ಸಂಕ್ರಾಂತಿ ಹೊಸ್ತಿಲಲ್ಲಿ ಈ ವಾರ ತೆರೆಗೆ ಬರ್ತಿರೋ ಚಿತ್ರಗಳ ಕಂಪ್ಲೀಟ್ ಲಿಸ್ಟ್
ಸುಗ್ಗಿ ಸಂಭ್ರಮ ಹತ್ತಿರವಾಗುತ್ತಿದೆ. ಆಂಧ್ರ, ತೆಲಂಗಾಣ, ತಮಿಳುನಾಡು, ಕರ್ನಾಟಕದಲ್ಲಿ ಸಂಕ್ರಾಂತಿ ಸಂಭ್ರಮ ಜೋರಾಗಿ ಇರುತ್ತದೆ. ಕುಟುಂಬ ಸದಸ್ಯರ ಜೊತೆ ಹಬ್ಬ ಆಚರಿಸಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಲು ಕೆಲವರು ಕಾಯುತ್ತಿದ್ದಾರೆ. ಇಂಟ್ರೆಸ್ಟಿಂಗ್ ಸಿನಿಮಾಗಳು ಈ ವೀಕೆಂಡ್‌ನಲ್ಲೇ ತೆರೆಗೆ ಬರ್ತಿವೆ.
ಹೊಸ ವರ್ಷದ ಮೊದಲ ವಾರ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬರಲಿದೆ. ವರ್ಷದ ಕೊನೆಗೆ ಬಿಡುಗಡೆ ಆಗಿದ್ದ 'ಪುಷ್ಪ', 'ಮ್ಯಾಕ್ಸ್' ಹಾಗೂ 'ಯುಐ' ಚಿತ್ರಗಳೇ ಸದ್ಯ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಸಂಕ್ರಾಂತಿ ಹೊಸ್ತಿಲಲ್ಲಿ ಈ ವಾರ ಯಾವೆಲ್ಲಾ ಸಿನಿಮಾಗಳು ತೆರೆಗೆ ಬರ್ತಿವೆ ಬನ್ನಿ ನೋಡೋಣ.

ಸಂಜು ವೆಡ್ಸ್ ಗೀತಾ-2
ಸಂಕ್ರಾಂತಿಗೆ ಕನ್ನಡದ ಯಾವುದೇ ದೊಡ್ಡ ಸಿನಿಮಾಗಳು ತೆರೆಗೆ ಬರ್ತಿರಲಿಲ್ಲ. ಈ ಆದರೆ ಈ ವರ್ಷ 'ಸಂಜು ವೆಡ್ಸ್ ಗೀತಾ- 2' ಹಾಗೂ 'ಛೂ ಮಂತರ್' ಚಿತ್ರಗಳು ತೆರೆಗೆ ಬರ್ತಿದೆ. ನಾಗಶೇಖರ್ ನಿರ್ದೇಶನದ 'ಸಂಜು ವೆಡ್ಸ್ ಗೀತಾ' ಸಿನಿಮಾ ಹಿಟ್ ಆಗಿತ್ತು. ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ನಟಿಸಿ ಗೆದ್ದಿದ್ದರು. ಅದೇ ಟೈಟಲ್‌ನಲ್ಲಿ ಮತ್ತೊಂದು ಸಿನಿಮಾ ಬರ್ತಿದೆ. ಈ ಬಾರಿ ಕಿಟ್ಟಿ ಜೊತೆ ರಚಿತಾ ರಾಮ್ ನಾಯಕಿಯಾಗಿ ಮಿಂಚಿದ್ದಾರೆ.
ಛೂ ಮಂತರ್
ಶರಣ್ ಅಂದಾಕ್ಷಣ ಬರೀ ಕಾಮಿಡಿ ಸಿನಿಮಾಗಳೇ ನೆನಪಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಕಾಮಿಡಿ ಅಧ್ಯಕ್ಷ ಹಾರರ್ ಚಿತ್ರದಲ್ಲಿ ನಟಿಸಿದ್ದಾರೆ. 'ಕರ್ವ' ಸಿನಿಮಾ ಖ್ಯಾತಿಯ ನವನೀತ್ 'ಛೂ ಮಂತರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅದಿತಿ ಪ್ರಭುದೇವ, ಚಿಕ್ಕಣ್ಣ, ಮೇಘನಾ ಗಾಂವ್ಕರ್ ಚಿತ್ರದಲ್ಲಿದ್ದಾರೆ. ಈ ಎರಡೂ ಚಿತ್ರಗಳ ಜೊತೆ 'ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು' ಎಂಬ ಮತ್ತೊಂದು ಕನ್ನಡ ಸಿನಿಮಾ ಈ ವಾರ ತೆರೆಗೆ ಬರ್ತಿದೆ.
ಗೇಂಮ್ ಚೇಂಜರ್
ತೆಲುಗಿನಲ್ಲಿ ರಾಮ್‌ಚರಣ್ ನಟನೆಯ 'ಗೇಂಮ್ ಚೇಂಜರ್' ಸಿನಿಮಾ ಶುಕ್ರವಾರ ತೆರೆಗೆ ಬರ್ತಿದೆ. ಖ್ಯಾತ ನಿರ್ದೇಶಕ ಶಂಕರ್ ಸಾರಥ್ಯದಲ್ಲಿ ಸಿನಿಮಾ ಮೂಡಿ ಬಂದಿದೆ. ಚಿತ್ರದಲ್ಲಿ ತಂದೆ ಮಗನಾಗಿ ಚರಣ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ದಿಲ್ ರಾಜು ಹಣ ಹೂಡಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಕನ್ನಡಕ್ಕೂ ಸಿನಿಮಾ ಡಬ್ ಆಗಿದ್ದು ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ.

ಡಾಕು ಮಹಾರಾಜ್
ಸುಗ್ಗಿ ಸಂಭ್ರಮಕ್ಕೆ ಬಾಲಯ್ಯ ಕೂಡ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಬಾಬಿ ನಿರ್ದೇಶನದ 'ಡಾಕು ಮಹಾರಾಜ್' ಚಿತ್ರದಲ್ಲಿ ಬಾಲಕೃಷ್ಣ ಅಬ್ಬರಿಸಿದ್ದಾರೆ. ಕನ್ನಡ ನಟಿ ಶ್ರದ್ಧಾ ಶ್ರೀನಾಥ್ ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಂದ ಆಕ್ಷನ್ ಪ್ಯಾಕ್ಡ್ ಟ್ರೈಲರ್ ಹಿಟ್ ಆಗಿತ್ತು. ಭಾನುವಾರ ಈ ಸಿನಿಮಾ ತೆರೆಗಪ್ಪಳಿಸಲಿದೆ.
ತಮಿಳಿನಲ್ಲಿ 3 ಸಿನಿಮಾ
ಕಾಲಿವುಡ್‌ನಲ್ಲಿ ಸಂಕ್ರಾಂತಿಗೆ ಬರಬೇಕಿದ್ದ 'ವಿಡಾಮುಯರ್ಚಿ' ಸಿನಿಮಾ ಮುಂದಕ್ಕೆ ಹೋಗಿದೆ. ಆದರೆ 'ಮದ್ರಾಸ್‌ಕಾರನ್', 'ವಾನನಗಾನ್' ಎಂಬ ಎರಡು ಚಿತ್ರಗಳು ಶುಕ್ರವಾರ ತೆರೆಗೆ ಬರ್ತಿದೆ. ಭಾನುವಾರ ವಿಶಾ್ ನಟನೆಯ 'ಮದಗಜರಾಜ' ಸಿನಿಮಾ ಬಿಡುಗಡೆ ಆಗಲಿದೆ. 12 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಸಿನಿಮಾ ಬಹಳ ತಡವಾಗಿ ಪ್ರೇಕ್ಷಕರ ಮುಂದೆ ಬರ್ತಿದೆ.
ಬಾಲಿವುಡ್‌ನಲ್ಲಿ 2 ಚಿತ್ರ
ಉತ್ತರಭಾರತದಲ್ಲಿ ಸಂಕ್ರಾಂತಿಯನ್ನು ದೊಡ್ಡದಾಗಿ ಆಚರಿಸುವುದಿಲ್ಲ. ಹಾಗಾಗಿ ಸುಗ್ಗಿ ಸಂಭ್ರಮಕ್ಕೆ ಸಾಮಾನ್ಯವಾಗಿ ದೊಡ್ಡ ಬಾಲಿವುಡ್ ಸಿನಿಮಾ ರಿಲೀಸ್ ಆಗಲ್ಲ. ಈ ವಾರ ಸೋನುಸೂದ್ ನಿರ್ದೇಶಿಸಿ ನಟಿಸಿರುವ 'ಫತೇ' ಸಿನಿಮಾ ತೆರೆಗೆ ಬರ್ತಿದೆ. ಜೊತೆಗೆ ಕ್ರೈಂ ಡ್ರಾಮಾ ಸಿನಿಮಾ 'ಸಂತೋಷ್' ಪ್ರೇಕ್ಷಕರನ್ನು ರಂಜಿಸಲಿದೆ.
2 ಮಲಯಾಳಂ ಚಿತ್ರಗಳು
ಅತ್ತ ಮಾಲಿವುಡ್‌ನಲ್ಲೂ ವರ್ಷದ ಆರಂಭ ನೀರಸವಾಗಿದೆ. ಈ ವಾರ 'ಎನ್ನು ಸ್ವಂತಂ ಪುಣ್ಯಲನ್', 'ರೇಖಾಚಿತ್ರಂ' ಹಾಗೂ 'ಎನ್ ವಳಿ ತಾನಿ ವಳಿ' ಎಂಬ ಮೂರು ಹೊಸಬರ ಚಿತ್ರಗಳು ವೀಕೆಂಡ್ ರಿಲೀಸ್ ಆಗುತ್ತಿವೆ.


Click it and Unblock the Notifications











