ಸ್ವಿಸ್ ಟ್ರಡಿಷನಲ್ ಡ್ರೆಸ್ ಧರಿಸಿ ಸ್ವಿಡ್ಜರ್ ಲ್ಯಾಂಡ್‌ನಲ್ಲಿ ಏನ್ ಮಾಡ್ತಿದ್ದಾರೆ ಡಿಂಪಲ್ ಕ್ವೀನ್ ರಚಿತಾ ರಾಮ್..?
ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದ ಬಹುತೇಕ ಸಿನಿಮಾಗಳಲ್ಲಿ ಅವರೇ ನಾಯಕಿ. ಆದರೆ, ಇತ್ತೀಚೆಗೆ ಸಿನಿಮಾ ಬಿಟ್ಟು ಫಾರಿನ್ ಟ್ರಿಪ್ ಹೋಗಿದ್ದಾರಾ ಎಂದು ಕೇಳ್ತಿದ್ದಾರೆ ಅವರ ಫ್ಯಾನ್ಸ್!. ಅಕ್ಕೆ ಕಾರಣ ಕೂಡ ಇದೆ.
ನಟಿ ರಚಿತಾ ರಾಮ್ ಕಳೆದ ಮೂರು ದಿನಗಳಿಂದ ತಾವು ಫಾರಿನ್‌ನಲ್ಲಿರುವ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ವಿವಿಧ ಕ್ಯಾಪ್ಸನ್ ನೀಡುತ್ತಾ, ಬದುಕನ್ನು ಸಂಭ್ರಮಿಸಬೇಕು ಎಂದು ಬರೆದುಕೊಂಡಿದ್ದಾರೆ. ತಾವು ಸ್ವಿಡ್ಜರ್ ಲ್ಯಾಂಡ್‌ನಲ್ಲಿ ಏಂಜಾಯ್ ಮಾಡುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ.

ಸ್ವಿಡ್ಜರ್ ಲ್ಯಾಂಡ್‌ನಲ್ಲಿ ಡಿಂಪಲ್ ಕ್ವೀನ್ ಮಸ್ತ್ ಮಜಾ!
ನಟಿ ರಚಿತಾ ರಾಮ್ ಸದ್ಯ ಸ್ವಿಡ್ಜರ್ ಲ್ಯಾಂಡ್‌ನಲ್ಲಿ ಇದ್ದು, ಅಲ್ಲಿನ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಫೋಟೋ ಮತ್ತು ವಿಡಿಯೋಗಳಲ್ಲಿ ಸಕತ್ ಖುಷಿಯಲ್ಲಿ ಇರುವಂತೆ ಕಾಣಿಸುತ್ತಿದೆ. ಎರಡು ದಿನಗಳ ಹಿಂದೆ ತಾವು ಕಾರಿನಲ್ಲಿ ಪ್ರಯಾಣ ಮಾಡುತ್ತಾ ಕಣ್ಣು ಹೊಡೆಯುವ ಕೀಟಲೆ ವಿಡಿಯೋವನ್ನು ಹಂಚಿಕೊಂಡಿದ್ದರು. ಆದಾದ ಬೆನ್ನಲ್ಲೆ ಮತ್ತೊಂದು ಫೋಟೋ ಹಾಕಿ ಅಭಿಮಾನಿಗಳಲ್ಲಿ ಪ್ರಶ್ನೆ ಹುಟ್ಟುವಂತೆ ಮಾಡಿದ್ದರು.
ಸ್ವಿಡ್ಜರ್ ಲ್ಯಾಂಡ್‌ನ ಬೀದಿಯಲ್ಲಿ ಕೈ ತುಂಬಾ ಹೂವಿನ ಬೊಕ್ಕೆ ಹಿಡಿದು ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. 'ಹಸ್ತಿ ರಹೋ ತುಮ್ ಹಸ್ತಿ ರಹೋ' ಹಾಡಿನ ಬಿಜಿಎಂಗೆ ಸಕತ್ ಸ್ಟೆಪ್ ಹಾಕಿದ್ದರು. ಅಲ್ಲಿದ್ದ ಸ್ಥಳೀಯರು ಅವರ ಡ್ಯಾನ್ಸ್ ನೋಡಿ ಮನಸೋತಂತೆ ಕಾಣಿಸಿಸುತ್ತಿತ್ತು. ಈ ವಿಡಿಯೋಗೆ ಚಂದದ ಸೀರ್ಷಿಕೆ ಕೂಡ ನೀಡಿದ್ದರು.
"ಗಯ್ಸ್... ನೀವು ನಿಮ್ಮನ್ನು ಸಂಪೂರ್ಣವಾಗಿ ಪ್ರೀತಿಸುತ್ತಿರಿ ಎಂಬುದನ್ನು ಮೊದಲು ತಿಳಿದುಕೊಳ್ಳಿ ಮತ್ತು ಜೀವನ ಹೇಗಿದೆಯೋ ಅದನ್ನು ಹಾಗೆಯೇ ಆನಂದಿಸಿ!" ಎಂದು ಬ್ಲಾಕ್ ಹಾರ್ಟ್ ಎಮೋಜಿ ಹಂಚಿಕೊಂಡಿದ್ದರು. ಇದಕ್ಕೆ "ಒಂದು ಜೀವನವಿದೆ ಅದನ್ನು ಸಂತೋಷದಿಂದ ಜೀವಿಸಿ" ಎಂದು ಹೇಳಿದ್ದರು.

ಸ್ವಿಸ್ ಟ್ರಡಿಷನಲ್ ಡ್ರೆಸ್ ಧರಿಸಿ ಕುಣಿದು ಕುಪ್ಪಳಿಸಿದ ರಚಿತಾ ರಾಮ್
ನಟಿ ರಚಿತಾ ರಾಮ್ ಮತ್ತೊಂದು ಫೋಟೋ ಹಂಚಿಕೊಂಡಿದ್ದು, ಇದರಲ್ಲಿ ಸ್ವಿಡ್ಜರ್ ಲ್ಯಾಂಡ್‌ನ ಟ್ರಡಿಷನಲ್ ಡ್ರೆಸ್ ಸ್ವಿಸ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಸ್ವಿಸ್ ಡ್ರಿಂಡಲ್ ಡ್ರೆಸ್ ಎಂದು ಕರೆಯಲಾಗುತ್ತದೆ ಎಂದು ಅವರೇ ಹೇಳಿಕೊಂಡಿದ್ದಾರೆ. ಈ ಬಟ್ಟೆ ಧರಿಸಿ ಮಂಜು ತುಂಬಿದ ಪ್ರದೇಶದಲ್ಲಿ ಸಕತ್ ಫೋಸ್ ನೀಡಿದ್ದಾರೆ.


Click it and Unblock the Notifications











