»   » 3ನೇ ಚಿತ್ರಕ್ಕೆ ಚಾಲನೆ ಕೊಟ್ಟ ನಿರ್ದೇಶಕ ಸಂತೋಷ್ ಆನಂದ್ ರಾಮ್

3ನೇ ಚಿತ್ರಕ್ಕೆ ಚಾಲನೆ ಕೊಟ್ಟ ನಿರ್ದೇಶಕ ಸಂತೋಷ್ ಆನಂದ್ ರಾಮ್

Posted By:
Subscribe to Filmibeat Kannada

ಮೊದಲು 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ನಂತರ 'ರಾಜಕುಮಾರ'........ಈ ಎರಡೂ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಮೂರನೇ ಚಿತ್ರ ಯಾವುದು ಎನ್ನುವುದು ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಕೇಳಿ ಬರುತ್ತಿರುವ ಅತಿ ದೊಡ್ಡ ಪ್ರಶ್ನೆ.

ಇದಕ್ಕೆ ಉತ್ತರವನ್ನ ಸ್ವತಃ ನಿರ್ದೇಶಕರು ಕೂಡ ಕೊಟ್ಟಿರಲಿಲ್ಲ. ಆದ್ರೆ, ಫ್ಯಾನ್ಸ್ ಮಾತ್ರ ನಿಮ್ಮ ಮುಂದಿನ ಚಿತ್ರವನ್ನ ಸುದೀಪ್ ಅವರಿಗೆ ಮಾಡಿ, ದರ್ಶನ್ ಅವರಿಗೆ ಮಾಡಿ, ಶಿವಣ್ಣ ಅವರ ಜೊತೆ ಮಾಡಿ ಎಂದು ಆಗ್ರಹಿಸುತ್ತಿದ್ದರು. ಇದಕ್ಕೆಲ್ಲ ತೆರೆ ಎಳೆಯಲು ಮುಂದಾಗಿರುವ ನಿರ್ದೇಶಕರು ಸೈಲಾಂಟ್ ಆಗಿ ಸ್ಕ್ರಿಪ್ಟ್ ಸಿದ್ದ ಮಾಡುತ್ತಿದ್ದಾರೆ.

ವಿಶೇಷ ಏನಪ್ಪಾ ಅಂದ್ರೆ ತಮ್ಮ ಮೂರನೇ ಚಿತ್ರದ ರಿಲೀಸ್ ಡೇಟ್ ಕೂಡ ಘೋಷಣೆ ಮಾಡಿಬಿಟ್ಟಿದ್ದಾರೆ. ಹಾಗಿದ್ರೆ, ಸಕ್ಸಸ್ ಪುಲ್ ನಿರ್ದೇಶಕನ ಮುಂದಿನ ಚಿತ್ರದ ಕಥೆ ಏನು? ಯಾವಾಗ ಬಿಡುಗಡೆ ಎಂದು ಮುಂದೆ ಓದಿ...

2018 ಕ್ರಿಸ್ ಮಸ್ ಗೆ ಮುಂದಿನ ಸಿನಿಮಾ

ಸಂತೋಷ್ ಆನಂದ್ ರಾಮ್ ಅವರ ಮೂರನೇ ಚಿತ್ರ ಬಿಡುಗಡೆಯಾಗುವುದು 2018ರಲ್ಲಿ. ಮುಂದಿನ ವರ್ಷದ ಕ್ರಿಸ್ ಮಸ್ ಹಬ್ಬಕ್ಕೆ ತಮ್ಮ ಮುಂದಿನ ಚಿತ್ರವನ್ನ ಬಿಡುಗಡೆ ಮಾಡುತ್ತಾರಂತೆ.

ಕಥೆ ಬರೆಯಲು ಕೂತ ನಿರ್ದೇಶಕ

ಮೂರನೇ ಚಿತ್ರದ ಹೀರೋ ಯಾರು? ಎಂಬ ದೊಡ್ಡ ಪ್ರಶ್ನೆಯ ನಡುವೆ ಮೂರನೇ ಚಿತ್ರದ ಕಥೆ ಬರೆಯಲು ನಿರ್ದೇಶಕರು ಕೂತಿದ್ದಾರೆ. ತಮ್ಮ ನಿರ್ದೇಶನದ ತಂಡದ ಜೊತೆ ಸ್ಕ್ರಿಪ್ಟ್ ಕೆಲಸ ಆರಂಭಿಸಿದ್ದಾರೆ.

ನೂತನ ಕಚೇರಿ ಕಾರ್ಯಾರಂಭ

ಸಂತೋಷ್ ಆನಂದ್ ರಾಮ್ ಅವರು ನಿರ್ಮಾಣ ಮಾಡಿರುವ ನೂತನ ಕಚೇರಿಯಲ್ಲಿ ತಮ್ಮ ಕಾರ್ಯಾರಂಭವನ್ನ ಆರಂಭಿಸಿದ್ದಾರೆ. ಈ ಕುರಿತು ಫೋಟೋಗಳನ್ನ ಕೂಡ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹೀರೋ ಯಾರು?

ರಾಕಿಂಗ್ ಸ್ಟಾರ್ ಯಶ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಂತರ ಯಾವ ಸ್ಟಾರ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವುದು ಗೌಪ್ಯವಾಗಿದೆ. ಸದ್ಯ, ಸ್ಕ್ರಿಪ್ಟ್ ಆರಂಭಿಸಿರುವ ಸಂತೋಷ್, ಸಂಪೂರ್ಣವಾಗಿ ಮುಗಿಸಿದ ನಂತರ ನಾಯಕನ ಬಗ್ಗೆ ಬಹಿರಂಗಪಡಿಸುತ್ತಾರಂತೆ.

ಶಿವಣ್ಣ-ಸುದೀಪ್ ಹೆಸರು ಚಾಲ್ತಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆ 'ರಣರಂಗ' ಅಂತ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಕೂಡ ಗಾಂಧಿನಗರದಲ್ಲಿದೆ. ಅದರ ಜೊತೆ ಕಿಚ್ಚ ಸುದೀಪ್ ಅವರಿಗೆ ಕಥೆ ಸಿದ್ದಮಾಡುತ್ತಿದ್ದಾರೆ ಎಂದು ಕೂಡ ಹೇಳಲಾಗ್ತಿದೆ. ಆದ್ರೆ, ಸಂತೋಷ್ ಅವರ ಮುಂದಿನ ಯಾರು ಎಂಬುದನ್ನ ಅವರೇ ಹೇಳಬೇಕಿದೆ.

English summary
Successful Director Santhosh Anandram Starts Script Work For his 3rd Movie after Super hit of Raajakumara.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada