»   » ಅಪ್ಪು ಬರ್ತಡೇಗೆ ಪೋಸ್ಟರ್ ರಿಲೀಸ್ ಮಾಡಿದ ಸಂತೋಷ್ ಆನಂದ್ ರಾಮ್

ಅಪ್ಪು ಬರ್ತಡೇಗೆ ಪೋಸ್ಟರ್ ರಿಲೀಸ್ ಮಾಡಿದ ಸಂತೋಷ್ ಆನಂದ್ ರಾಮ್

Posted By:
Subscribe to Filmibeat Kannada
ರಾಜಕುಮಾರ ನಿರ್ದೇಶಕರಿಂದ ಅಪ್ಪು ಹೊಸ ಪೋಸ್ಟರ್ ರಿಲೀಸ್ | Filmibeat Kannada

'ರಾಜಕುಮಾರ' ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಜೊತೆಯಲ್ಲಿ ಮತ್ತೆ ಪುನೀತ್ ರಾಜ್ ಕುಮಾರ್ ಸಿನಿಮಾ ಮಾಡುತ್ತಿದ್ದಾರೆ. ಈ ಮೂಲಕ 'ರಾಜಕುಮಾರ' ಯಶಸ್ಸಿನ ನಂತರ ಮತ್ತೊಮ್ಮೆ ಅದೇ ಕಾಂಬಿನೇಷನ್ ಒಟ್ಟಾಗಿದೆ.

ಮಾರ್ಚ್ 17 ರಂದು ಪುನೀತ್ ಅವರ ಹುಟ್ಟುಹಬ್ಬವಿದೆ. ಹೀಗಾಗಿ, ಅಪ್ಪು ಫ್ಯಾನ್ಸ್ ಹಾಗೂ ಸಿನಿಮಾರಂಗದ ಸ್ನೇಹಿತರೆಲ್ಲ ಸೇರಿ ಬರ್ತಡೇ ಆಚರಿಸುತ್ತಿದ್ದಾರೆ. ತಮ್ಮ ನೆಚ್ಚಿನ ನಟನಿಗೆ 'ರಾಜಕುಮಾರ' ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ವಿಶ್ ಮಾಡಿದ್ದು, ಹೊಸ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರ ಬಾಲ್ಯದ ಫೋಟೋ ಜೊತೆ ಅಪ್ಪು ನಾಯಕನಾದ ಮೇಲಿನ ಕೆಲವು ಫೋಟೋಗಳನ್ನ ಸೇರಿಸಿ ''ರಾಜ್ ರ ರಾಜನಿಗೆ'' ಜನ್ಮದಿನದ ಶುಭಾಶಯಗಳನ್ನ ತಿಳಿಸಿದ್ದಾರೆ.

Santhosh ananddram and puneeth combo movie poster release

'ನಟ ಸಾರ್ವಭೌಮ' ಶೀರ್ಷಿಕೆಯನ್ನ ಅಭಿಮಾನಿಗಳು ಒಪ್ಪಿಕೊಂಡ್ರಾ, ಇಲ್ವಾ.!

ಅಂದ್ಹಾಗೆ, ಇದು ಪುನೀತ್ ರಾಜ್ ಕುಮಾರ್ ಅವರ 28ನೇ ಸಿನಿಮಾ. ಇದಕ್ಕೂ ಮುಂಚೆ ಪವನ್ ಒಡೆಯರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ನಟ ಸಾರ್ವಭೌಮ' ಚಿತ್ರ ತೆರೆಕಾಣಲಿದೆ. ಸಂತೋಷ್ ಆನಂದ್ ರಾಮ್ ಅವರ ಮೂರನೇ ಸಿನಿಮಾ ಇದಾಗಿದ್ದು, ಪುನೀತ್ ಜೊತೆಯಲ್ಲಿ ಎರಡನೇ ಚಿತ್ರವಾಗಿರಲಿದೆ.

'ನಟ ಸಾರ್ವಭೌಮ' ಪುನೀತ್ ಗೆ ಶುಭಕೋರಿದ ಜಗ್ಗೇಶ್

ಇನ್ನು ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲೇ ಮೂಡಿ ಬರಲಿದ್ದು, ಈ ನಿರ್ಮಾಣ ಸಂಸ್ಥೆಯಲ್ಲಿ ತಯಾರಾಗುತ್ತಿರುವ 6ನೇ ಸಿನಿಮಾ. ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿರುವ ಚಿತ್ರತಂಡ ಸದ್ಯದಲ್ಲೇ ಟೈಟಲ್ ಅನಾವರಣಗೊಳ್ಳಲಿದೆ.

English summary
Puneeth Rajkumar's 28th film poster released for his birthday special. The film will be directed by Santosh Anand Ram.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X