ತೆರೆಮೇಲೆ ಬಂತು 'ಬಿಗ್ ಬಾಸ್' ಪ್ರಣಯ ಪಕ್ಷಿಗಳ 'ತ್ರಿಕೋನ' ಪ್ರೇಮಕಥೆ!

By Bharath Kumar

'ಬಿಗ್ ಬಾಸ್ ಕನ್ನಡ-4' ಪ್ರಣಯ ಪಕ್ಷಿಗಳು ಈಗ ತೆರೆಮೇಲೆ ಒಟ್ಟಾಗಿ ಬರ್ತಿದ್ದಾರೆ. ಬಿಗ್ ಬಾಸ್ ಪ್ರಣಯ ಪಕ್ಷಿಗಳು ಅಂದಾಕ್ಷಣ ನಿಮ್ಗೆ ಸಂಜನಾ ಮತ್ತು ಭುವನ್ ನೆನಪಾಗ್ತಾರೆ ಅಲ್ವಾ. ಆದ್ರೆ, ಇಲ್ಲಿ ಒಟ್ಟಾಗ್ತಿರುವುದು ಸಂಜನಾ ಮತ್ತು ಒಳ್ಳೆ ಹುಡುಗ ಪ್ರಥಮ್. ಇವರಿಬ್ಬರ 'ಬಿಗ್ ಬಾಸ್ ಲವ್ ಸ್ಟೋರಿ' ಈಗ ತೆರೆಮೇಲೆ ಮೂಡಲಿದೆ.

ಇದರಲ್ಲಿ ಟ್ವಿಸ್ಟ್ ಏನ್ ಗೊತ್ತಾ? ಸಂಜನಾ ಮತ್ತು ಪ್ರಥಮ್ ಇಬ್ಬರ ಇದ್ಮೇಲೆ ಮತ್ತೊಬ್ಬರು ಬರಲೇಬೇಕು. ಎಸ್.....ನಿಮ್ಮ ಊಹೆ ನಿಜಾ. ಈ ಚಿತ್ರಕಥೆಯಲ್ಲಿ ಲವರ್ ಬಾಯ್ ಇಮೇಜ್ ಹೊಂದಿರುವ ಭುವನ್ ಪೊನ್ನಣ್ಣ ಕೂಡ ಇರಲಿದ್ದಾರೆ.

ಏನಿದು? ಸಂಜನಾ, ಪ್ರಥಮ್, ಭುವನ್ ಮೂವರು ಒಂದೇ ತೆರೆಯಲ್ಲಿ ಅಂತ ಶಾಕ್ ಆಗ್ಬೇಡಿ. ಇದು ನಿಜಾ. ಇಂತಹದೊಂದು ಸಾಹಸ ಮಾಡ್ತಿರುವುದು ಕಲರ್ಸ್ ಕನ್ನಡ ವಾಹಿನಿ. ಮುಂದೆ ಓದಿ.....

ಕಲರ್ಸ್ ಕನ್ನಡದಲ್ಲಿ 'ಬಿಗ್ ಬಾಸ್ ಲವ್ ಕಹಾನಿ'

ಕಲರ್ಸ್ ಕನ್ನಡದಲ್ಲಿ 'ಬಿಗ್ ಬಾಸ್ ಲವ್ ಕಹಾನಿ'

'ಬಿಗ್ ಬಾಸ್' ಮನೆಯಲ್ಲಿ ನಾವು-ನೀವೆಲ್ಲ ನೋಡಿದ್ದ ಸಂಜನಾ-ಭುವನ್-ಪ್ರಥಮ್ ನಡುವಿನ ತ್ರಿಕೋನ ಪ್ರೇಮಕಥೆಯನ್ನ ಕಲರ್ಸ್ ಕನ್ನಡ ವಾಹಿನಿಯವರು ತೆರೆಮೇಲೆ ತರಲು ನಿರ್ಧರಿಸಿದ್ದಾರೆ.[ಪ್ರಥಮ್-ಸಂಜನಾ-ಭುವನ್ ತ್ರಿಕೋನ ಪ್ರೇಮಕಥೆಗೆ ಕ್ಲೈಮ್ಯಾಕ್ಸ್ ಕೊಡದ ಕಿಚ್ಚ!]

24 ಎಪಿಸೋಡ್ ಗಳ ಕಿರು ಧಾರವಾಹಿ

24 ಎಪಿಸೋಡ್ ಗಳ ಕಿರು ಧಾರವಾಹಿ

ಇದು 24 ಎಪಿಸೋಡ್ ಗಳ ಕಥೆಯಾಗಿದ್ದು, ಕಿರು ಧಾರವಾಹಿ ರೀತಿಯಲ್ಲಿ ಪ್ರಸಾರವಾಗಲಿದೆ. ಪ್ರತಿವಾರಾಂತ್ಯದಲ್ಲಿ ಶನಿವಾರ ಮತ್ತು ಭಾನುವಾರ 1 ಗಂಟೆಯ ಕಾಲ ಈ ಧಾರವಾಹಿ ಮೂಡಿ ಬರಲಿದೆ.[ಕಿಚ್ಚನ ಎದುರು ಸಂಜನಾ-ಭುವನ್ ಲವ್ ಸ್ಟೋರಿ !]

