For Quick Alerts
  ALLOW NOTIFICATIONS  
  For Daily Alerts

  ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದು ನನ್ನ ವೈಯಕ್ತಿಕ ಆಯ್ಕೆ: ಸಂಜನಾ ಗಲ್ರಾನಿ

  |

  ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಸುದ್ದಿಗೆ ಗ್ರಾಸವಾಗಿದ್ದ ನಟಿ ಸಂಜನಾ ಗಲ್ರಾನಿ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.

  ಜಾಮೀನು ದೊರೆತು ಜೈಲಿನಿಂದ ಹೊರ ಬಂದ ಬಳಿಕ ಯಾರ ಕೈಗೂ ಸಿಗದೆ, ಮಾಧ್ಯಮಗಳಿಂದಲೂ ದೂರವಿದ್ದ ನಟಿ ಸಂಜನಾ ಗಲ್ರಾನಿ, ಇದೀಗ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು, ತಾವು ಅನುಭವಿಸಿದ ಕಷ್ಟದ ದಿನಗಳು, ಭವಿಷ್ಯದ ಯೋಜನೆಗಳ ಜೊತೆ-ಜೊತೆಗೆ ತಮ್ಮ ಮದುವೆ ಹಾಗೂ ಇಸ್ಲಾಂ ಮತಾಂತರವಾದ ಬಗ್ಗೆಯೂ ಮಾತನಾಡಿದ್ದಾರೆ.

  ಸಂಜನಾ ಗೆ ಮದುವೆ ಆಗಿದ್ಯಾ? ಯಾರಿದು ವೈದ್ಯ ಅಜೀಜ್?ಸಂಜನಾ ಗೆ ಮದುವೆ ಆಗಿದ್ಯಾ? ಯಾರಿದು ವೈದ್ಯ ಅಜೀಜ್?

  'ಬೆಂಗಳೂರು ಟೈಮ್ಸ್' ಇಂಗ್ಲಿಷ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸಂಜನಾ ಗಲ್ರಾನಿ, 'ನನ್ನ ಮುಂದಿನ ಹಾದಿ ಬಹಳ ಕಠಿಣವಾಗಿರಲಿದೆ ಎಂಬ ಅರಿವಿದೆ. ನನಗೆ ಎದುರುಗೊಳ್ಳುವ ಎಲ್ಲ ಸಮಸ್ಯೆಗಳನ್ನು ನಗುವಿನೊಂದಿಗೆ, ಪ್ರೀತಿಯೊಂದಿಗೆ ಎದುರಿಸಲಿದ್ದೇನೆ. ನನಗೆ ನ್ಯಾಯಾಂಗದಲ್ಲಿ ವಿಶ್ವಾಸವಿದೆ. ನಾನು ಗೆಲುವು ಸಾಧಿಸಲಿದ್ದೇನೆ' ಎಂದಿದ್ದಾರೆ ಸಂಜನಾ.

  ಹೌದು ನಾನು ಎಂಗೇಜ್ ಆಗಿದ್ದೇನೆ: ಸಂಜನಾ

  ಹೌದು ನಾನು ಎಂಗೇಜ್ ಆಗಿದ್ದೇನೆ: ಸಂಜನಾ

  ಸಂಜನಾ ಜೈಲಿನಲ್ಲಿದ್ದಾಗ ಅವರ ಮದುವೆ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು. ಕೆಲವು ಚಿತ್ರಗಳು ಸಹ ವೈರಲ್ ಆಗಿದ್ದವು ಅದರ ಬಗ್ಗೆ ಮಾತನಾಡಿರುವ ಸಂಜನಾ, 'ಹೌದು, ನಾನು ಎಂಗೇಜ್ ಆಗಿದ್ದೇನೆ. ಲಾಕ್‌ಡೌನ್ ಸಮಯದಲ್ಲಿ ಸರಳ ಸಮಾರಂಭದಲ್ಲಿ ಎಂಗೇಜ್‌ಮೆಂಟ್ ಮುಗಿದಿದೆ. ಈ ವಿಷಯವನ್ನು ನನ್ನ ಬಂಧುಗಳಿಗೆ, ಸ್ನೇಹಿತರಿಗೆ ಸಹ ತಿಳಿಸಲಾಗದ ಹಾಗೆ ಆಗಿಬಿಟ್ಟಿತು' ಎಂದು ನೊಂದುಕೊಂಡಿದ್ದಾರೆ.

  ಶೀಘ್ರದಲ್ಲಿಯೇ ಮದುವೆ ಆಗಲಿದ್ದೇನೆ: ಸಂಜನಾ

  ಶೀಘ್ರದಲ್ಲಿಯೇ ಮದುವೆ ಆಗಲಿದ್ದೇನೆ: ಸಂಜನಾ

  'ನಾವು ಶೀಘ್ರದಲ್ಲಿಯೇ ಮದುವೆ ಆಗಲಿದ್ದೇವೆ. ನಮ್ಮ ಮದುವೆ ಅದ್ಧೂರಿಯಾಗಿ ಆಗುವುದಿಲ್ಲ ಬದಲಿಗೆ ಯಾವುದಾದರೂ ಚಾರಿಟೇಬಲ್ ಸೊಸೈಟಿಯಲ್ಲಿ ನಡೆಯಲಿದೆ. ಅವಶ್ಯಕತೆ ಇರುವ ಜನರಿಗೆ ಸಹಾಯ ಮಾಡಿ ನಾವು ನಮ್ಮ ಮದುವೆಯನ್ನು ಸಂಭ್ರಮಿಸಲಿದ್ದೇವೆ' ಎಂದಿದ್ದಾರೆ. ಸಂಜನಾ ಅವರು ವೈದ್ಯ ಅಜೀಜ್ ಅವರೊಟ್ಟಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

  ಡ್ರಗ್ಸ್ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾದ ಸಂಜನಾ-ರಾಗಿಣಿಡ್ರಗ್ಸ್ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾದ ಸಂಜನಾ-ರಾಗಿಣಿ

  ಇಸ್ಲಾಂ ಗೆ ಮತಾಂತರವಾಗಿದ್ದು ನನ್ನ ವೈಯಕ್ತಿಕ ಆಯ್ಕೆ: ಸಂಜನಾ

  ಇಸ್ಲಾಂ ಗೆ ಮತಾಂತರವಾಗಿದ್ದು ನನ್ನ ವೈಯಕ್ತಿಕ ಆಯ್ಕೆ: ಸಂಜನಾ

  'ನಾನು ಅಧ್ಯಾತ್ಮದ ಕಡೆ ಗಮನವಹಿಸುತ್ತಿದ್ದೇನೆ. ಕೆಲವು ತಿಂಗಳುಗಳಿಂದ ನಮಾಜು ಓದುವುದು ಅಭ್ಯಾಸ ಮಾಡಿಕೊಂಡಿದ್ದೇನೆ. ನಾನು ಕರ್ಮ ಮತ್ತು ದೇವರಲ್ಲಿ ನಂಬಿಕೆ ಇಟ್ಟವಳು, ಎಲ್ಲ ಧರ್ಮಗಳನ್ನು ನಾನು ಸಮಾನವಾಗಿ ಗೌರವಿಸುತ್ತೇನೆ. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು ನನ್ನ ವೈಯಕ್ತಿಕ ಆಯ್ಕೆ. ನನ್ನ ಈ ನಿರ್ಧಾರವನ್ನು ರಾಜಕೀಯಗೊಳಿಸುವುದು, ವಿಮರ್ಶೆಗೊಳಪಡಿಸುವುದು ನನಗೆ ಇಷ್ಟವಿಲ್ಲ' ಎಂದಿದ್ದಾರೆ ನಟಿ ಸಂಜನಾ.

  ಪುನೀತ್, ಯಶ್ ಅಭಿಮಾನಿ ಈ ರಿವರ್ಸ್ ಟ್ಯಾಲೆಂಟ್ ಅನುಷ | Filmibeat Kannada
  ಹಲವು ಸಿನಿಮಾ ಆಫರ್‌ಗಳು ಸಂಜನಾ ಮುಂದಿವೆ

  ಹಲವು ಸಿನಿಮಾ ಆಫರ್‌ಗಳು ಸಂಜನಾ ಮುಂದಿವೆ

  ನನ್ನ ಕೈಯಲ್ಲಿ ಕನ್ನಡದ ಹಾಗೂ ತಮಿಳಿನ ಕೆಲವು ಆಫರ್‌ಗಳು ಇವೆ. ಅವುಗಳನ್ನು ಮೊದಲು ಮುಗಿಸಬೇಕಿದೆ. ಅದಾದ ನಂತರ ಹಿಂದಿಯ ಒಂದು ವೆಬ್ ಸರಣಿಯಲ್ಲಿ ನಟಿಸಲಿದ್ದೇನೆ. ಇನ್ನೊಂದು ಹೊಸ ಸಿನಿಮಾದ ಆಫರ್ ಬಂದಿದೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಹ ಸಕ್ರಿಯಳಾಗಬೇಕಿದೆ ಎಂದು ಭವಿಷ್ಯದ ಯೋಜನೆಗಳ ಬಗ್ಗೆ ಹೇಳಿದ್ದಾರೆ ಸಂಜನಾ.

  English summary
  Actress Sanjjanaa Galrani talks about her marriage and her decision to turning to Islam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X