Don't Miss!
- News Kotak Mahindra Bank: ಕೋಟಕ್ ಮಹಿಂದ್ರಾ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಗ್ರಾಹಕರ ಮೇಲೆ ಪರಿಣಾಮಗಳೇನು?
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೆಲುಗಿನ ಪವರ್ ಸ್ಟಾರ್ ಚಿತ್ರದಲ್ಲಿ ಸೀರೆಯಲ್ಲಿ ಸಂಜನಾ!
ಬೆಂಗಳೂರು ಬೆಡಗಿ ಸಂಜನಾ ಗಲ್ ರಾಣಿ ತೆಲುಗಿನಲ್ಲಿ ಮತ್ತೊಮ್ಮೆ ಬಂಪರ್ ಆಫರ್ ಗಿಟ್ಟಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಯಾಕೋ ಇತ್ತೀಚೆಗೆ ಸಂಜನಾ ಸುದ್ದಿ ಸೈಲಂಟ್ ಆಗಿದೆ ಎನ್ನುವಷ್ಟರಲ್ಲೇ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಬಹುನಿರೀಕ್ಷಿತ ಚಿತ್ರ 'ಸರ್ದಾರ್ ಗಬ್ಬರ್ ಸಿಂಗ್' ನಲ್ಲಿ ಮುಖ್ಯ ಪಾತ್ರವೊಂದು ಸಂಜನಾಗೆ ದಕ್ಕಿದೆಯಂತೆ.
ತುಂಡುಡುಗೆ
ತೊಟ್ಟು
ಸೊಂಟ
ಕುಣಿಸುವುದು
ಸಂಜನಾಗೆ
ಸಲೀಸಿನ
ವಿಷಯ.
ಅದರೆ,
ಸರ್ದಾರ್
ಗಬ್ಬರ್
ಸಿಂಗ್
ಸಿನಿಮಾದಲ್ಲಿ
ರಾಜಕುಮಾರಿ
ಪಾತ್ರದಲ್ಲಿ
ಕಾಣಿಸಿಕೊಳ್ಳುತ್ತಿರುವ
ಸಂಜನಾ
ರಾಜಪೋಷಕಿನಲ್ಲಿ
ಕಂಗೊಳಿಸಬೇಕಾಗುತ್ತದೆ.
ಇಂಚು
ಲೆಕ್ಕದಲ್ಲಿ
ಉಡುಗೆ
ಬದಲಿಗೆ
9
ಯಾರ್ಡ್
ಸೀರೆ
ತೊಟ್ಟು,
ಕಣ್ಣು
ಕುಕ್ಕುವ
ಆಭರಣಗಳನ್ನು
ತೊಟ್ಟು
ಸಂಜನಾ
ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ತುಂಬಾ ಮಹತ್ವವಿದೆ. ಚಿತ್ರದ ಆರಂಭದ ಸೀನ್ ನಿಂದ ಕೊನೆ ತನಕ ಕಾಣಿಸಿಕೊಳ್ಳುತ್ತೇನೆ. ಪವನ್ ಅವರೊಂದಿಗೆ ಉತ್ತಮ ದೃಶ್ಯಗಳಿವೆ. ಮೊದಲ ಬಾರಿಗೆ ಇಂಥ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ಸಕತ್ ಥ್ರಿಲ್ ಆಗಿದ್ದೇನೆ ಎಂದು ತಮ್ಮ ಪಾತ್ರದ ಬಗ್ಗೆ ಹೆಮ್ಮೆಯಿಂದ ಸಂಜನಾ ಹೇಳಿದ್ದಾರೆ.
ವಡೋದರಾದ ಲಕ್ಷ್ಮೀ ಪ್ಯಾಲೇಸ್ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಕೆ. ಎಸ್. ರವೀಂದ್ರ ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ.. ಕಾಜಲ್ ಅಗರ್ವಾಲ್ ಚಿತ್ರದ ನಾಯಕಿಯಾಗಿದ್ದರೆ, ಐಟಂ ಸಾಂಗ್ ನಲ್ಲಿ ಲಕ್ಷ್ಮೀ ರೈ ಮೈಕೈ ಕಾಲು ಕುಣಿಸಲಿದ್ದಾರೆ. ಮುಂದಿನ ಬೇಸಿಗೆಗೆ ಕುದುರೆ ಏರಿ ಬರುವ ಸರ್ದಾರ್ ಗಬ್ಬರ್ ಸಿಂಗ್ ನನ್ನು ಕಾಣಬಹುದಾಗಿದೆ.