ಟೈಟಲ್ ಏನು

ಟೈಟಲ್ ಏನು

ಈ ಟ್ರಯಾಂಗಲ್ ಚಿತ್ರಕಥೆಗೆ ಟೈಟಲ್ ಅಂತಿಮವಾಗಿದ್ದು, 'ಸಂಜು ಮತ್ತು ನಾನು' ಎಂದು ಹೆಸರಿಡಲಾಗಿದೆ. ಈಗಾಗಲೇ 'ಸಂಜು ಮತ್ತು ನಾನು' ಧಾರವಾಹಿಯ ಫಸ್ಟ್ ಲುಕ್ ಪೋಸ್ಟರ್ ಕೂಡ ರಿಲೀಸ್ ಆಗಿದೆ.['ಸಂಜನಾ-ಭುವನ್' ಪಾಲಿಗೆ ವಿಲನ್ ಆಯ್ತು ಪ್ರಥಮ್ ಪ್ರೀತಿ.!]

'ಸಂಜು ಮತ್ತು ನಾನು' ಟೀಸರ್ ನೋಡಿ

'ಸಂಜು ಮತ್ತು ನಾನು' ಟೀಸರ್ ನೋಡಿ

ಕೇವಲ ಪೋಸ್ಟರ್ ಮಾತ್ರವಲ್ಲ, 'ಸಂಜು ಮತ್ತು ನಾನು' ಫಸ್ಟ್ ಲುಕ್ ಟೀಸರ್ ಕೂಡ ಬಿಡುಗಡೆಯಾಗಿದ್ದು, ಸಖತ್ ಇಂಟ್ರೆಸ್ಟಿಂಗ್ ಎನಿಸಿದೆ.[ಸಂಜನಾಗೆ 'ಪ್ರೇಮಪತ್ರ' ಬರೆದ 'ಪ್ರಥಮ್': ಎದ್ದುಬಿದ್ದು ನಕ್ಕಿದ ಸುದೀಪ್]

ಸಂಜನಾ ಸುತ್ತಾ ಕಥೆ!

ಸಂಜನಾ ಸುತ್ತಾ ಕಥೆ!

ಸಂಜನಾ ಈ ಧಾರವಾಹಿಯ ಕಥಾನಾಯಕಿಯಾಗಿದ್ದು, ಪ್ರಥಮ್ ಮತ್ತು ಭುವನ್ ಇಬ್ಬರ ನಾಯಕರಿದ್ದಾರೆ. ಹೀಗಾಗಿ, ಒಂದು ನಾಯಕಿಗಾಗಿ ಇಬ್ಬರು ನಟರ ನಡುವೆ ನಡೆಯುವ ರೋಚಕ ಕಥೆ ಇದಾಗಿದೆ. ವಿಶೇಷ ಅಂದ್ರೆ, ಈ ಮೂರು ಪಾತ್ರಗಳನ್ನ ಸ್ವತಃ ಪ್ರಥಮ್, ಸಂಜನಾ ಮತ್ತು ಭುವನ್ ನಿರ್ವಹಿಸಲಿದ್ದಾರೆ.['ಬಿಗ್ ಬಾಸ್' ಮನೆಯಲ್ಲಿ ಸಂಜನಾ ಸ್ವಯಂವರ: ಭುವನ್ ಗದ್ದಲ.!]

ಅತಿ ಶೀಘ್ರದಲ್ಲಿ

ಅತಿ ಶೀಘ್ರದಲ್ಲಿ

ಸದ್ಯ, ಪೋಸ್ಟರ್ ಮತ್ತು ಟೀಸರ್ ಮೂಲಕ ಕುತೂಹಲ ಮೂಡಿಸಿರುವ 'ಸಂಜು ಮತ್ತು ನಾನು' ಆದಷ್ಟೂ ಬೇಗ ಕಿರುತೆರೆಯಲ್ಲಿ ಮೂಡಬರಲಿದೆ. 'ಸಂಜು ಮತ್ತು ನಾನು' ಧಾರವಾಹಿಯ ಅಪ್ ಡೇಟ್ಸ್ ಗಾಗಿ ಫಿಲ್ಮೀ ಬೀಟ್ ಕನ್ನಡ ಓದುತ್ತೀರಿ.....[ಸಂಜು ಮತ್ತು ನಾನು ಫಸ್ಟ್ ಲುಕ್ ಟೀಸರ್ ಇಲ್ಲಿದೆ ನೋಡಿ]

More from Filmibeat

English summary
Colors Kannada Coming up with a weekend fiction, Saturday and Sunday. New Serial of 24 episodes. Pratham, Sanjana and Bhuvan are in lead roles.
Read more about: pratham serial colors channel tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X