ಮೇ 21ಕ್ಕೆ 'ಯುವರತ್ನ' ಸಿನಿಮಾ ರಿಲೀಸ್ ವದಂತಿ: ಸಂತೋಷ್ ಆನಂದ್ ರಾಮ್ ಸ್ಪಷ್ಟನೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ ಯುವರತ್ನ. ಸೂಪರ್ ಹಿಟ್ ರಾಜಕುಮಾರ ಸಿನಿಮಾ ನಂತರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾ.

Recommended Video

ಕೊರೊನ ವಿರುದ್ಧ ಹೋರಾಡಲು ಪುನೀತ್ ಕೊಟ್ಟ ಹಣ ಎಷ್ಟು ? | Puneeth Rajkumar contibutes to fight against Corona

ಯುವರತ್ನ ಸಿನಿಮಾ ಸೆಟ್ಟೇರಿ ವರ್ಷವೆ ಆಗಿದೆ. ಯಾವಾಗ ತೆರೆಗೆ ಬರುತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಅಂದರೆ ಪುನೀತ್ ಹುಟ್ಟುಹಬ್ಬಕ್ಕೆ ಟೀಸರ್ ರಿಲೀಸ್ ಮಾಡಿ ಅಭಿಮಾನಿಗಳ ಮನ ತಣಿಸಿದೆ ಸಿನಿಮಾತಂಡ. ಯುವರತ್ನನನ್ನು ಯಾವಾಗ ನೋಡುವುದೆಂದು ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಇಂದು ಚಿತ್ರದಿಂದ ಅಚ್ಚರಿಯ ಸುದ್ದಿ ಹೊರಬಿದ್ದಿದೆ. ಹೌದು, ಯುವರತ್ನ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಮುಂದೆ ಓದಿ..

ಮೇ 21ಕ್ಕೆ ಯುವರತ್ನ ರಿಲೀಸ್

ಮೇ 21ಕ್ಕೆ ಯುವರತ್ನ ರಿಲೀಸ್

ಮೇ ತಿಂಗಳು 21ಕ್ಕೆ ಸಿನಿಮಾ ಬಹು ನಿರೀಕ್ಷೆಯ ಯುವರತ್ನ ಸಿನಿಮಾ ರಿಲೀಸ್ ಆಗಲಿದೆ ಎಂದು ನಿರ್ದೇಶಕ ಸಂತೋಷ್ ಟ್ವೀಟ್ ಮಾಡಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. "ಪವರ್ ಸ್ಟಾರ್ ಎಲ್ಲಾ ಅಭಿಮಾನಿಗಳು ಯುವರತ್ನ ಸಿನಿಮಾ ರಿಲೀಸ್ ಗೆ ಕಾಯುತ್ತಿರುವವರಿಗೆ ದೊಡ್ಡ ಸರ್ಪ್ರೈಸ್. ಬಹುನಿರೀಕ್ಷೆಯ ಸಿನಿಮಾ ಮೇ 21ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಎಲ್ಲರೂ ಸ್ವಾಗತ ಮಾಡಲು ಸಿದ್ಧರಾಗಿ" ಎಂದು ಸಂತೋಷ್ ಆನಂದ್ ರಾಮ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದು ಏಪ್ರಿಲ್ ಫೂಲ್

ಇದು ಏಪ್ರಿಲ್ ಫೂಲ್

ಸ್ಯಾಂಡಲ್ ವುಡ್ ಬಹುನಿರೀಕ್ಷೆಯ ಸಿನಿಮಾವನ್ನು ಇಟ್ಟುಕೊಂಡು ಸಿನಿ ಪ್ರಿಯರನ್ನು ಏಪ್ರಿಲ್ ಫೂಲ್ ಮಾಡಲಾಗಿದೆ. ಸಂತೋಷ್ ಆನಂದ್ ರಾಮ್ ಅವರ ಫೇಕ್ ಅಕೌಂಟ್ ನಿಂದ ರಿಲೀಸ್ ಡೇಟ್ ಪೋಸ್ಟ್ ಮಾಡಲಿದೆ. ನಿರ್ದೇಶಕರಿಗೆ ಗೊತ್ತಿರದೆ ರಿಲೀಸ್ ಡೇಟ್ ಅನೌನ್ಸ್ ಆಗಿರುವುದನ್ನು ನೋಡಿ ಶಾಕ್ ಆದ ಸಂತೋಷ್ ಆನಂದ್ ರಾಮ್ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸಂತೋಷ್ ಆನಂದ್ ರಾಮ್ ಸ್ಪಷ್ಟನೆ ನೀಡುತ್ತಿದ್ದಂತೆ ಅಭಿಮಾನಿಗಳು ಏಪ್ರಿಲ್ ಫೂಲ್ ವಿಶ್ ಮಾಡಿ ಕಾಲೆಳೆಯುತ್ತಿದ್ದಾರೆ.

ಸಂತೋಷ್ ಆನಂದ್ ರಾಮ್ ಹೇಳಿದ್ದೇನು?

"ಇದು ತಪ್ಪು ಮಾಹಿತಿ ಇನ್ನು 2 ಹಾಡುಗಳ ಚಿತ್ರೀಕರಣ ವಿದ್ದು ಚಿತ್ರದ ಪೋಸ್ಟ್ ಪ್ರೊಡಕ್ಷನ್ ಪಕ್ಕ ಮುಗಿದ ಮೇಲೆ ರಿಲೀಸ್ ದಿನಾಂಕವನ್ನು ಹೊಂಬಾಳೆ ಫಿಲಂಸ್ ತಿಳಿಸುತ್ತದೆ. ಯುವರತ್ನ ಬಿಗ್ಗೆಸ್ಟ್ ರಿಲೀಸ್ ಆಗಿದ್ದು ಪಬ್ಲಿಸಿಟಿ, ಆಡಿಯೋ-ಟ್ರೈಲರ್ ರಿಲೀಸ್ ಎಲ್ಲವುದಕ್ಕೂ ದೂಡ್ಡ ಪ್ಲಾನ್ಸ್ ಇರುವುದರಿಂದ ದಿನಾಂಕ ನಿಗದಿತವಾಗಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.

ಹಾಡಿನ ಚಿತ್ರೀಕರಣ ಬಾಕಿ ಇದೆ

ಹಾಡಿನ ಚಿತ್ರೀಕರಣ ಬಾಕಿ ಇದೆ

ಯುವರತ್ನ ಸಿನಿಮಾದ ಟಾಕಿ ಭಾಗ ಮುಕ್ತಾಯವಾಗಿದೆ. ಆದರೆ ಸಿನಿಮಾದ ಎರಡು ಬಹು ನಿರೀಕ್ಷೆಯ ಹಾಡಿನ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ. ಈ ಹಾಡನ್ನು ವಿದೇಶದಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಎಲ್ಲವು ಅಂದುಕೊಂಡಂತೆ ಆಗಿದ್ದರೆ ಚಿತ್ರೀಕರಣ ಈಗಾಗಲೆ ಮುಕ್ತಾಯವಾಗಬೇಕಿತ್ತು. ಆದರೆ ಕೊರೊನಾ ಹಾವಳಿಯ ಪರಿಣಾಮ ವಿದೇಶಿ ಚಿತ್ರೀಕರಣ ರದ್ದು ಮಾಡಿ ಮುಂದಕ್ಕೆ ಹಾಕಿದೆ. ಮತ್ತೆ ಯಾವಾಗ, ಎಲ್ಲಿ ಚಿತ್ರೀಕರಣ ಮಾಡಲಿದೆ ಎನ್ನುವ ಬಗ್ಗೆ ಚಿತ್ರತಂಡ ಬಹಿರಂಗ ಪಡಿಸಿಲ್ಲ.

More from Filmibeat

English summary
Kannada Actor Puneeth Rajkumar starrer yuvaratna movie fake release date viral. Santhosh Ananddram clarified about fake release date of Yuvaratna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X