅವರನ್ನು ಮದುವೆಯಾಗಿದ್ದಾರೆ. ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದ ಸಂಜನಾ ಮತ್ತು ಅಜೀಜ್ ಸರಳವಾಗಿ ಕೆಲವೇ ಕೆಲವು ಜನರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

  English summary
  Actress Sanjjanaa Galrani talks about her marriage and Beegara Oota.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X