»   » ದತ್ತ ಪೀಠ ವಿವಾದ: ಸಂಕೀರ್ತನಾ ಯಾತ್ರೆಗೆ ಗ್ರೀನ್ ಸಿಗ್ನಲ್

ದತ್ತ ಪೀಠ ವಿವಾದ: ಸಂಕೀರ್ತನಾ ಯಾತ್ರೆಗೆ ಗ್ರೀನ್ ಸಿಗ್ನಲ್

Subscribe to Filmibeat Kannada


ಚಿಕ್ಕಮಗಳೂರು, ಅ.23 : ದತ್ತ ಮಾಲಾ ಅಭಿಯಾನ ಆರಂಭಗೊಂಡಿದ್ದು, ಸಂಘ ಪರಿವಾರ ಮತ್ತು ಭಕ್ತರು ಸಂಕೀರ್ತನಾ ಯಾತ್ರೆ ಕೈಗೊಳ್ಳಲು ಮಂಗಳವಾರ(ಅ.23)ಜಿಲ್ಲಾಡಳಿತ ಸಮ್ಮತಿ ಸೂಚಿಸಿದೆ.

18ಷರತ್ತುಗಳನ್ನು ವಿಧಿಸಿರುವ ಜಿಲ್ಲಾಡಳಿತ, ಬುಧವಾರ(ಅ.24)ದಿಂದ ಸಂಕೀರ್ತನಾ ಯಾತ್ರೆ ನಡೆಸಬಹುದು ಎಂದಿದೆ. ಆದರೆ ಈ ಸಂದರ್ಭದಲ್ಲಿ ಯಾವುದೇ ಘೋಷಣೆ ಕೂಗಬಾರದು, ಬೃಹತ್ ಧ್ವಜಗಳ ಬಳಸಬಾರದು, ಸಂಜೆ ನಾಲ್ಕು ಗಂಟೆ ವೇಳೆಗೆ ಪ್ರಕ್ರಿಯೆಗಳ ಪೂರ್ಣಗೊಳಿಸಬೇಕು. ಮಾಲೆ ಧರಿಸಿದವರು ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಸೂಚನೆ ನೀಡಿದೆ.

ಜಿಲ್ಲಾಡಳಿತದ ಕ್ರಮವನ್ನು ಸಂಘ ಪರಿವಾರ ಮತ್ತು ಬಿಜೆಪಿ ಸ್ವಾಗತಿಸಿದೆ. ದತ್ತ ಪೀಠದಲ್ಲಿ ಬಿಗಿ ಪೊಲೀಸ್ ಬಂದೋಬಸ್ತನ್ನು ಮಾಡಲಾಗಿದೆ. ಅ.26ರಂದು ದತ್ತ ಮಾಲಾ ಅಭಿಯಾನ ಪೂರ್ಣಗೊಳ್ಳಲಿದೆ.

(ದಟ್ಸ್ ಕನ್ನಡ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada