»   » ವಿಡಿಯೋ:ಸಂಕ್ರಾಂತಿ ಶುಭಾಶಯ ಹೇಳಿದ ಸ್ಯಾಂಡಲ್ ವುಡ್ ತಾರೆಯರು

ವಿಡಿಯೋ:ಸಂಕ್ರಾಂತಿ ಶುಭಾಶಯ ಹೇಳಿದ ಸ್ಯಾಂಡಲ್ ವುಡ್ ತಾರೆಯರು

Posted By:
Subscribe to Filmibeat Kannada

ಸಂಕ್ರಾಂತಿ ಹಬ್ಬ ಎಂದರೆ, ಎಲ್ಲೆಡೆ ಸಂಭ್ರಮ ಮನೆ ಮಾಡಿರುತ್ತದೆ. ಎಲ್ಲಿ ನೋಡಿದರೂ ಎಳ್ಳು-ಬೆಲ್ಲ, ಕಬ್ಬು, ಪೊಂಗಲ್, ಹೂವು-ಹಣ್ಣು ಹಂಪಲುಗಳದೇ ಕಾರುಬಾರು. ಇನ್ನು ಹಬ್ಬದ ಸಮಯದಲ್ಲಂತೂ ಹೊಸ-ಹೊಸ ಬಟ್ಟೆ ಹಾಕಿ ಕಲರ್ ಫುಲ್ ಆಗಿ ರೆಡಿಯಾಗಿ ಮಿಂಚೋದು ನಮ್ಮ ಹೆಣ್ಣು ಮಕ್ಕಳು.

ಅಂದಹಾಗೆ ಈ ಸಂಕ್ರಾಂತಿ ಹಬ್ಬವನ್ನು ನಮ್ಮ ಸ್ಯಾಂಡಲ್ ವುಡ್ ನ ತಾರೆಯರು ಕೂಡ ವಿಭಿನ್ನವಾಗಿ ಆಚರಿಸುತ್ತಾರೆ. ಅದರಲ್ಲೂ ನಟಿಯರಂತೂ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ತಮ್ಮ ಮನೆ-ಮಂದಿಯರೊಂದಿಗೆ ಆಚರಿಸಿಕೊಳ್ಳುತ್ತಾರೆ.[ಸಂಕ್ರಾಂತಿ ಸಂಭ್ರಮದಲ್ಲಿ 'ಸಿಂಪಲ್ ಹುಡುಗಿ' ಶ್ವೇತಾ ಶ್ರೀವಾತ್ಸವ್]

Sankranthi Festival Greetings Pour from Sandalwood

ನಟಿ ಶ್ವೇತಾ ಶ್ರೀವಾತ್ಸವ್ ಅವರು ಚಿಕ್ಕಂದಿನಲ್ಲಿರುವಾಗ ಸಂಕ್ರಾಂತಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದರಂತೆ. ಆದರೆ ಇದೀಗ ನಟಿಯಾದ ಮೇಲೆ ಹಲವಾರು ಚಿತ್ರಗಳಲ್ಲಿ ಬ್ಯುಸಿಯಾಗಿರುವುದರಿಂದ ಹಬ್ಬ ಆಚರಿಸಲು ಅಷ್ಟಾಗಿ ಸಮಯ ಇಲ್ಲ ಎನ್ನುತ್ತಾರೆ.

ನಟಿ ಕಮ್ ನಿರ್ಮಾಪಕಿ ಪ್ರಿಯಾಂಕ ಉಪೇಂದ್ರ ಅವರು ಕೂಡ ಈ ಬಾರಿ ಹಬ್ಬವನ್ನು ಬಹಳ ಸಿಂಪಲ್ ಆಗಿ ತಮ್ಮ ಮನೆಯಲ್ಲಿಯೇ ಗಂಡ ಉಪೇಂದ್ರ ಮತ್ತು ಮಕ್ಕಳು ಹಾಗೂ ಮನೆ-ಮಂದಿಯೊಂದಿಗೆ ಆಚರಿಸುತ್ತಾರಂತೆ.[ನಿಮ್ಮೆಲ್ಲರಿಗೂ ಎಳ್ಳು ಬೆಲ್ಲ ನೀಡಲು ಬಂದ್ರು ಪ್ರಿಯಾಂಕ ಉಪೇಂದ್ರ]

ಇನ್ನು ನಟಿ ರೂಪಶ್ರೀ ಅವರು ಈ ಬಾರಿ ಹೊಸದಾಗಿ ಮದುವೆ ಆಗಿರುವುದರಿಂದ ಗಂಡ ಹಾಗೂ ತನ್ನ ಹೊಸ ಪರಿವಾರದೊಂದಿಗೆ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಸ್ಯಾಂಡಲ್ ವುಡ್ ನ ತಾರೆಯರಾದ ಅಮೂಲ್ಯ, ಕವಿರಾಜ್, ದಿನಕರ್ ತೂಗುದೀಪ್, ಸೂರಜ್ ಗೌಡ, ಸುಮನಾ ಕಿತ್ತೂರು ಮತ್ತು ನಟಿ ಕಾರುಣ್ಯ ರಾಮ್ ಅವರು ಸಂಕ್ರಾಂತಿ ಎಲ್ಲರ ಬಾಳಲ್ಲಿ ಹೊಸ ಹುಮ್ಮಸ್ಸಿನ ಜೊತೆಗೆ ಸಂತಸವನ್ನು ತರಲಿ ಎಂದು ಮನತುಂಬಿ ಹಾರೈಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ...

English summary
Kannada Actresses Amulya, Kaarunya Ram, & Director cum Lyricist Kaviraj, Wish All Filmibeat Viewers 'A Very Happy Sankranti'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada