Sankranthi 2025: ಸುಗ್ಗಿ ಸಂಭ್ರಮಕ್ಕೆ ಸ್ಯಾಂಡಲ್‌ವುಡ್ ಸರ್‌ಪ್ರೈಸ್

ಎಲ್ಲೆಡೆ ಸುಗ್ಗಿ ಸಂಭ್ರಮ ಜೋರಾಗಿದೆ. ಕನ್ನಡ ಚಿತ್ರರಂಗದಲ್ಲಿ ಕೂಡ ವರ್ಷದ ಮೊದಲ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಟ ದರ್ಶನ್ ಆಪ್ತರ ಜೊತೆ ತಮ್ಮ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಹಬ್ಬ ಆಚರಿಸಿ ಕಿಚ್ಚು ಹಾಯಿಸಿದ್ದಾರೆ.

ನಿರ್ದೇಶಕ ಪ್ರೇಮ್ ಮಂಡ್ಯದ ತಮ್ಮ ತೋಟದಲ್ಲಿ ಪತ್ನಿ ರಕ್ಷಿತಾ ಹಾಗೂ ಮಗನ ಜೊತೆಗೆ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ. ಇನ್ನುಳಿದಂತೆ ತಾರೆಯರು ತಮ್ಮ ತಮ್ಮ ಮನೆಗಳಲ್ಲಿ ಪೂಜೆ ನೆರವೇರಿಸಿ ಹಬ್ಬದೂಟ ಮಾಡಿ ಸಂಭ್ರಮಿಸಿದ್ದಾರೆ. ಕಳೆದ ವಾರ ಬಿಡುಗಡೆಯಾದ 'ಛೂ ಮಂತರ್' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ವಾರ 'ಸಂಜು ವೆಡ್ಸ್ ಗೀತಾ-2' ಸಿನಿಮಾ ತೆರೆಗೆ ಬರಲಿದೆ.

Sankranti 2025 vidyapati and 45 movie makers announced release date

ಇನ್ನು ಸಂಕ್ರಾಂತಿ ಸಂಭ್ರಮಕ್ಕೆ ಅಭಿಮಾನಿಗಳಿಗೆ ಒಂದಷ್ಟು ಸರ್‌ಪ್ರೈಸ್‌ಗಳು ಸಿಕ್ಕಿದೆ. ಕೆಲ ದೊಡ್ಡ ಸಿನಿಮಾಗಳನ್ನು ಘೋಷಣೆ ಮಾಡಲಾಗಿದೆ. ಬಹುನಿರೀಕ್ಷಿತ ಸಿನಿಮಾಗಳ ಅಪ್‌ಡೇಟ್ ಸಿಕ್ಕಿದೆ. ಹೊಸ ಹೊ ಪೋಸ್ಟರ್, ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

'45' ಸಿನಿಮಾ ರಿಲೀಸ್ ಡೇಟ್

ಅರ್ಜುನ್ ಜನ್ಯಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ '45' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಜಬರ್ದಸ್ತ್ ಟೀಸರ್ ಮೂಲಕ ಚಿತ್ರತಂಡ ನಿರೀಕ್ಷೆ ಹುಟ್ಟಾಕ್ಕಿದೆ. ಈ ಚಿತ್ರದಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್‌ ಬಿ ಶೆಟ್ಟಿ ಒಟ್ಟಿಗೆ ನಟಿಸಿದ್ದಾರೆ. ಚಿತ್ರದ ಕತೆ ಏನು? ಯಾವ ಜಾನರ್ ಸಿನಿಮಾ? ಎನ್ನುವ ಕುತೂಹಲ ಮೂಡಿದೆ. ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ತರುವುದಾಗಿ ಚಿತ್ರತಂಡ ಹೇಳಿದೆ.

ವೀರ ಚಂದ್ರ ಹಾಸ

ಸಂಗೀತ ನಿರ್ದೇಶಕ ರವಿ ಬಸ್ರೂರು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. 'ನಾಡ ಪ್ರಭು ಶಿವಪುಟ್ಟ ಸ್ವಾಮಿ' ಆಗಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರನ್ನು ತೆರೆಮೇಲೆ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಇದೇ ಮೊದಲ ಬಾರಿಗೆ ಯಕ್ಷಗಾನ ವೈಭವವನ್ನು ತೆರೆಮೇಲೆ ತರಲಾಗುತ್ತಿದೆ. ಎನ್. ಎಸ್ ರಾಜ್‌ಕುಮಾರ್ ಸಿನಿಮಾ ನಿರ್ಮಾಣ ಮಾಡಲಿದ್ದಾರೆ.

Sankranti 2025 vidyapati and 45 movie makers announced release date

ವಿದ್ಯಾಪತಿ

ಧನಂಜಯ್ ನಿರ್ಮಾಣದ 'ವಿದ್ಯಾಪತಿ' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ಬರಲಿದೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿದೆ. ನಾಗಭೂಷಣ್ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ. ಸ್ಟೈಲಿಶ್ ಅವತಾರದಲ್ಲಿ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಇಶಾಂ ಹಾಗೂ ಹಸೀಂ ಖಾನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಪ್ರೊಡಕ್ಷನ್ ನಂ.1

ಶಮಂತ್ ಗೌಡ ನಟನೆಯ ಪ್ರೊಡಕ್ಷನ್ ನಂ.1 ಸಿನಿಮಾ ಘೋಷಣೆ ಆಗಿದೆ. ಇದು ಕನ್ನಡದ ಮೊದಲ ಝಾಂಬಿ ಸಿನಿಮಾ ಎನ್ನಲಾಗ್ತಿದೆ. ಚಿತ್ರಕ್ಕೆ ಆನಂದ್ ರಾಜ್ ಆಕ್ಷನ್ ಕಟ್ ಹೇಳಲಿದ್ದಾರೆ.

'ಎಕ್ಕ' ನಾಯಕಿ ಆಯ್ಕೆ

ಯುವರಾಜ್‌ಕುಮಾರ್ ನಟನೆಯ 'ಎಕ್ಕ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಚಿತ್ರಕ್ಕೆ ಮತ್ತೊಬ್ಬ ನಾಯಕಿಯ ಆಯ್ಕೆ ನಡೆದಿದೆ. ರೋಹಿತ್ ಪದಕಿ ನಿರ್ದೇಶನದ ಚಿತ್ರದ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಚಿತ್ರದ ಮುಹೂರ್ತ ಸಂದರ್ಭದಲ್ಲಿ ಒಬ್ಬ ನಾಯಕಿಯ ಪರಿಚಯ ಆಗಿತ್ತು. ಸಂಪದಾ ಚಿತ್ರದ ಎರಡನೇ ನಾಯಕಿ ಆಗಿದ್ದಾರೆ. ಇದೀಗ ಸಂಕ್ರಾಂತಿ ಸಂಭ್ರಮದಲ್ಲಿ ಸಂಜನಾ ಆನಂದ್ ಚಿತ್ರತಂಡ ಸೇರಿಕೊಂಡಿರುವ ಸುದ್ದಿ ಬಂದಿದೆ.

'ಜೈಲರ್-2' ಘೋಷಣೆ

ನೆಲ್ಸನ್ ನಿರ್ದೇಶನದಲ್ಲಿ ರಜನಿಕಾಂತ್ ನಟನೆಯ 'ಜೈಲರ್-2' ಘೋಷಣೆ ಸಿನಿಮಾ ಘೋಷಣೆ ಆಗಿದೆ. ಸಣ್ಣ ಪ್ರೋಮೊ ಶೂಟ್ ಮಾಡಿ ಸಂಕ್ರಾಂತಿ ಸಂಭ್ರಮದಲ್ಲಿ ಬಿಡುಗಡೆ ಮಾಡಿದ್ದಾರೆ. ನರಸಿಂಹ ಪಾತ್ರದಲ್ಲಿ ಶಿವರಾಜ್‌ಕುಮಾರ್ ಕೂಡ ಮುಂದುವರೆಯುವ ಸಾಧ್ಯತೆಯಿದೆ. ಚಿತ್ರ ಕನ್ನಡಕ್ಕೂ ಡಬ್ ಆಗಿ ಬರಲಿದೆ.

More from Filmibeat

English summary
Upcoming Kannada movies New poster and teaser unveiled for Sankranti 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X